Horrible Video: ಕಸದ ರಾಶಿಗೆ ಬಿದ್ದ ಬೆಂಕಿಯ ರೌದ್ರತೆ ಇದು; ಅಗ್ನಿ ಜ್ವಾಲೆಯ ಭೀಕರತೆ ನೋಡಿ ಬೆಚ್ಚಿದ ಸ್ಥಳೀಯರು
ಅಲ್ಲೇ ಸಮೀಪದ ಪ್ರದೇಶಗಳಲ್ಲಿ ಕೆಲವು ಗುಡಿಸಲುಗಳಿದ್ದು, ಮಹಿಳೆಯರು ತೆರೆದ ಪ್ರದೇಶದಲ್ಲಿ ಒಲೆಗೆ ಬೆಂಕಿ ಹಾಕಿ ಅಡುಗೆ ಮಾಡುತ್ತಿದ್ದರು. ಜೋರಾದ ಗಾಳಿ ಬಂದಾಗ ಬೆಂಕಿಯ ಕಿಡಿ ಹಾರಿ ಕಸಕ್ಕೆ ಬೆಂಕಿ ಬಿದ್ದಿದೆ ಎಂದು ವರದಿಯಾಗಿದೆ.
ಗುರ್ಗಾಂವ್ನ ಮನೇಸರ್ ಎಂಬಲ್ಲಿ ತ್ಯಾಜ್ಯದ ರಾಶಿಗೆ ಭಾರಿ ಪ್ರಮಾಣದಲ್ಲಿ ಬೆಂಕಿ ತಗುಲಿದೆ. ಮನೇಸರ್ನ ಸೆಕ್ಟರ್ 6ರ ಬಳಿ, ಸೋಮವಾರ ರಾತ್ರಿ ಮೊದಲು ಕಸದ ರಾಶಿಯಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಿಪ್ರವಾಗಿ ವಿಶಾಲವಾದ ಪ್ರದೇಶಕ್ಕೆ ಆವರಿಸಿದೆ. ಸೋಮವಾರ ಸಂಜೆ ಹೊತ್ತಿಗೆ ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಧೂಳು ಸಹಿತ, ಬಿರುಗಾಳಿ ಕಾಣಿಸಿಕೊಂಡಿತ್ತು. ಅದಾದ ಕೆಲವೇ ಹೊತ್ತಲ್ಲಿ ಬೆಂಕಿ ಹೊತ್ತಿಕೊಂಡಿದೆ. 35 ಫೈರ್ ಎಂಜಿನ್ಗಳ ಸಹಾಯದಿಂದ, ಸತತ ಆರು ತಾಸುಗಳ ಕಾಲ ನಿರಂತರ ಶ್ರಮವಹಿಸಿದ ಬಳಿಕ ಬೆಂಕಿ ಆರಿಸಲಾಗಿದೆ. ಬೆಂಕಿಯ ಭಯಾನಕ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದೆ.
ಅಲ್ಲೇ ಸಮೀಪದ ಪ್ರದೇಶಗಳಲ್ಲಿ ಕೆಲವು ಗುಡಿಸಲುಗಳಿದ್ದು, ಮಹಿಳೆಯರು ತೆರೆದ ಪ್ರದೇಶದಲ್ಲಿ ಒಲೆಗೆ ಬೆಂಕಿ ಹಾಕಿ ಅಡುಗೆ ಮಾಡುತ್ತಿದ್ದರು. ಜೋರಾದ ಗಾಳಿ ಬಂದಾಗ ಬೆಂಕಿಯ ಕಿಡಿ ಹಾರಿ ಕಸಕ್ಕೆ ಬೆಂಕಿ ಬಿದ್ದಿದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲ, ಬೆಂಕಿ ವಿಪರೀತವಾಗಿ ಪಸರಿಸಿದ ಬೆನ್ನಲ್ಲೇ, ಸಿಲಿಂಡರ್ ಸ್ಫೋಟಗಳೂ ಆಗಿವೆ. ಯಾವುದೇ ಸಾವು-ನೋವುಗಳ ವರದಿಯಾಗಿಲ್ಲ. ಹಾಗಂತ ಬೆಂಕಿಗೆ ಕಾರಣವೇನು ಎಂಬುದನ್ನೂ ಇನ್ನೂ ಸ್ಥಳೀಯ ಆಡಳಿತ ಸ್ಪಷ್ಟ ಪಡಿಸಿಲ್ಲ.
ಬೆಂಕಿಯ ಮತ್ತು ಅದರಿಂದ ಉಂಟಾದ ದಟ್ಟ ಹೊಗೆಯ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಅದೆಷ್ಟೋ ಮಂದಿ ತಮ್ಮ ಮನೆಯ ಬಾಲ್ಕನಿಗಳಿಗೆ ಬಂದು ನಿಂತು ಫೋಟೋ-ವಿಡಿಯೋ ಸೆರೆ ಹಿಡಿದಿದ್ದಾರೆ. ಅದಲ್ಲಿ ಎಎನ್ಐ ಮಾಧ್ಯಮವೂ ಕೂಡ ಒಂದು ವಿಡಿಯೋವನ್ನು ಶೇರ್ ಮಾಡಿದ್ದು, ಆಕಾಶದೆತ್ತರಕ್ಕೆ ಎದ್ದ ಹೊಗೆಯನ್ನು ಅದರಲ್ಲಿ ನೋಡಬಹುದು. ಇದು ನಿಜಕ್ಕೂ ಭಯಾನಕ ದೃಶ್ಯವೇ ಆಗಿದೆ.
#WATCH | Massive fire breaks out in garbage near sector-6 of Manesar in Gurugram district late last night. 35 fire brigade vehicles present on the spot pic.twitter.com/llofnJIkH8
— ANI (@ANI) April 25, 2022
ಇದನ್ನೂ ಓದಿ: ಋತುವಿಲಾಸಿನಿ : ಸಾವು ಆವರಿಸುವ ಹೊತ್ತಿನಲ್ಲಿ ನೀನು ಹೊರಗಿರಬೇಕು ಅಂತ ಬಯಸುವವಳು ನಾನು
Published On - 9:04 am, Tue, 26 April 22