ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಪತ್ತೆ ಪ್ರಕರಣ; ಎನ್ಐಎಯಿಂದ ಸಚಿನ್ ವಾಜೆ ಸಹಚರ ರಿಯಾಜ್ ಕಾಜಿ ಬಂಧನ

Riyaz Kazi: ಫೆಬ್ರವರಿ 25ರಂದು ದಕ್ಷಿಣ ಮುಂಬೈಯಲ್ಲಿ ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕವಿರಿಸಿದ್ದ ಕಾರು ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಕಾಜಿ ವಿಶ್ರೋಲಿ ಪ್ರದೇಶದಲ್ಲಿರುವ ನಂಬರ್ ಪ್ಲೇಟ್ ಮಾರುವ ಅಂಗಡಿಗೆ ಹೋಗಿ ಅಲ್ಲಿನ ಮಾಲೀಕರಲ್ಲಿ ಮಾತನಾಡುತ್ತಿರುವುದು ಕಂಡು ಬಂದಿದೆ.

ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಪತ್ತೆ ಪ್ರಕರಣ; ಎನ್ಐಎಯಿಂದ ಸಚಿನ್ ವಾಜೆ ಸಹಚರ ರಿಯಾಜ್ ಕಾಜಿ ಬಂಧನ
ಮುಕೇಶ್ ಅಂಬಾನಿ ನಿವಾಸದ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಕಾರು
Follow us
ರಶ್ಮಿ ಕಲ್ಲಕಟ್ಟ
|

Updated on: Apr 11, 2021 | 7:24 PM

ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಮನೆ ಮುಂದೆ ಎಸ್​ಯುವಿನಲ್ಲಿ ಸ್ಫೋಟಕವಿರಿಸಿದ ಪ್ರಕರಣದಲ್ಲಿ ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರ ಸಹಚರ ಪೊಲೀಸ್ ಅಧಿಕಾರಿ ರಿಯಾಜ್ ಕಾಜಿಯನ್ನು ಎನ್ಐಎ ಭಾನುವಾರ ಬಂಧಿಸಿದೆ. ಅಸಿಸ್ಟೆಂಟ್ ಪೊಲೀಸ್ ಇನ್ಸ್ ಪೆಕ್ಟರ್ (API) ಕಾಜಿಯನ್ನು ಎನ್ಐಎ ಭಾನುವಾರ ವಿಚಾರಣೆಗಾಗಿ ಕರೆದಿದ್ದು, ಆಮೇಲೆ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಹಿಂದೆಯೂ ಕಾಜಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ವಿಚಾರಣೆಗೆ ಕರೆದಿತ್ತು. ಕಳೆದ ತಿಂಗಳಲ್ಲಿ ಮುಂಬೈ ಅಪರಾಧ ದಳವೂ ಇವರ ವಿಚಾರಣೆ ನಡೆಸಿತ್ತು.

ಫೆಬ್ರವರಿ 25ರಂದು ದಕ್ಷಿಣ ಮುಂಬೈಯಲ್ಲಿ ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕವಿರಿಸಿದ್ದ ಕಾರು ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಕಾಜಿ ವಿಶ್ರೋಲಿ ಪ್ರದೇಶದಲ್ಲಿರುವ ನಂಬರ್ ಪ್ಲೇಟ್ ಮಾರುವ ಅಂಗಡಿಗೆ ಹೋಗಿ ಅಲ್ಲಿನ ಮಾಲೀಕರಲ್ಲಿ ಮಾತನಾಡುತ್ತಿರುವುದು ಕಂಡು ಬಂದಿದೆ. ಅಲ್ಲಿ ಅವರು ಡಿಜಿಟಲ್ ವಿಡಿಯೊ ರೆಕಾರ್ಡರ್ ಮ್ತತು ಕಂಪ್ಯೂಟರ್​ನ್ನು ತೆಗೆದುಕೊಂಡು ಹೋಗುತ್ತಿರುವುದು ಕಾಣಿಸುತ್ತದೆ.

ಥಾಣೆಯಲ್ಲಿ ವಾಜೆಯವರ ವಸತಿ ಸಮುಚ್ಚಯದಿಂದ ಸಿಸಿಟಿವಿ ದೃಶ್ಯಗಳನ್ನು ಕಾಜಿ ಸಂಗ್ರಹಿಸುತ್ತಿರುವುದನ್ನು ಕೂಡಾ ಕಾಣಬಹುದಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಂಬಾನಿ ಮನೆ ಮುಂದೆ ಇರಿಸಿದ ಸ್ಫೋಟಕ ತುಂಬಿದ ಕಾರಿಗೆ ನಕಲಿ ನಂಬರ್ ಪ್ಲೇಟ್ ಬಳಸಲು ವಾಜೆ ಅವರಿಗೆ ಕಾಝಿ ಸಹಾಯ ಮಾಡಿದ್ದರು ಎಂದು ತನಿಖಾ ಸಂಸ್ಥೆ ಹೇಳಿದೆ. ರಿಯಾಜ್ ಕಾಜಿಯನ್ನು ಏಪ್ರಿಲ್ 16ರವರೆಗೆ ವಶದಲ್ಲಿರಿಸಲು ಮುಂಬೈ ಕೋರ್ಟ್ ಆದೇಶಿಸಿದೆ

ಮೀಠೀ ನದಿಯಲ್ಲಿ ಹಾರ್ಡ್​ಡಿಸ್ಕ್, ವಾಹನದ ನಂಬರ್​ ಪ್ಲೇಟ್ ಪತ್ತೆ ಸಚಿನ್ ವಾಜೆ ಅವರನ್ನು ಮಾರ್ಚ್ 28  ಭಾನುವಾರ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್​ನ ಮೀಠೀ ನದಿಯ ಬಳಿಗೆ ಕರೆದೊಯ್ದು ರಾಷ್ಟ್ರೀಯ ತನಿಖಾ ದಳದ (The National Investigation Agency – NIA) ಸಿಬ್ಬಂದಿ ತನಿಖೆ ನಡೆಸಿದರು. ವಾಜೆ ಸೂಚನೆಯಂತೆ ನದಿಗೆ ಇಳಿದ ಮುಳುಗುಪಡೆ ಸಿಬ್ಬಂದಿ ಕಂಪ್ಯೂಟರ್​ ಸಿಪಿಯುಗಳು, ವಾಹನದ ನಂಬರ್​ಪ್ಲೇಟ್, ಎರಡು ಡಿವಿಆರ್ ಮತ್ತು ಒಂದು ಲ್ಯಾಪ್​ಟ್ಯಾಪ್ ಪತ್ತೆಹಚ್ಚಿ ದಡಕ್ಕೆ ತಂದರು.

ಪ್ರಕರಣಗಳಿಗೆ ಸಂಬಂಧಿಸಿದ ಸಾಕ್ಷಿಗಳನ್ನು ವಾಜೆ ನದಿಗೆ ಎಸೆದು ಹಾಳು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ನದಿಯ ಬಳಿ ವಸ್ತುಗಳನ್ನು ಹುಡುಕಿ ದಡಕ್ಕೂ ತರುವುದೂ ಸೇರಿದಂತೆ ಇಡೀ ಪ್ರಕರಣದ ತನಿಖೆಯ ಪ್ರತಿ ಹಂತವನ್ನೂ ಎನ್​ಐಎ ವಿಡಿಯೊ ರೆಕಾರ್ಡ್​ ಮಾಡಿಕೊಳ್ಳುತ್ತಿದೆ. ಭಾನುವಾರ ಮಧ್ಯಾಹ್ನ 3.15ಕ್ಕೆ ನಡೆದ ಕಾರ್ಯಾಚರಣೆಯಲ್ಲಿ ಎನ್​ಐಎ ಕರೆತಂದಿದ್ದ 11 ಮುಳುಗುತಜ್ಞರು ನದಿಯ ತಳಮುಟ್ಟಿ ಸಾಕ್ಷ್ಯಗಳನ್ನು ಜಾಲಾಡಿದರು.

ಮೀಠೀ ನದಿಯಲ್ಲಿ ಪತ್ತೆಯಾದ ಸಿಪಿಯು ಮೇಲ್ನೋಟಕ್ಕೆ ಮಹಾರಾಷ್ಟ್ರ ಸರ್ಕಾರಿ ಕಚೇರಿಗಳಲ್ಲಿರುವ ಕಂಪ್ಯೂಟರ್​ಗಳ ಸಿಪಿಯು ವಿನ್ಯಾಸವನ್ನೇ ಹೋಲುತ್ತದೆ. ಪ್ರಕರಣಕ್ಕೆ ಸಂಬಂಧಿಸಿದ ಒಟ್ಟು 11 ವಸ್ತುಗಳನ್ನು ಎನ್​ಐಎ ವಶಕ್ಕೆ ತೆಗೆದುಕೊಂಡಿದೆ.

CCTV ಫೂಟೇಜ್​ನಲ್ಲಿ ಏನಿದೆ? ಸಿಸಿಟಿವಿ ಫೂಟೇಜ್ ಮೂಲಕ ತಿಳಿದುಬಂದಂತೆ, ಸುಮಾರು 3.27 AM ಹೊತ್ತಿಗೆ ಇನ್ನೋವಾ ಕಾರ್ ಮುಲುಂದ್ ಮೂಲಕವಾಗಿ ಥಾಣೆ ಪ್ರವೇಶಿಸಿದೆ. ಕಾರ್​ನ ಒಳಗೆ ಇಬ್ಬರು ಇರುವುದು ತಿಳಿದುಬಂದಿದೆ. ಅರ್ಧ ಘಂಟೆ ಬಳಿಕ, ಅಂದರೆ ಸುಮಾರು 4.03 AM ವೇಳೆಗೆ ಇನ್ನೋವಾ ಕಾರ್ ಮತ್ತೆ ಮುಂಬೈ ಪ್ರವೇಶಿಸಿರುವುದು ಕಂಡುಬಂದಿದೆ. ಆದರೆ ಈ ಬಾರಿ, ವಾಜೆ ಕಳೆದ ಒಂದು ತಿಂಗಳಿನಿಂದ ತನ್ನ ಕಚೇರಿಗೆ ತೆರಳಲು ಬಳಸುತ್ತಿದ್ದ ಕಾರ್​ನ ನಂಬರ್ ಪ್ಲೇಟ್​ನ್ನು ಈ ಕಾರ್ ಹೊಂದಿತ್ತು. ಹಾಗೂ ಮರಳುವ ವೇಳೆ ಇಬ್ಬರಿಗಿಂತ ಹೆಚ್ಚು ಪ್ರಯಾಣಿಕರು ಕಾರ್​ನಲ್ಲಿ ಇದ್ದರು. ಮೂರನೇ ವ್ಯಕ್ತಿಯನ್ನು ವಾಜೆ ಎಂದು ಶಂಕಿಸಲಾಗಿದೆ. ಎಲ್ಲರೂ ಫೇಸ್ ಶೀಲ್ಡ್ ಧರಿಸಿಕೊಂಡಿದ್ದರಿಂದ ಫೂಟೇಜ್​ನಲ್ಲಿ ಮುಖ ಸ್ಪಷ್ಟವಾಗಿ ಕಾಣಿಸಿಲ್ಲ.

ಅಂಬಾನಿ ಮನೆ ಮುಂದೆ ಪಾರ್ಕ್ ಮಾಡಲಾಗಿದ್ದ ಕಾರ್ ಕನಿಷ್ಠ 10 ನಿಮಿಷ ಅಲ್ಲೇ ನಿಂತಿತ್ತು. ಆ ವೇಳೆ ವಾಜೆ ಕೂಡ ಅಲ್ಲೇ ಇದ್ದರು ಎಂದು ತಿಳಿದುಬಂದಿದೆ. 5.18 AM ವೇಳೆಗೆ ಮುಲುಂದ್ ಟೋಲ್​ನಲ್ಲಿ ಇನ್ನೋವಾ ಕಾರ್ ಮತ್ತೆ ಥಾಣೆ ಪ್ರವೇಶಿಸುತ್ತಿರುವುದು ಕಂಡಿದ್ದು, ವಾಜೆಯನ್ನು ಮನೆಗೆ ಡ್ರಾಪ್ ಮಾಡಲು ತೆರಳಿರಬಹುದು ಎಂದು ಅಂದಾಜಿಸಲಾಗಿದೆ.

ಇನ್ನೋವಾ ಕಾರ್​ಗೆ ಬಳಸಿದ್ದ ನಕಲಿ ನಂಬರ್ ಪ್ಲೇಟನ್ನು ವಾಜೆಯ ಸಹಾಯಕ ಪೊಲೀಸ್ ಅಧಿಕಾರಿ ರಿಯಾಜುದ್ದೀನ್ ಕಾಜಿ ವಿಖ್ರೋಲಿ ಶಾಪ್​ನಲ್ಲಿ ಮಾಡಿಸಿದ್ದಾರೆ ಎಂದು ಅನುಮಾನವಿದೆ. ಆ ಸಿಸಿಟಿವಿ ಫೂಟೇಜ್​ನ್ನು ಕೂಡ ಪೊಲೀಸರು ಸಂಗ್ರಹಿಸಿದ್ದಾರೆ. ಮನ್​ಸುಖ್ ಹಿರೇನ್ ಪ್ರಕರಣದಲ್ಲಿ ಬಂಧಿತ ಪೇದೆ ವಿನಾಯಕ್ ಶಿಂಧೆ ಅವರನ್ನೂ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: ಸುಳ್ಳು ಹೆಸರು, ನಕಲಿ ಆಧಾರ್ ಕಾರ್ಡ್ ಬಳಸಿಕೊಂಡು ಸಚಿನ್ ವಾಜೆ ಪಂಚತಾರಾ ಹೊಟೇಲ್​ನಲ್ಲಿ ಉಳಿದಿದ್ದರು; ಎನ್​ಐಎ ಆರೋಪ

ವ್ಯಕ್ತಿ ವ್ಯಕ್ತಿತ್ವ: ಹಿಂದೂ ಮುಸ್ಲಿಂ ಸಾಮರಸ್ಯ, ಸೈಬರ್ ಕ್ರೈಂ ಪತ್ತೆಹಚ್ಚುವಲ್ಲಿ ಏಷ್ಯಾಕ್ಕೇ ಪ್ರಥಮ; ಸಚಿನ್ ವಾಜೆಯ ವೈವಿಧ್ಯಮಯ ವ್ಯಕ್ತಿತ್ವ

(NIA arrested police officer Riyaz Kazi in connection with the case of an explosives laden SUV found near Mukesh Ambani residence)

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!