AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋಯ್ಡಾ ಕೊಳೆಗೇರಿಯಲ್ಲಿ ಅಗ್ನಿ ಅವಘಡ: 100ಕ್ಕಿಂತಲೂ ಹೆಚ್ಚು ಗುಡಿಸಲು ಭಸ್ಮ; ಇಬ್ಬರು ಮಕ್ಕಳು ಸಜೀವ ದಹನ

Noida Fire: ನೋಯ್ಡಾದ ಸೆಕ್ಟರ್ 65ರ ಸಮೀಪದ ಬೆಹಲೋಲ್​ಪುರ್ ಗ್ರಾಮದಲ್ಲಿರುವ ಕೊಳೆಗೇರಿಯಲ್ಲಿ ಭಾನುವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ 100ಕ್ಕಿಂತಲೂ ಹೆಚ್ಚು ಗುಡಿಸಲುಗಳು ಸುಟ್ಟು ಭಸ್ಮವಾಗಿವೆ. ಇಬ್ಬರು ಮಕ್ಕಳು ಸಜೀವ ದಹನವಾಗಿದ್ದಾರೆ.

ನೋಯ್ಡಾ ಕೊಳೆಗೇರಿಯಲ್ಲಿ ಅಗ್ನಿ ಅವಘಡ: 100ಕ್ಕಿಂತಲೂ ಹೆಚ್ಚು ಗುಡಿಸಲು ಭಸ್ಮ; ಇಬ್ಬರು ಮಕ್ಕಳು ಸಜೀವ ದಹನ
ನೋಯ್ಡಾದಲ್ಲಿ ಅಗ್ನಿ ಅವಘಡ ಸಂಭವಿಸಿದ ಜಾಗ
ರಶ್ಮಿ ಕಲ್ಲಕಟ್ಟ
|

Updated on:Apr 11, 2021 | 6:51 PM

Share

ನೋಯ್ಡಾ(ಉತ್ತರ ಪ್ರದೇಶ): ನೋಯ್ಡಾದ ಸೆಕ್ಟರ್ 65ರ ಸಮೀಪದ ಬೆಹಲೋಲ್​ಪುರ್ ಗ್ರಾಮದಲ್ಲಿರುವ ಕೊಳೆಗೇರಿಯಲ್ಲಿ ಭಾನುವಾರ ಅಗ್ನಿ ಅವಘಡ ಸಂಭವಿಸಿ 100ಕ್ಕಿಂತಲೂ ಹೆಚ್ಚು ಗುಡಿಸಲುಗಳು ಸುಟ್ಟು ಭಸ್ಮವಾಗಿವೆ. ಈ ದುರಂತದಲ್ಲಿ ಇಬ್ಬರು ಮಕ್ಕಳು ಸಜೀವ ದಹನವಾಗಿದ್ದಾರೆ. ಬೆಂಕಿ ನಂದಿಸುವ ಕೆಲಸ ಮತ್ತು ರಕ್ಷಣಾ ಕಾರ್ಯಾಚರಣೆ ನಡೆದು ಬರುತ್ತಿದೆ.

ಅಗ್ನಿ ಅವಘಡದಲ್ಲಿ ಮೂರು ವರ್ಷದ ಇಬ್ಬರು ಮಕ್ಕಳು ಸಜೀವ ದಹನವಾಗಿದ್ದು ಅವರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಬೆಂಕಿ ಅವಘಡಕ್ಕೆ ಕಾರಣ ಏನೆಂದು ತಿಳಿದುಬಂದಿಲ್ಲ ಎಂದು ನೊಯ್ಡಾದ ಪೊಲೀಸ್ ಆಯುಕ್ತ ಟ್ವೀಟ್ ಮಾಡಿದ್ದಾರೆ.

ಭಾನುವಾರ ಮಧ್ಯಾಹ್ನ 1ಗಂಟೆಯ ಹೊತ್ತಿಗೆ ಬಹಲೋಲ್ ಪುರ್ ನ ಜೆಜೆ ಕ್ಲಸ್ಟರ್ ನಿವಾಸಿಗಳು ಅಗ್ನಿ ಅವಘಡ ಬಗ್ಗೆ ಅಗ್ನಿ ಶಾಮಕ ದಳದವರಿಗೆ ಫೋನ್ ಮಾಡಿ ತಿಳಿಸಿದ್ದರು. ಬೆಂಕಿ ಕಾಣಿಸಿಕೊಂಡಲೇ ಅಲ್ಲಿನ ನಿವಾಸಿಗಳ ಹೆದರಿ ಓಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಈ ಘಟನೆಯಲ್ಲಿ ಸುಮಾರು 150 ಗುಡಿಸಲುಗಳು ಹಾನಿಯಾಗಿರಬಹುದು. ಈಗ ಬೆಂಕಿ ನಿಯಂತ್ರಣಕ್ಕೆ ಬಂದಿದ್ದು ಗಾಳಿ ಇರುವ ಕಾರಣ ಇನ್ನೂ ಅಲ್ಲಿ ಹೊಗೆಯಾಡುತ್ತಿದೆ ಎಂದು ಸೆಂಟ್ರಲ್ ನೋಯ್ಡಾದ ಹೆಚ್ಚುವರಿ ಪೊಲೀಸ್ ಆಯುಕ್ತ ಹರೀಶ್ ಚಂದರ್ ಹೇಳಿದ್ದಾರೆ.12 ಅಗ್ನಿಶಾಮಕ ದಳದ ವಾಹನಗಳು ಬಂದು ಬೆಂಕಿ ನಂದಿಸಿದ್ದವು.

ಸಿಲಿಂಡರ್ ಸ್ಫೋಟ ಬೆಂಕಿಗೆ ಕಾರಣ? ಮೂಲಗಳ ಪ್ರಕಾರ ಇಲ್ಲಿ ಸುಮಾರು 1600 ಸ್ಲಮ್ ಗಳಿದ್ದು 6 ಸಾವಿರಕ್ಕಿಂತಲೂ ಹೆಚ್ಚು ಜನರು ವಾಸವಾಗಿದ್ದಾರೆ. ಇಲ್ಲಿರುವವರು ಹೆಚ್ಚಿನವರು ಚಿಂದಿ ಆಯುವವರಾಗಿದ್ದಾರೆ. ಗುಡಿಸಲೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡ ಕಾರಣ ಬೆಂಕಿ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ.

(Fire breaks out at Bahlolpur slum cluster in Noida on Sunday 2 Children Dead)

Published On - 6:09 pm, Sun, 11 April 21