ಚೆನ್ನೈ: ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು ಭಾರೀ ಅಗ್ನಿ ಅವಘಡ (Fire Accident) ಸಂಭವಿಸಿದೆ. ಬೆಂಕಿ ಹೊತ್ತಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆ ಹಲವಾರು ಅಗ್ನಿಶಾಮಕದಳದ ವಾಹನಗಳು ಈ ಸ್ಥಳಕ್ಕೆ ಧಾವಿಸಿವೆ. ಆಸ್ಪತ್ರೆಯಿಂದ ಎಲ್ಲ ರೋಗಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ತಮಿಳುನಾಡಿನ (Tamil Nadu) ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಜೆ ರಾಧಾಕೃಷ್ಣನ್ ತಿಳಿಸಿದ್ದಾರೆ.
“ಬೆಂಕಿ ಹೊತ್ತಿಕೊಂಡಿರುವ ಆಸ್ಪತ್ರೆಯಿಂದ ಎಲ್ಲಾ ರೋಗಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಹಳೆಯ ಕಟ್ಟಡಗಳ ಪೈಕಿ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೊಸ ಮೂರು ಬ್ಲಾಕ್‌ಗಳು ಬೆಂಕಿಯಿಂದ ಸುರಕ್ಷಿತವಾಗಿವೆ. ಇದುವರೆಗೆ ಯಾವುದೇ ಸಾವು-ನೋವುಗಳು ಅಥವಾ ಗಾಯಗಳು ವರದಿಯಾಗಿಲ್ಲ” ಎಂದು ರಾಧಾಕೃಷ್ಣನ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ANI ತಿಳಿಸಿದೆ.
Tamil Nadu | Fire breaks out at Chennai’s Rajiv Gandhi Government Hospital. Several fire tenders reach the spot. Further details awaited pic.twitter.com/dgGhTQvj84
— ANI (@ANI) April 27, 2022
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳು ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯ ಹೊರಗೆ ಅವ್ಯವಸ್ಥೆಯನ್ನು ಉಂಟುಮಾಡಿತು. ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಆಸ್ಪತ್ರೆಯ ಮೂರನೇ ಬ್ಲಾಕ್‌ನಲ್ಲಿ ಸಿಲಿಂಡರ್‌ಗಳನ್ನು ಇರಿಸಲಾಗಿರುವ ಸ್ಟೋರ್ ರೂಮ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ. ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಕಟ್ಟಡದಲ್ಲಿದ್ದ ಆಮ್ಲಜನಕದ ಸಿಲಿಂಡರ್‌ಗಳಲ್ಲಿ ಒಂದು ಸ್ಫೋಟಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ಆಸ್ಪತ್ರೆಯಿಂದ ಖಚಿತ ಮಾಹಿತಿ ಲಭ್ಯವಾಗಿಲ್ಲ.
All patients have been evacuated safely. The fire broke out in one of the older buildings, the new three blocks are safe from fire. So far no report of casualties or injuries have been reported: Principal Secretary-Health, Dr J Radhakrishnan pic.twitter.com/al6f1Z29R9
— ANI (@ANI) April 27, 2022
ತಮಿಳುನಾಡಿನ ಚೆನ್ನೈನಲ್ಲಿರುವ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಬೆಂಕಿಯನ್ನು ನಿಭಾಯಿಸಲು ಹಲವಾರು ಅಗ್ನಿಶಾಮಕ ಟೆಂಡರ್‌ಗಳನ್ನು ನಿಯೋಜಿಸಲಾಗಿದೆ. ಅಗ್ನಿಶಾಮಕ ದಳದವರು ನೀರನ್ನು ಪೈಪ್ನಲ್ಲಿ ಸಿಂಪಡಿಸುವುದನ್ನು ಮತ್ತು ಹೊಗೆಯ ದಟ್ಟವಾಗಿ ಸುತ್ತಲೂ ಹರಡಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಈ ವಿಡಿಯೋ ಚೆನ್ನೈನ ಆಸ್ಪತ್ರೆಯ ಸುತ್ತಲೂ ಆತಂಕ ಮೂಡಿಸಿದೆ.
ಇದನ್ನೂ ಓದಿ: Horrible Video: ಕಸದ ರಾಶಿಗೆ ಬಿದ್ದ ಬೆಂಕಿಯ ರೌದ್ರತೆ ಇದು; ಅಗ್ನಿ ಜ್ವಾಲೆಯ ಭೀಕರತೆ ನೋಡಿ ಬೆಚ್ಚಿದ ಸ್ಥಳೀಯರು
Viral Video: ಕಟೀಲು ದೇವಸ್ಥಾನದಲ್ಲಿ ಬೆಂಕಿ ಎಸೆದುಕೊಂಡ ಭಕ್ತರು; ಅಗ್ನಿ ಕೇಳಿ ಉತ್ಸವದ ಹಿಂದಿದೆ ಶತಮಾನದ ಇತಿಹಾಸ
Published On - 12:45 pm, Wed, 27 April 22