AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ಅರವಿಂದ ಕೇಜ್ರಿವಾಲ್, ಅಪಾಯದ ಮುನ್ಸೂಚನೆ ಮೊದಲು ಅರ್ಥಮಾಡಿಕೊಂಡಿದ್ದು ಕುಮಾರಸ್ವಾಮಿನಾ?

ಬೆಂಗಳೂರಲ್ಲಿ ಅರವಿಂದ ಕೇಜ್ರಿವಾಲ್, ಅಪಾಯದ ಮುನ್ಸೂಚನೆ ಮೊದಲು ಅರ್ಥಮಾಡಿಕೊಂಡಿದ್ದು ಕುಮಾರಸ್ವಾಮಿನಾ?

TV9 Web
| Edited By: |

Updated on: Apr 22, 2022 | 6:30 PM

Share

ಕೇಜ್ರಿವಾಲ ಅವರು ನಗರದಲ್ಲಿ ಶುಕ್ರವಾರದಂದು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರನ್ನು ಭೇಟಿಯಾದರು. ಆಪ್ ಮತ್ತು ರೈತಸಂಘ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವ ಸಾಧ್ಯತೆ ಹೆಚ್ಚಿದೆ. ಹಾಗೇನಾದರೂ ಆದರೆ, ಅದು ರಾಜ್ಯ ರಾಜಕೀಯದ ಮೇಲೆ ಗುರುತರವಾದ ಪ್ರಭಾವ ಬೀರಲಿದೆ.

ಇತ್ತೀಚಿಗೆ ನಡೆದ 5 ರಾಜ್ಯಗಳ ವಿಧಾನ ಸಭಾ ಚುನಾವಣೆಯಲ್ಲಿ ಪಂಜಾಬ್ ಬಿಟ್ಟರೆ ಬೇರೆ ಯಾವುದೇ ರಾಜ್ಯದಲ್ಲಿ ಗಮನ ಸೆಳೆಯುವ ಪ್ರದರ್ಶನ ನೀಡಲು ವಿಫಲವಾದರೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರವಾಲ್ (Arvind Kejriwal) ನೇತೃತ್ವದ ಆಮ್ ಆದ್ಮಿ ಪಕ್ಷದ (AAP) ಚರ್ಚೆ ದೇಶದೆಲ್ಲೆಡೆ ನಡೆಯುತ್ತಿದೆ. ಪಂಜಾಬ್ (Punjab) ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಅಕಾಲಿ ದಳ ಪಕ್ಷಗಳಿಗೆ ಸೋಲುಣ್ಣಿಸಿ ಆಪ್ ಅಧಿಕಾರಕ್ಕೆ ಬಂದಿದೆ. ಈಗ ಅದರ ಕಣ್ಣು ವರ್ಷಾಂತ್ಯದಲ್ಲಿ ಚುನಾವಣೆ ಎದುರಿಸಲಿರುವ ಗುಜರಾತ ಮತ್ತು 2023 ರಲ್ಲಿ ವಿಧಾನ ಸಭೆ ಚುನಾವಣೆ ಕಾಣುವ ಕರ್ನಾಟಕದ ಮೇಲಿದೆ. ಈ ಹಿನ್ನೆಲೆಯಲ್ಲೇ ಅರವಿಂದ ಕೇಜ್ರಿವಾಲ ಅವರು ಶುಕ್ರವಾರ ಬೆಂಗಳೂರಿಗೆ ಆಗಮಿಸಿದರು. ದೇವನಹಳ್ಳಿಯ ವಿಮಾನ ನಿಲ್ದಾಣದಿಂದ ಹೊರಬಂದು ಬೆಂಗಳೂರು ಕಡೆ ಹೊರಟಿದ್ದ ಅವರನ್ನು ಹಲವು ಆಪ್ ಕಾರ್ಯಕರ್ತರು ಕಾರಲ್ಲಿ ಕೂತಿರುವಾಗಲೇ ಸನ್ಮಾನಿದರು.

ಕೇಜ್ರಿವಾಲ ಹತ್ತಿರ ಬರುತ್ತಿದ್ದಂತೆಯೇ ಕಾರ್ಯಕರ್ತರು ಬೋಲೋ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುತ್ತಾ ಅವರಿಗೆ ಶ್ರೀಗಂಧದ ಹಾರ, ಚಕ್ಕೋತ ಹಣ್ಣು ಮತ್ತು ಎಳನೀರು ನೀಡಿ ಸತ್ಕರಿಸಿದರು. ಕೇಜ್ರಿವಾಲ್ ಮುಗುಳುನಗುತ್ತಾ ಎಲ್ಲವನ್ನು ಸ್ವೀಕರಿಸಿದರು.

ಕೇಜ್ರಿವಾಲ ಅವರು ನಗರದಲ್ಲಿ ಶುಕ್ರವಾರದಂದು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರನ್ನು ಭೇಟಿಯಾದರು. ಆಪ್ ಮತ್ತು ರೈತಸಂಘ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವ ಸಾಧ್ಯತೆ ಹೆಚ್ಚಿದೆ. ಹಾಗೇನಾದರೂ ಆದರೆ, ಅದು ರಾಜ್ಯ ರಾಜಕೀಯದ ಮೇಲೆ ಗುರುತರವಾದ ಪ್ರಭಾವ ಬೀರಲಿದೆ. ಇದನ್ನು ಎಲ್ಲರಿಗಿಂತ ಮೊದಲು ಅರ್ಥಮಾಡಿಕೊಂಡವರು ಜೆಡಿ(ಎಸ್) ಪಕ್ಷದ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ. ರೈತಾಪಿ ಸಮುದಾಯದ ವೋಟುಗಳನ್ನು ಕಳೆದುಕೊಳ್ಳುವ ಭೀತಿ ಅವರಲ್ಲಿ ಈಗಾಗಲೇ ಮೂಡಿದೆ.

ಹಾಗಾಗೇ, ಶುಕ್ರವಾರದಂದು ಶಿವಮೊಗ್ಗನಲ್ಲಿ ಕುಮಾರಸ್ವಾಮಿಯವರು ಚುನಾವಣೆ ಇನ್ನೂ ಒಂದು ವರ್ಷವಿರುವಾಗಲೇ ರೈತ ಸಮುದಾಯಗಳಿಗೆ ಚುನಾವಣಾ ಪ್ರಣಾಳಿಕೆಯನ್ನು ಘೋಷಿಸಿ ಹಲವಾರು ಆಶ್ವಾಸನೆಗಳನ್ನು ನೀಡಿದರು!

ಇದನ್ನೂ ಓದಿ:  ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲ ಕುಟುಂಬಗಳಿಗೆ ಮನೆ, ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗ ಎಂದರು ಕುಮಾರಸ್ವಾಮಿ