ಮೋದಿ ನಿವಾಸದ ಬಳಿ ಅಗ್ನಿ ಆಕಸ್ಮಿಕ
ದೆಹಲಿ: ಪ್ರಧಾನಿ ನರೇಂದ್ರ ಮೋದಿ ನಿವಾಸದ ಬಳಿ ಆಕಸ್ಮಿಕ ಅಗ್ನಿ ಅವಘಡವಾಗಿದೆ. ಸಂಜೆ 7.25ರ ಸುಮಾರಿಗೆ 7ಲೋಕ ಕಲ್ಯಾಣ ಮಾರ್ಗದಲ್ಲಿರುವ ಮೋದಿ ನಿವಾಸದ ಬಳಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಮಡಿದೆ. 9 ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದೆ. ಪರಿಸ್ಥಿತಿ ಹತೋಟಿಗೆ ಬಂದಿದ್ದು, ಅಗ್ನಿ ಅವಘಡದಿಂದ ಪೊಲೀಸರು ರಸ್ತೆ ಬಂದ್ ಮಾಡಿದ್ದಾರೆ. ಪ್ರಧಾನಿ ಮೋದಿ ನಿವಾಸದ ಬಳಿ ಅಗ್ನಿ ಆಕಸ್ಮಿಕ ವಿಚಾರಕ್ಕೆ ಪ್ರಧಾನಿ ಕಾರ್ಯಾಲಯ ಟ್ವೀಟ್ ಮಾಡಿದೆ. ಇದು ಶಾರ್ಟ್ ಸರ್ಕ್ಯೂಟ್ನಿಂದ ಆಗಿರುವ ಸಣ್ಣ ಘಟನೆ. […]
ದೆಹಲಿ: ಪ್ರಧಾನಿ ನರೇಂದ್ರ ಮೋದಿ ನಿವಾಸದ ಬಳಿ ಆಕಸ್ಮಿಕ ಅಗ್ನಿ ಅವಘಡವಾಗಿದೆ. ಸಂಜೆ 7.25ರ ಸುಮಾರಿಗೆ 7ಲೋಕ ಕಲ್ಯಾಣ ಮಾರ್ಗದಲ್ಲಿರುವ ಮೋದಿ ನಿವಾಸದ ಬಳಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಮಡಿದೆ.
9 ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದೆ. ಪರಿಸ್ಥಿತಿ ಹತೋಟಿಗೆ ಬಂದಿದ್ದು, ಅಗ್ನಿ ಅವಘಡದಿಂದ ಪೊಲೀಸರು ರಸ್ತೆ ಬಂದ್ ಮಾಡಿದ್ದಾರೆ.
ಪ್ರಧಾನಿ ಮೋದಿ ನಿವಾಸದ ಬಳಿ ಅಗ್ನಿ ಆಕಸ್ಮಿಕ ವಿಚಾರಕ್ಕೆ ಪ್ರಧಾನಿ ಕಾರ್ಯಾಲಯ ಟ್ವೀಟ್ ಮಾಡಿದೆ. ಇದು ಶಾರ್ಟ್ ಸರ್ಕ್ಯೂಟ್ನಿಂದ ಆಗಿರುವ ಸಣ್ಣ ಘಟನೆ. ಪ್ರಧಾನಿ ಮೋದಿ ನಿವಾಸದಲ್ಲಿ ಅಗ್ನಿ ಅವಘಡ ಸಂಭವಿಸಿಲ್ಲ. ಪ್ರಧಾನಿ ಕಚೇರಿ ಸಮೀಪದ ಕಾಂಪ್ಲೆಕ್ಸ್ವೊಂದರಲ್ಲಿ ನಡೆದಿರುವ ಘಟನೆ ಎಂದು ಅಗ್ನಿ ಅವಘಡದ ಬಗ್ಗೆ ಪ್ರಧಾನಿ ಕಾರ್ಯಾಲಯದಿಂದ ಟ್ವೀಟ್ ಮಾಡಿದೆ.
Published On - 8:44 pm, Mon, 30 December 19