24ಗಂಟೆಯಲ್ಲಿ ಎರಡನೇ ಅವಘಡ: ಗೋಡೆ ಕುಸಿದು ಇಬ್ಬರು ಸಾವು, ಫ್ಲಾಟ್ ಮಾಲೀಕನ ವಿರುದ್ಧ ಪ್ರಕರಣ ದಾಖಲು
ಮೃತರಲ್ಲಿ ಒಬ್ಬನ ಹೆಸರು ಸುಮಿತ್ ಕುಮಾರ್ (42). ಇವರು ಆನಂದ್ ಪರ್ಬತ್ ನಿವಾಸಿ. ಹಾಗೇ ಇನ್ನೊಬ್ಬರ ಹೆಸರು, ವಿಳಾಸ ಇನ್ನೂ ಗೊತ್ತಾಗಿಲ್ಲ. ಗೋಡೆ ಬಿದ್ದ ಜಾಗದಲ್ಲಿ ಸರಿಯಾಗಿ ಪರಿಶೀಲನೆ ನಡೆಸಲಾಗಿದೆ. ಇವರಿಬ್ಬರನ್ನು ಬಿಟ್ಟರೆ ಇನ್ಯಾರೂ ಅಲ್ಲಿ ಸಿಲುಕಿಲ್ಲ ಎಂದೂ ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ವಾಯುವ್ಯ ಭಾಗದಲ್ಲಿರುವ ಕೇಶವಪುರಂನ ಲಾರೆನ್ಸ್ ಪ್ರದೇಶದಲ್ಲಿ ಫ್ಲಾಟ್ವೊಂದರ ಗೋಡೆ ಕುಸಿದು ಇಬ್ಬರು ಮೃತಪಟ್ಟಿದ್ದಾರೆ. ಕಳೆದ 24 ಗಂಟೆಯಲ್ಲಿ ಇದು ಎರಡನೇ ಗೋಡೆ ಕುಸಿತದ ಅವಘಡವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ರಾತ್ರಿ 11ಗಂಟೆ ಹೊತ್ತಿಗೆ ಗೋಡೆ ಕುಸಿದಿದ್ದು, ಇದರಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದರು. ಇಬ್ಬರನ್ನೂ ದೀಪ್ ಚಾಂದ್ ಬಂಧು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಅಲ್ಲಿಗೆ ಹೋಗುವಷ್ಟೆಲ್ಲಿ ಮೃತಪಟ್ಟಿದ್ದರು ಎಂದೂ ಮಾಹಿತಿ ನೀಡಿದ್ದಾರೆ.
ಮೃತರಲ್ಲಿ ಒಬ್ಬನ ಹೆಸರು ಸುಮಿತ್ ಕುಮಾರ್ (42). ಇವರು ಆನಂದ್ ಪರ್ಬತ್ ನಿವಾಸಿ. ಹಾಗೇ ಇನ್ನೊಬ್ಬರ ಹೆಸರು, ವಿಳಾಸ ಇನ್ನೂ ಗೊತ್ತಾಗಿಲ್ಲ. ಗೋಡೆ ಬಿದ್ದ ಜಾಗದಲ್ಲಿ ಸರಿಯಾಗಿ ಪರಿಶೀಲನೆ ನಡೆಸಲಾಗಿದೆ. ಇವರಿಬ್ಬರನ್ನು ಬಿಟ್ಟರೆ ಇನ್ಯಾರೂ ಅಲ್ಲಿ ಸಿಲುಕಿಲ್ಲ ಎಂದೂ ಪೊಲೀಸರು ತಿಳಿಸಿದ್ದಾರೆ. ಹಾಗೇ, ಘಟನೆಯಲ್ಲಿ ಸ್ಕೂಟರ್ವೊಂದು ಪೂರ್ತಿಯಾಗಿ ಜಖಂ ಆಗಿದೆ. ಸದ್ಯ ಅವಶೇಷಗಳನ್ನೆಲ್ಲ ತೆರವು ಮಾಡಲಾಗುತ್ತಿದ್ದು, ಪೊಲೀಸರು ಫ್ಲಾಟ್ ಮಾಲೀಕನ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ. ಸೋಮವಾರ ಮಧ್ಯಾಹ್ನ ನೈಋತ್ಯ ದೆಹಲಿಯ ಸತ್ಯ ನಿಕೇತನ್ ಪ್ರದೇಶದಲ್ಲಿ ಮೂರು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದು ನಾಲ್ವರು ಗಾಯಗೊಂಡು, ಇಬ್ಬರು ಮೃತಪಟ್ಟಿದ್ದರು. ಈ ಘಟನೆ ನಡೆದ ಒಂದು ದಿನದೊಳಗೆ ಮತ್ತೊಂದು ಘಟನೆ ನಡೆದಿದೆ.
ಇದನ್ನೂ ಓದಿ: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಆತಂಕ: ಅಮೆರಿಕದ USCIRF ಸಂಸ್ಥೆಯಿಂದ ಭಾರತದ ಬಗ್ಗೆ ಸತತ 3ನೇ ಬಾರಿಗೆ ಆಕ್ಷೇಪ
Published On - 9:38 am, Tue, 26 April 22