ವಿದ್ಯುತ್ ತಂತಿ ತಗುಲಿ 4 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಳೆ ನಾಶ.. ಯಾವೂರಲ್ಲಿ?
ಗ್ರಾಮದ ರವೀಂದ್ರ ಅರಕೇರಿ ಎಂಬುವರಿಗೆ ಸೇರಿದ ನಾಲ್ಕು ಎಕರೆ ಕಬ್ಬಿನ ಬೆಳೆ ನಾಶವಾಗಿದ್ದು, ಕಬ್ಬಿನ ಬೆಳಗಾಗಿ 1 ಲಕ್ಷ 20 ಸಾವಿರ ರೂಪಾಯಿ ಖರ್ಚು ಮಾಡಿದ್ದಾಗಿ ರೈತ ಅಳಲು ತೋಡಿಕೊಂಡಿದ್ದಾರೆ. ಘಟನೆಗೆ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ವೇ ಕಾರಣವೆಂದು ರೈತ ಆರೋಪ ಮಾಡುತ್ತಿದ್ದಾರೆ.
ವಿಜಯಪುರ: ವಿದ್ಯುತ್ ಕಂಬದ ತಂತಿಗಳು ತಾಗಿ ಕಬ್ಬಿನ ಬೆಳೆಗೆ ಬೆಂಕಿ ಹೊತ್ತಿದ ಪರಿಣಾಮದಿಂದಾಗಿ ನಾಲ್ಕು ಎಕರೆ ಕಬ್ಬಿನ ಬೆಳೆ ನಾಶವಾಗಿರುವ ಘಟನೆ ಇಂಡಿ ತಾಲೂಕಿನ ಖೇಡಗಿ ಗ್ರಾಮದ ಜಮೀನಿನಲ್ಲಿ ನಡೆದಿದೆ.
ಗ್ರಾಮದ ರವೀಂದ್ರ ಅರಕೇರಿ ಎಂಬುವರಿಗೆ ಸೇರಿದ ನಾಲ್ಕು ಎಕರೆ ಕಬ್ಬಿನ ಬೆಳೆ ನಾಶವಾಗಿದ್ದು, ಕಬ್ಬಿನ ಬೆಳಗಾಗಿ 1 ಲಕ್ಷ 20 ಸಾವಿರ ರೂಪಾಯಿ ಖರ್ಚು ಮಾಡಿದ್ದಾಗಿ ರೈತ ಅಳಲು ತೋಡಿಕೊಂಡಿದ್ದಾರೆ. ಘಟನೆಗೆ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ರೈತ ಆರೋಪ ಮಾಡುತ್ತಿದ್ದಾರೆ.
ಕಬ್ಬಿನ ಬೆಳೆಗೆ ವಿದ್ಯುತ್ ಲೈನ್ಗಳು ತಾಗುತ್ತಿವೆ ಎಂದು ಈ ಹಿಂದೆಯೇ ಅಕ್ಟೋಬರ್‌ನಲ್ಲಿ ಮನವಿ ಕೊಟ್ಟಿದ್ದರೂ ಸಹ ಅಧಿಕಾರಿಗಳು ಈ ಕಡೆ ಗಮನ ಹರಿಸಿಲ್ಲ ಎಂದು ಆರೋಪ ಮಾಡಲಾಗಿದೆ. ಹಾಗಾಗಿ ಹೆಸ್ಕಾಂ ಇಲಾಖೆ ಹಾನಿಯನ್ನು ಭರಿಸಬೇಕೆಂದು ಒತ್ತಾಯ ಮಾಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿ ಬೇರೆಡೆ ವ್ಯಾಪಿಸದಂತೆ ಕ್ರಮ ಕೈಗೊಂಡಿದ್ದಾರೆ.
ಜೋತು ಬಿದ್ದ ವಿದ್ಯುತ್ ತಂತಿಗಳ ಮಧ್ಯೆ ರೈತರ ಪಾಡು ಹೇಳತೀರದು.. GESCOM ಅಧಿಕಾರಿಗಳು ಮಾತ್ರ ಜಾಣ ಕುರುಡು