ದಿಶಾ ಗ್ಯಾಂಗ್​ ರೇಪ್​ & ಮರ್ಡರ್​: ಅತ್ಯಾಚಾರ ನಡೆದ ಸ್ಥಳದಲ್ಲೇ ಆರೋಪಿಗಳ ಎನ್‌ಕೌಂಟರ್

ದಿಶಾ ಗ್ಯಾಂಗ್​ ರೇಪ್​ & ಮರ್ಡರ್​: ಅತ್ಯಾಚಾರ ನಡೆದ ಸ್ಥಳದಲ್ಲೇ ಆರೋಪಿಗಳ ಎನ್‌ಕೌಂಟರ್

ಹೈದರಾಬಾದ್‌: ಹೈದರಾಬಾದ್ ಹೊರವಲಯದ‌ ರಂಗಾರೆಡ್ಡಿ ಜಿಲ್ಲೆಯ ಷಾದ್ ನಗರದಲ್ಲಿ ಯುವತಿಯನ್ನ ಅತ್ಯಾಚಾರ ಮಾಡಿ ಸಜೀವ ದಹನ ಮಾಡಿರುವ ದಾರುಣ ಘಟನೆ ದೇಶವನ್ನೇ ಬೆಚ್ಚಿಬೀಳಿಸಿತ್ತು. ನವೆಂಬರ್ 27ರಂದು ಈಕೆ ಶಂಷಾಬಾದನಿಂದ ಮಾದಾಪುರ ಆಸ್ಪತ್ರೆಗೆ ಹೋಗಿದ್ದರು. ಕೆಲಸ ಮುಗಿಸಿ ಮನೆಗೆ ವಾಪಸ್ ಬರುವಾಗ ದಾರಿ ಮಧ್ಯೆ ಸ್ಕೂಟಿ ಪಂಕ್ಚರ್ ಆಗಿದೆ. ಆವಾಗ.. ದಾರಿಯಲ್ಲಿ ಒಬ್ಬಳೆ ಇದ್ದೇನೆ. ಇಲ್ಲಿ ಓಡಾಡುವ ಲಾರಿ ಡ್ರೈವರುಗಳಿಂದ ಭಯವಾಗುತ್ತಿದೆ ಎಂದು ಮನೆಯವರಿಗೆ ಫೋನ್‌ ಮಾಡಿ ತಿಳಿಸಿದ್ದಾರೆ. ಅತ್ಯಾಚಾರ ಆರೋಪಿಗಳ ಬಂಧನ:  ಆಗ ನೆರವಿಗೆ ಬಂದಿದ್ದ ಲಾರಿ […]

sadhu srinath

|

Nov 19, 2020 | 12:00 AM

ಹೈದರಾಬಾದ್‌: ಹೈದರಾಬಾದ್ ಹೊರವಲಯದ‌ ರಂಗಾರೆಡ್ಡಿ ಜಿಲ್ಲೆಯ ಷಾದ್ ನಗರದಲ್ಲಿ ಯುವತಿಯನ್ನ ಅತ್ಯಾಚಾರ ಮಾಡಿ ಸಜೀವ ದಹನ ಮಾಡಿರುವ ದಾರುಣ ಘಟನೆ ದೇಶವನ್ನೇ ಬೆಚ್ಚಿಬೀಳಿಸಿತ್ತು. ನವೆಂಬರ್ 27ರಂದು ಈಕೆ ಶಂಷಾಬಾದನಿಂದ ಮಾದಾಪುರ ಆಸ್ಪತ್ರೆಗೆ ಹೋಗಿದ್ದರು. ಕೆಲಸ ಮುಗಿಸಿ ಮನೆಗೆ ವಾಪಸ್ ಬರುವಾಗ ದಾರಿ ಮಧ್ಯೆ ಸ್ಕೂಟಿ ಪಂಕ್ಚರ್ ಆಗಿದೆ. ಆವಾಗ.. ದಾರಿಯಲ್ಲಿ ಒಬ್ಬಳೆ ಇದ್ದೇನೆ. ಇಲ್ಲಿ ಓಡಾಡುವ ಲಾರಿ ಡ್ರೈವರುಗಳಿಂದ ಭಯವಾಗುತ್ತಿದೆ ಎಂದು ಮನೆಯವರಿಗೆ ಫೋನ್‌ ಮಾಡಿ ತಿಳಿಸಿದ್ದಾರೆ.

ಅತ್ಯಾಚಾರ ಆರೋಪಿಗಳ ಬಂಧನ:  ಆಗ ನೆರವಿಗೆ ಬಂದಿದ್ದ ಲಾರಿ ಡ್ರೈವರ್, ಕ್ಲೀನರ್ ದಿಶಾರನ್ನು ಲಾರಿಯಲ್ಲಿ ಅಪಹರಿಸಿ ಗ್ಯಾಂಗ್​ರೇಪ್​ ಮಾಡಿದ ನಂತರ, ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿದ್ದಾರೆ. ನ.28ರಂದು ಪೊಲೀಸರು ಈ ಪ್ರಕರಣ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಲಾರಿ ಚಾಲಕ ಮೊಹಮ್ಮದ್​ ಪಾಷಾ, ಜೊಳ್ಳ ಶಿವ, ಜೊಳ್ಳ ನವೀನ್ ಮತ್ತು ಚನ್ನಕೇಶವ ಬಂಧಿತ ಆರೋಪಿಗಳು. ನ.29ರಂದು ಶಾದ್‌ನಗರ ಠಾಣೆಯಲ್ಲಿ ಆರೋಪಿಗಳ ವಿಚಾರಣೆ ನಡೆಸಿ 30ರಂದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಬಳಿಕ ಡಿ.4ರಂದು ಪೊಲೀಸ್ ಕಸ್ಟಡಿಗೆ ನೀಡಿವಂತೆ ಆದೇಶ ನೀಡಲಾಗಿತ್ತು.

ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು ಚರ್ಲಪಲ್ಲಿ ಜೈಲಿನಲ್ಲಿ ನಾಲ್ವರು ಆರೋಪಿಗಳ ವಿಚಾರಣೆ ಮಾಡಿದ್ದಾರೆ. ಈ ವೇಳೆ ಆರೋಪಿಗಳು ನೀಡಿದ ಮಾಹಿತಿಯಂತೆ ದಿಶಾ ಫೋನ್ ವಶಕ್ಕೆ ಪಡೆದು ಘಟನಾ ಸ್ಥಳದಲ್ಲಿ ಮಹತ್ವದ ಸಾಕ್ಷ್ಯಗಳು ವಶಕ್ಕೆ ಪಡೆದಿದ್ದರು. ಬೆಳಗ್ಗೆ ಸ್ಥಳ ಮಹಜರು ಮಾಡಲು ಆರೋಪಿಗಳನ್ನು ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ ಪೊಲೀಸರ ಮೇಲೆ ಕಲ್ಲು ತೂರಿ ಪರಾರಿಯಾಗ್ತಿದ್ದ ಆರೋಪಿಗಳ ಮೇಲೆ ಪೊಲೀಸರು ದಿಶಾ ಹತ್ಯೆ ನಡೆದ 300 ಮೀಟರ್ ದೂರದಲ್ಲಿ ನಾಲ್ವರು ಆರೋಪಿಗಳನ್ನು ಎನ್‌ಕೌಂಟರ್ ಮಾಡಿದ್ದಾರೆ.

ಅತ್ಯಾಚಾರ ನಡೆದ ಸ್ಥಳದಲ್ಲೇ ಎನ್‌ಕೌಂಟರ್:  ಹೈದರಾಬಾದ್‌ನ ಶಾದ್‌ನಗರದಲ್ಲಿರುವ ಚಟಾನ್‌ಪಲ್ಲಿ ಬ್ರಿಡ್ಜ್ ಬಳಿ ಬೆಳಗ್ಗೆ 3.30ರ ಸುಮಾರಿಗೆ ಆರೋಪಿಗಳಾದ ಆರಿಫ್, ಶಿವ, ಚನ್ನಕೇಶವುಲು, ನವೀನ್ ಎನ್‌ಕೌಂಟರ್ ಮಾಡಲಾಗಿದೆ. ಆರೋಪಿಗಳನ್ನು ಸ್ಥಳ ಪರಿಶೀಲನೆಗೆ ಎಂದು ಅತ್ಯಾಚಾರವೆಸಗಿದ್ದ ಸ್ಥಳಕ್ಕೆ ಕರೆದೊಯ್ದಿದ್ದರು. ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಕಲ್ಲು ತೂರಿ ಪರಾರಿಯಾಗುವುದಕ್ಕೆ ಯತ್ನಿಸಿದ್ದಾರೆ. ಆತ್ಮರಕ್ಷಣೆಗಾಗಿ ಪೊಲೀಸರು ನಾಲ್ವರು ಆರೋಪಿಗಳ ಮೇಲೆ ಗುಂಡುಹಾರಿಸಿದ್ದಾರೆ. ಕರ್ನಾಟಕದ ಹುಬ್ಬಳ್ಳಿ ಮೂಲದ ಸೈಬರಾದಾಬ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್ ನೇತೃತ್ವದ ತಂಡದಿಂದ ಆರೋಪಿಗಳ ಮೇಲೆ ಎನ್‌ಕೌಂಟರ್ ಆಗಿದೆ.

ಎನ್‌ಕೌಂಟರ್​ಗೆ ದಿಶಾ ಪೋಷಕರು ಮೆಚ್ಚುಗೆ: ನಾಲ್ವರು ಆರೋಪಿಗಳ ಎನ್‌ಕೌಂಟರ್​ನಿಂದ ದಿಶಾಗೆ ನ್ಯಾಯ ಸಿಕ್ಕಿದೆ, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಿದೆ. ದೇವರೇ ತಕ್ಕ ಶಿಕ್ಷೆಯನ್ನು ನೀಡಿದ್ದಾನೆ. ನನ್ನ ಪುತ್ರಿ ದಿಶಾ ಮೃತಪಟ್ಟು 10 ದಿನಗಳು ಕಳೆದಿವೆ ಈಗ ನನ್ನ ಪುತ್ರಿ ಆತ್ಮಕ್ಕೆ ಶಾಂತಿ ಸಿಕ್ಕಂತಾಗಿದೆ ಎಂದು ಎನ್‌ಕೌಂಟರ್ ಬಗ್ಗೆ ಮೃತ ದಿಶಾ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

17ದಿನಗಳ ಬಳಿಕ ಅಂತ್ಯಸಂಸ್ಕಾರ: ದೇಶಕ್ಕೆ ದೇಶವೇ ತಲ್ಲಣಗೊಂಡ ಪ್ರಕರಣ ಇದು. ಆ ನಾಲ್ವರ ವಿರುದ್ಧ ದೇಶವೇ ಆಕ್ರೋಶದ ಬೆಂಕಿ ಉಗುಳಿದ್ದ ಪ್ರಕರಣ. ಆದರೆ, ಆ ನಾಲ್ವರು ಆರೋಪಿಗಳು ಎನ್‌ಕೌಂಟರ್​ಗೆ ಬಲಿಯಾದಾಗ ಯಾರು ಕೂಡಾ ಕಣ್ಣೀರು ಹಾಕಲಿಲ್ಲ. 17ದಿನಗಳ ಬಳಿಕ ಆ ನಾಲ್ವರ ಅಂತ್ಯಸಂಸ್ಕಾರ ನಡೆದಿದೆ. ಅಂತ್ಯ ಸಂಸ್ಕಾರಕ್ಕೂ ಮುನ್ನ ಎರಡು ಬಾರಿ ಪೋಸ್ಟ್‌ಮಾರ್ಟಂ ನಡೆದಿದೆ.

Follow us on

Related Stories

Most Read Stories

Click on your DTH Provider to Add TV9 Kannada