ಅರವಿಂದ ಕೇಜ್ರಿವಾಲ್ ಮನೆ ಮೇಲಿನ ದಾಳಿಯನ್ನು ತಡೆಯಲು ಪೊಲೀಸರು ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ: ದೆಹಲಿ ಹೈಕೋರ್ಟ್​​ ಛೀಮಾರಿ

ಅರವಿಂದ ಕೇಜ್ರಿವಾಲ್ ಮನೆ ಮೇಲಿನ ದಾಳಿಯನ್ನು ತಡೆಯಲು ಪೊಲೀಸರು ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ: ದೆಹಲಿ ಹೈಕೋರ್ಟ್​​ ಛೀಮಾರಿ
ದೆಹಲಿ ಕೋರ್ಟ್

ಕೆಲವು ಕಿಡಿಗೇಡಿಗಳು ಕೇಜ್ರಿವಾಲ್ ಅವರ ಮನೆಯ ಗೇಟ್ ತಲುಪಿ ಪ್ರದೇಶವನ್ನು ಧ್ವಂಸಗೊಳಿಸುವುದನ್ನು ಮತ್ತು ಸಾರ್ವಜನಿಕ ಆಸ್ತಿಯನ್ನು ನಾಶಪಡಿಸುವುದನ್ನು ತಡೆಯಲು ಪೊಲೀಸ್ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ.

TV9kannada Web Team

| Edited By: Rashmi Kallakatta

Apr 25, 2022 | 6:49 PM

ದೆಹಲಿ: ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಅವರ ನಿವಾಸದ ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು (Delhi Police) ಸಲ್ಲಿಸಿದ ಸ್ಥಿತಿ ವರದಿಗೆ ದೆಹಲಿ ಹೈಕೋರ್ಟ್(Delhi high court) ಸೋಮವಾರ ಅತೃಪ್ತಿ ವ್ಯಕ್ತಪಡಿಸಿದೆ. ಸಿಎಂ ನಿವಾಸ ಮತ್ತು ಅದಕ್ಕೆ ಹೋಗುವ ರಸ್ತೆಯಲ್ಲಿ ಮಾಡಲಾಗಿದ್ದ ಬಂದೋಬಸ್ತ್ ಅಸಮರ್ಪಕವಾಗಿದೆ. ಕೆಲವು ಕಿಡಿಗೇಡಿಗಳು ಕೇಜ್ರಿವಾಲ್ ಅವರ ಮನೆಯ ಗೇಟ್ ತಲುಪಿ ಪ್ರದೇಶವನ್ನು ಧ್ವಂಸಗೊಳಿಸುವುದನ್ನು ಮತ್ತು ಸಾರ್ವಜನಿಕ ಆಸ್ತಿಯನ್ನು ನಾಶಪಡಿಸುವುದನ್ನು ತಡೆಯಲು ಪೊಲೀಸ್ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಸಿಎಂ ನಿವಾಸದ ಮೇಲೆ ನಡೆದ ದಾಳಿಯ ಬಗ್ಗೆ ಎಸ್‌ಐಟಿ ತನಿಖೆಗೆ ಕೋರಿ ಆಪ್ ಶಾಸಕ ಸೌರಭ್ ಭಾರದ್ವಾಜ್ ಸಲ್ಲಿಸಿದ್ದ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ನ್ಯಾಯಮೂರ್ತಿ ನವೀನ್ ಚಾವ್ಲಾ ಅವರಿದ್ದ ಪೀಠ ವಿಚಾರಣೆ ನಡೆಸುತ್ತಿದೆ. ಪೊಲೀಸ್ ಪಡೆ ವಿಫಲವಾಗಿದೆ ಮತ್ತು ಇಲಾಖೆಯು ಏನೂ ಆಗದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ. ಈ ಬಗ್ಗೆ ಪೊಲೀಸ್ ಆಯುಕ್ತರು ವರದಿ ನೀಡಬೇಕು ಎಂದು ಪೀಠ ಹೇಳಿದೆ. ಸಾಂವಿಧಾನಿಕ ಅಧಿಕಾರಿಯೊಬ್ಬರ ನಿವಾಸದಲ್ಲಿ ನಡೆದ ಘಟನೆಯು ಅತ್ಯಂತ ಗೊಂದಲದ ಸ್ಥಿತಿಯಾಗಿದೆ. ಸಿದ್ಧಾಂತವನ್ನು ಲೆಕ್ಕಿಸದೆ ಇದು ನಮ್ಮ ಪ್ರಜಾಪ್ರಭುತ್ವದ ಪ್ರಮುಖ ಅಂಶವಾಗಿದೆ ಎಂದು ನ್ಯಾಯಾಲಯ ಹೇಳಿದೆ.

“ಕೆಲವು ಜವಾಬ್ದಾರಿಯನ್ನು ಸರಿಪಡಿಸಬೇಕಾಗಿದೆ, ಆದ್ದರಿಂದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಏಕೆಂದರೆ ಇದು ಪ್ರಜಾಪ್ರಭುತ್ವದ ಪ್ರಮುಖ ಅಂಶವಾಗಿದೆ. ನಮ್ಮ ಸಿದ್ದಾಂತಗಳು ಏನೇ ಇರಲಿ, ನಾವು ಯಾವುದೇ ಸಿದ್ಧಾಂತಕ್ಕೆ ಸೇರಿದವರಾಗಿರಲಿ.ಪ್ರಧಾನಿ ದೇಶದ ಪ್ರಧಾನಿ ಎಂದು ಹೇಳುವ ಹಾಗೆ ಅವರು ನನ್ನ ಪ್ರಧಾನಿ ಅಲ್ಲ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಇದು ಸಾಂವಿಧಾನಿಕ ಕಚೇರಿಯಾಗಿದ್ದು, ಅದರ ಬಗ್ಗೆ ನಾವು ಕಾಳಜಿ ವಹಿಸುತ್ತೇವೆ ಎಂದು ನ್ಯಾಯಾಲಯ ಹೇಳಿದೆ.

ದೆಹಲಿ ಪೊಲೀಸರು ಸಲ್ಲಿಸಿದ ಸ್ಥಿತಿ ವರದಿಯ ಪ್ರಕಾರ ಈ ಪ್ರದೇಶದಲ್ಲಿ ನಾಲ್ಕು ಸ್ಥಳಗಳನ್ನು ಬ್ಯಾರಿಕೇಡ್ ಮಾಡಲಾಗಿದೆ. ಸ್ಥಿತಿ ವರದಿ ಪ್ರಕಾರ, ದುಷ್ಕರ್ಮಿಗಳು ನಾಲ್ಕು ತಡೆಗೋಡೆ ಭೇದಿಸಿ ಸಿಎಂ ನಿವಾಸಕ್ಕೆ ತಲುಪಲು ಸಾಧ್ಯವಾಯಿತು.

ವಿಚಾರಣೆಯ ಸಂದರ್ಭದಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಸಂಜಯ್ ಜೈನ್ ಅವರು ತನಿಖೆ ನಡೆಸುತ್ತಿದ್ದಾರೆ ಮತ್ತು ಎಲ್ಲಾ ಆರೋಪಿಗಳನ್ನು ವಿಡಿಯೊ ತುಣುಕಿನ ಮೂಲಕ ಗುರುತಿಸಲಾಗಿದೆ ಎಂದು ಹೇಳಿದರು. ಅವರೆಲ್ಲರಿಗೂ ತನಿಖೆಗೆ ಸೇರುವಂತೆ 41ಎ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದರು. ಕೆಲವು ವ್ಯಕ್ತಿಗಳು ಹೊರಗಿನಿಂದ ಬಂದಿದ್ದಾರೆ, ಆದರೆ ತನಿಖೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳಿದರು. ಪೊಲೀಸ್ ಅಧಿಕಾರಿಗಳ ಲೋಪವನ್ನು ಹಿರಿಯ ಐಎಎಸ್ ಮಟ್ಟದ ಅಧಿಕಾರಿಯಿಂದ ತನಿಖೆ ನಡೆಸಲಾಗುವುದು ಎಂದು ಹೇಳಿದರು.

ನಮ್ಮ ದೃಷ್ಟಿಯಲ್ಲಿ ಮೇಲೆ ಹೇಳಿದ ಲೋಪವು ಗಂಭೀರವಾಗಿದೆ ಮತ್ತು ಅದನ್ನು ಪೊಲೀಸ್ ಆಯುಕ್ತರು ನೋಡಬೇಕು. ಬಂದೋಬಸ್ತ್ ಸಮರ್ಪಕವಾಗಿದೆಯೇ ಮಾಡಲಾದ ವ್ಯವಸ್ಥೆಗಳ ವೈಫಲ್ಯದ ಕಾರಣಗಳನ್ನು ಅವರು ಮೊದಲು ಪರಿಶೀಲಿಸಬೇಕು ಮತ್ತು ಸಂಭವಿಸಿದ ಲೋಪಕ್ಕೆ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು. ಸಿಎಂ ನಿವಾಸದ ಭದ್ರತಾ ವ್ಯವಸ್ಥೆಗಳ ಪರಿಶೀಲನೆ ಮತ್ತು ಅಂತಹ ಘಟನೆಗಳನ್ನು ತಡೆಯಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ಅಂಶವನ್ನು ಬಹಿರಂಗಪಡಿಸುವ ಜೊತೆಗೆ ಈ ಆದೇಶದ ಪ್ರಕಾರ ಮುಂದಿನ ಸ್ಥಿತಿ ವರದಿಯನ್ನು ಸಲ್ಲಿಸಲಿ ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಸಿಎಂ ಭದ್ರತಾ ಲೋಪವನ್ನು ಪಂಜಾಬ್‌ನಲ್ಲಿ ಪ್ರಧಾನಿಯ ಭದ್ರತಾ ಲೋಪಕ್ಕೆ ಹೋಲಿಸಿ ಸುಪ್ರೀಂಕೋರ್ಟ್‌ನ ತೀರ್ಪನ್ನು ಉಲ್ಲೇಖಿಸಿದರು. “ದೆಹಲಿ ಪೊಲೀಸರು ಸಲ್ಲಿಸಿದ ಸ್ಥಿತಿ ವರದಿಯನ್ನು ನಮಗೆ ನೀಡಲಾಗಿಲ್ಲ. ವಿಡಿಯೊದಲ್ಲಿ ನೋಡಿದವರನ್ನು ರಾಜಕೀಯ ಶಕ್ತಿಗಳು ಸನ್ಮಾನಿಸಿದ್ದಾರೆ. ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ಪ್ರಧಾನಿಯವರ ಭದ್ರತಾ ಲೋಪಕ್ಕೆ ನಿರ್ದೇಶನ ನೀಡಿತ್ತು. ಆದರೆ ಇಲ್ಲಿ ಜನರು ಸಿಎಂ ಮನೆಯ ಮೂರು ಹಂತದ ಬ್ಯಾರಿಕೇಡ್‌ಗಳನ್ನು ಮುರಿದಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:Gold-Silver Rate: ದೇಶದ ಪ್ರಮುಖ ನಗರಗಳಲ್ಲಿ ಏಪ್ರಿಲ್ 25 ಸೋಮವಾರದ ಚಿನ್ನ, ಬೆಳ್ಳಿ ದರದ ವಿವರ ಇಲ್ಲಿದೆ

Follow us on

Related Stories

Most Read Stories

Click on your DTH Provider to Add TV9 Kannada