ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದ ಕೊವಿಡ್ ಆಸ್ಪತ್ರೆಯಲ್ಲಿ ಶುಕ್ರವಾರ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು ಅಪಘಾತದಲ್ಲಿ ನಾಲ್ಕು ಜನ ಮೃತಪಟ್ಟಿದ್ದಾರೆ. ಹಾಗೂ ಹಲವು ರೋಗಿಗಳು ಗಾಯಗೊಂಡಿದ್ದಾರೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಕನಿಷ್ಠ 27 ರೋಗಿಗಳನ್ನು ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ನಗರದ ವಾಡಿ ಪ್ರದೇಶದ ಆಸ್ಪತ್ರೆಯಲ್ಲಿ ರಾತ್ರಿ 8.10 ಕ್ಕೆ ಈ ಘಟನೆ ನಡೆದಿದೆ.
“ಆಸ್ಪತ್ರೆಯ ಎರಡನೇ ಮಹಡಿಯಲ್ಲಿರುವ ಐಸಿಯುನ ಎಸಿ ಘಟಕದಿಂದ ಬೆಂಕಿ ಪ್ರಾರಂಭವಾಗಿದೆ ಎಂದು ವರದಿಯಾಗಿದೆ. ಬೆಂಕಿಯ ಅಪಘಡವು ಆ ಮಹಡಿಗೆ ಮಾತ್ರ ಸೀಮಿತವಾಗಿದ್ದು ಉಳಿದ ಮಹಡಿಗಳಿಗೆ ಹರಡಲಿಲ್ಲ ”ಎಂದು ನಾಗ್ಪುರ ಮುನ್ಸಿಪಲ್ ಕಾರ್ಪೊರೇಶನ್‌ನ (ಎನ್‌ಎಂಸಿ) ಮುಖ್ಯ ಅಗ್ನಿಶಾಮಕ ಅಧಿಕಾರಿ ರಾಜೇಂದ್ರ ಉಚ್ಕೆ ತಿಳಿಸಿದ್ದಾರೆ. ಹಾಗೂ ಅಪಘಾತ ನಡೆದ ಆಸ್ಪತ್ರೆ ಕೋವಿಡ್ ಅಲ್ಲದ ಆಸ್ಪತ್ರೆ ಎಂದು ಹೇಳಿದ್ರು.
ಇನ್ನು ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಮತ್ತು ಕೆಲವರು ಗಾಯಗೊಂಡಿದ್ದಾರೆ ಎಂದು ರಾಜೇಂದ್ರ ಉಚ್ಕೆ ಸ್ಪಷ್ಟಪಡಿಸಿದ್ದಾರೆ. “ಎರಡನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಾಗ 10 ರೋಗಿಗಳು ಇದ್ದರು. ಆರು ರೋಗಿಗಳು ತಾವಾಗಿಯೇ ಹೊರಬಂದರೆ, ಇತರ ನಾಲ್ವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
Maharashtra: A fire broke out at a COVID hospital in Nagpur
“Around 27 patients at the hospital were shifted to other hospitals. We can’t comment on their health condition now. Hospital has been evacuated,” says police pic.twitter.com/YfGd9p4Xjh
— ANI (@ANI) April 9, 2021
ಇದನ್ನೂ ಓದಿ: ಮುಂಬೈಯ ಭಾಂಡುಪ್ ಪ್ರದೇಶದಲ್ಲಿರುವ ಕೊವಿಡ್ ಕೇರ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ; ಸಾವಿನ ಸಂಖ್ಯೆ 9ಕ್ಕೆ ಏರಿಕೆ
(Fire Broke Out at a Covid Hospital in Nagpur Maharashtra)
Published On - 6:47 am, Sat, 10 April 21