ಉಡುಪಿ ಪೇಜಾವರ ಮಠದಲ್ಲಿ ಬೆಂಕಿ ಆಕಸ್ಮಿಕ: ತಪ್ಪಿದ ಅನಾಹುತ
3 ಅಂಗಡಿಗಳಿಗೆ ಬೆಂಕಿ ಆವರಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಹಾಸಿಗೆ, ಸೋಪಾ ಮತ್ತು ಛೇರ್ಗಳು ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸುಮಾರು ಎರಡು ಗಂಟೆಗಳ ಹರಸಾಹಸದಿಂದ ಬೆಂಕಿ ನಂದಿಸಿದೆ.
ಉಡುಪಿ: ಶಾರ್ಟ್ ಸರ್ಕೀಟ್ನಿಂದಾಗಿ ಪೇಜಾವರ ಮಠದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಉಡುಪಿಯ ರಥಬೀದಿಯಲ್ಲಿರುವ ಮಠದ ಎಸಿ (ಏರ್ ಕಂಡಿಷನ್)ಯಲ್ಲಿ ಬೆಂಕಿ ಕಂಡುಬಂದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬೆಂಕಿ ಕೆನ್ನಾಲಿಗೆಗೆ ಮೂರು ಅಂಗಡಿಗಳಿಗೂ ಭಸ್ಮ ಇನ್ನು ಇಂದು (ಮಾರ್ಚ್ 7) ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನಿಲಾದ್ರಿ ನಗರದಲ್ಲಿ ಆಕಸ್ಮಿಕ ಬೆಂಕಿಗೆ ಸೋಫಾ ಅಂಗಡಿಗಳು ಹೊತ್ತಿ ಉರಿದಿವೆ. ಶೆಟರ್ ವೆಲ್ಡಿಂಗ್ ಮಾಡುವಾಗ ಬೆಂಕಿ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, 3 ಅಂಗಡಿಗಳಿಗೆ ಬೆಂಕಿ ಆವರಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಹಾಸಿಗೆ, ಸೋಪಾ ಮತ್ತು ಚೇರ್ಗಳು ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸುಮಾರು ಎರಡು ಗಂಟೆಗಳ ಹರಸಾಹಸದಿಂದ ಬೆಂಕಿ ನಂದಿಸಿದೆ.
ಇದನ್ನೂ ಓದಿ
ರಾಮ ಜನ್ಮಭೂಮಿ ಟ್ರಸ್ಟ್ ಬೇನಾಮಿ ಸಂಸ್ಥೆ ಅಲ್ಲ; ವಿಹೆಚ್ಪಿ ಪುಂಡುಪೋಕರಿಗಳ ಸಂಸ್ಥೆಯಲ್ಲ: ಪೇಜಾವರ ಶ್ರೀ
ವಿದ್ಯುತ್ ತಂತಿ ತಗುಲಿ 4 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಳೆ ನಾಶ.. ಯಾವೂರಲ್ಲಿ?