ತಮಿಳುನಾಡಿನ ಕಾಂಗ್ರೆಸ್ ಅಭ್ಯರ್ಥಿ ಮಾಧವ ರಾವ್ ಕೊವಿಡ್ನಿಂದ ಸಾವು; ಅಭ್ಯರ್ಥಿ ಗೆದ್ದರೆ ಉಪ ಚುನಾವಣೆ
Tamil Nadu Assembly Elections 2021: ಕಳೆದ ತಿಂಗಳು ಕೊರೊನಾವೈರಸ್ ಸೋಂಕು ತಗುಲಿದ್ದ ಮಾಧವ ರಾವ್ ಅವರು ಆಸ್ಪತ್ರೆ ದಾಖಲಾಗಿದ್ದು, ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಚುನಾವಣೆ ಮುಗಿದ ನಂತರ ಅವರು ಸಾವಿಗೀಡಾಗಿರುವುದರಿಂದ ಮರು ಮತದಾನ ನಡೆಯುವುದಿಲ್ಲ.
ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಶ್ರೀವಿಲ್ಲಿಪುತೂರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಪಿಎಸ್ಡಬ್ಲ್ಯು ಮಾಧವ ರಾವ್ ಭಾನುವಾರ ಮೃತಪಟ್ಟಿದ್ದಾರೆ. ಕಳೆದ ತಿಂಗಳು ಕೊರೊನಾವೈರಸ್ ಸೋಂಕು ತಗುಲಿದ್ದ ರಾವ್ ಎರಡು ವಾರಗಳ ಹಿಂದೆ ಆಸ್ಪತ್ರೆ ದಾಖಲಾಗಿದ್ದು, ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಚುನಾವಣೆ ಮುಗಿದ ನಂತರ ಅವರು ಸಾವಿಗೀಡಾಗಿರುವುದರಿಂದ ಮರು ಮತದಾನ ನಡೆಯುವುದಿಲ್ಲ. ಒಂದು ವೇಳೆ ಅವರು ವಿರುಧುನಗರ್ ಜಿಲ್ಲೆಯ ಶ್ರೀವಿಲ್ಲಿಪುತೂರ್ ವಿಧಾನಸಭಾ ಕ್ಷೇತ್ರದಲ್ಲಿ ಮಾಧವ ರಾವ್ ಗೆದ್ದರೆ ಅಲ್ಲಿ ಉಪ ಚುನಾವಣೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.
ಈ ಬಗ್ಗೆ ಟ್ವೀಟ್ ಮಾಡಿದ ತಮಿಳುನಾಡು ಮತ್ತು ಪುದುಚೇರಿ ಎಐಸಿಸಿಸಿ ಉಸ್ತುವಾರಿ ವಹಿಸಿರುವ ಕಾರ್ಯದರ್ಶಿ ಸಂಜಯ್ ದತ್, ತಮಿಳುನಾಡಿನ ಕಾಂಗ್ರೆಸ್ ನಾಯಕ, ಶ್ರೀವಿಲ್ಲಿಪುತೂರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಮಾಧವರಾವ್ ಅವರು ಕೋವಿಡ್ ನಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಅತೀವ ದುಃಖವಾಹಿದೆ ಎಂದಿದೆ. ಅವರ ಕುಟುಂಬಕ್ಕೆ ಸಂತಾಪಗಳು. ನಾವು ಅವರ ದುಃಖದಲ್ಲಿ ಭಾಗಿಯಾಗುತ್ತೇವೆ. ರಾವ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಾರ್ಯದರ್ಶಿ ಟ್ವೀಟ್ ಮಾಡಿದ್ದಾರೆ.
Deeply pained to learn about the sad demise of @INCTamilNadu Leader & #Srivilliputhur Assembly #Congress candidate Shri #MadhavaRao, due to #Covid complications.
Our heartfelt condolences to his family. We stand with them in this hour of grief & pray may his soul rest in peace. pic.twitter.com/rKHlU9CIkN
— Sanjay Dutt (@SanjaySDutt) April 11, 2021
PSW Madhava Rao, the Congress candidate from Srivilliputhur assembly constituency in #TamilNadu, dies due to COVID-19 complications, says his family
— Press Trust of India (@PTI_News) April 11, 2021
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ತಮಿಳುನಾಡಿನ ಕೃಷಿ ಸಚಿವ ದೊರೈಕಣ್ಣು ಕೊವಿಡ್ ನಿಂದ ಮೃತಪಟ್ಟಿದ್ದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.ಇದಕ್ಕಿಂತ ಮುಂಚೆ ಡಿಎಂಕೆ ಶಾಸಕ ಜೆ.ಅನ್ಬಳಗನ್ ಮತ್ತು ಕಾಂಗ್ರೆಸ್ ಸಂಸದ ಎಚ್. ವಸಂತ ಕುಮಾರ್ ಕೊವಿಡ್ ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದರು.
ಕೊರೊನಾ ಎರಡನೇ ಅಲೆ ಪರಿಣಾಮ ತಮಿಳುನಾಡಿನಲ್ಲಿ 6,000 ಹೊಸ ಕೊವಿಡ್ ಪ್ರಕರಣಗಳು ವರದಿಯಾಗಿದೆ. ಶನಿವಾರ 23 ಮಂದಿ ಸಾವಿಗೀಡಾಗಿದ್ದಾರೆ. ಸಕ್ರಿಯ ಪ್ರಕರಣಳ ಸಂಖ್ಯೆ 37,673 ಆಗಿದ್ದು 1,952 ಮಂದಿ ಚೇತರಿಸಿದ್ದಾರೆ . ಚೆನ್ನೈನಲ್ಲಿ 1,977 ಹೊಸ ಪ್ರಕರಣಗಳು ವರದಿ ಆಗಿದ್ದು ಇಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 14,382ಕ್ಕೇರಿದೆ. ಚೆಂಗಲ್ಪೇಟ್ನಲ್ಲಿ 615ಹೊಸ ಪ್ರಕರಣಗಳು ವರದಿ ಆಗಿದ್ದು ತಿರುವಲ್ಲೂರ್ನಲ್ಲಿ 212 ಹೊಸ ಕೊವಿಡ್ ಪ್ರಕರಣ ಪತ್ತೆಯಾಗಿದೆ.
ತಮಿಳುನಾಡಿನ 234ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 6 ರಂದು ಚುನಾವಣೆ ನಡೆದಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: Coronavirus India Update: ಭಾರತದಲ್ಲಿ ಹೊಸ ಕೊವಿಡ್ ಪ್ರಕರಣಗಳ ಸಂಖ್ಯೆ 1.52ಲಕ್ಷ, ಇಂದಿನಿಂದ ಲಸಿಕೆ ಉತ್ಸವ
( Tamil Nadu Srivilliputhur constituency Congress Candidate Madhava Rao Dies Of Covid 19)
Published On - 5:35 pm, Sun, 11 April 21