ಮೋದಿ ನಿವಾಸದ ಬಳಿ ಅಗ್ನಿ ಆಕಸ್ಮಿಕ

|

Updated on: Dec 30, 2019 | 8:50 PM

ದೆಹಲಿ: ಪ್ರಧಾನಿ ನರೇಂದ್ರ ಮೋದಿ ನಿವಾಸದ ಬಳಿ ಆಕಸ್ಮಿಕ ಅಗ್ನಿ ಅವಘಡವಾಗಿದೆ. ಸಂಜೆ 7.25ರ ಸುಮಾರಿಗೆ 7ಲೋಕ​ ಕಲ್ಯಾಣ ಮಾರ್ಗದಲ್ಲಿರುವ ಮೋದಿ ನಿವಾಸದ ಬಳಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಮಡಿದೆ. 9 ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದೆ. ಪರಿಸ್ಥಿತಿ ಹತೋಟಿಗೆ ಬಂದಿದ್ದು, ಅಗ್ನಿ ಅವಘಡದಿಂದ ಪೊಲೀಸರು ರಸ್ತೆ ಬಂದ್​ ಮಾಡಿದ್ದಾರೆ. ಪ್ರಧಾನಿ ಮೋದಿ ನಿವಾಸದ ಬಳಿ ಅಗ್ನಿ ಆಕಸ್ಮಿಕ ವಿಚಾರಕ್ಕೆ ಪ್ರಧಾನಿ ಕಾರ್ಯಾಲಯ ಟ್ವೀಟ್ ಮಾಡಿದೆ. ಇದು ಶಾರ್ಟ್​​ ಸರ್ಕ್ಯೂಟ್​​ನಿಂದ ಆಗಿರುವ ಸಣ್ಣ ಘಟನೆ. […]

ಮೋದಿ ನಿವಾಸದ ಬಳಿ ಅಗ್ನಿ ಆಕಸ್ಮಿಕ
Follow us on

ದೆಹಲಿ: ಪ್ರಧಾನಿ ನರೇಂದ್ರ ಮೋದಿ ನಿವಾಸದ ಬಳಿ ಆಕಸ್ಮಿಕ ಅಗ್ನಿ ಅವಘಡವಾಗಿದೆ. ಸಂಜೆ 7.25ರ ಸುಮಾರಿಗೆ 7ಲೋಕ​ ಕಲ್ಯಾಣ ಮಾರ್ಗದಲ್ಲಿರುವ ಮೋದಿ ನಿವಾಸದ ಬಳಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಮಡಿದೆ.

9 ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದೆ. ಪರಿಸ್ಥಿತಿ ಹತೋಟಿಗೆ ಬಂದಿದ್ದು, ಅಗ್ನಿ ಅವಘಡದಿಂದ ಪೊಲೀಸರು ರಸ್ತೆ ಬಂದ್​ ಮಾಡಿದ್ದಾರೆ.

ಪ್ರಧಾನಿ ಮೋದಿ ನಿವಾಸದ ಬಳಿ ಅಗ್ನಿ ಆಕಸ್ಮಿಕ ವಿಚಾರಕ್ಕೆ ಪ್ರಧಾನಿ ಕಾರ್ಯಾಲಯ ಟ್ವೀಟ್ ಮಾಡಿದೆ. ಇದು ಶಾರ್ಟ್​​ ಸರ್ಕ್ಯೂಟ್​​ನಿಂದ ಆಗಿರುವ ಸಣ್ಣ ಘಟನೆ. ಪ್ರಧಾನಿ ಮೋದಿ ನಿವಾಸದಲ್ಲಿ ಅಗ್ನಿ ಅವಘಡ ಸಂಭವಿಸಿಲ್ಲ. ಪ್ರಧಾನಿ ಕಚೇರಿ ಸಮೀಪದ ಕಾಂಪ್ಲೆಕ್ಸ್​ವೊಂದರಲ್ಲಿ ನಡೆದಿರುವ ಘಟನೆ ಎಂದು ಅಗ್ನಿ ಅವಘಡದ ಬಗ್ಗೆ ಪ್ರಧಾನಿ ಕಾರ್ಯಾಲಯದಿಂದ ಟ್ವೀಟ್ ಮಾಡಿದೆ.

Published On - 8:44 pm, Mon, 30 December 19