ಮುಂಬೈಯ ಭಾಂಡುಪ್ ಪ್ರದೇಶದಲ್ಲಿರುವ ಕೊವಿಡ್ ಕೇರ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ; ಸಾವಿನ ಸಂಖ್ಯೆ 9ಕ್ಕೆ ಏರಿಕೆ
Mumbai: ಮುಂಬೈ ನಗರದ ಭಾಂಡುಪ್ ಪ್ರದೇಶದಲ್ಲಿರುವ ಡ್ರೀಮ್ಸ್ ಮಾಲ್ನ ಮೂರನೇ ಮಹಡಿಯಲ್ಲಿ ಸನ್ರೈಸ್ ಆಸ್ಪತ್ರೆ ಇದ್ದು, ಆಸ್ಪತ್ರೆಯಲ್ಲಿ ಹೊಗೆ ಆವರಿಸಿಕೊಂಡಾಗ ಅಲ್ಲಿದ್ದ ರೋಗಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಮುಂಬೈ: ಮುಂಬೈ ನಗರದ ಭಾಂಡುಪ್ ಪ್ರದೇಶದಲ್ಲಿರುವ ಕೊವಿಡ್ ಕೇರ್ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಮುಂಜಾನೆ ಬೆಂಕಿ ಅವಘಡ ಸಂಭವಿಸಿದ್ದು, ಸಾವಿನ ಸಂಖ್ಯೆ 9ಕ್ಕೇರಿದೆ. ದಟ್ಟ ಹೊಗೆಯಿಂದ ಉಸಿರುಗಟ್ಟಿ ರೋಗಿಗಳು ಸಾವಿಗೀಡಾಗಿದ್ದಾರೆ ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಅಗ್ನಿಶಾಮಕ ದಳದ ಅಧಿಕಾರಿ ಹೇಳಿದ್ದಾರೆ. ಇಲ್ಲಿನ ಡ್ರೀಮ್ಸ್ ಮಾಲ್ನ ಮೂರನೇ ಮಹಡಿಯಲ್ಲಿ ಸನ್ರೈಸ್ ಆಸ್ಪತ್ರೆ ಇದ್ದು, ಆಸ್ಪತ್ರೆಯಲ್ಲಿ ಹೊಗೆ ಆವರಿಸಿಕೊಂಡಾಗ ಅಲ್ಲಿದ್ದ ರೋಗಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಬೆಂಕಿ ಅವಘಡಕ್ಕೆ ಕಾರಣ ಏನು ಎಂದು ತಿಳಿದು ಬಂದಿಲ್ಲ. ಆಸ್ಪತ್ರೆಯಲ್ಲಿದ್ದ ಕೊವಿಡ್ ರೋಗಿಗಳನ್ನು ಸೇರಿಸಿ 70 ರೋಗಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಮುಂಬೈ ಮೇಯರ್ ಕಿಶೋರಿ ಪೆಡನೇಕರ್ ಹೇಳಿದ್ದಾರೆ.
ಬಾಂಢುಪ್ ಪಶ್ಚಿಮದಲ್ಲಿರುವ ಡ್ರೀಮ್ಸ್ ಮಾಲ್ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 6 ಮಂದಿ ಸಾವಿಗೀಡಾಗಿದ್ದಾರೆ. ಅವರ ಕುಟುಂಬಗಳಿಗೆ ಸಂತಾಪಗಳು ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ಶುಕ್ರವಾರ ಬೆಳಗ್ಗೆ ಹೇಳಿಕೆ ನೀಡಿದೆ. ಆಸ್ಪತ್ರೆಯ ಒಳಗಡೆ 73 ಕೊವಿಡ್ ರೋಗಿಗಳು ಮತ್ತು ಮೂವರು ಇತರ ರೋಗಿಗಳು ಇದ್ದರು. 70 ರೋಗಿಗಗಳನ್ನು ಹತ್ತಿರದ ಇನ್ನೊಂದು ಆಸ್ಪತ್ರೆಗೆ ಸ್ಥಳಾಂತರಿಸುವ ಹೊತ್ತಲ್ಲಿ ಆಸ್ಪತ್ರೆಯಲ್ಲಿದ್ದ ಇಬ್ಬರು ರೋಗಿಗಳು ಬೆಂಕಿಗಾಹುತಿಯಾಗಿದ್ದರು. ಗುರುವಾರ ಮಧ್ಯರಾತ್ರಿ 12.30ಕ್ಕೆ ಡ್ರೀಮ್ಸ್ ಮಾಲ್ ನಲ್ಲಿ ಬೆಂಕಿ ಕಾಣಿಸಿಕೊಂಡಾಗ 22 ಅಗ್ನಿಶಾಮಕ ದಳದ ವಾಹನಗಳು ದೌಡಾಯಿಸಿ ಬೆಂಕಿ ನಂದಿಸಿವೆ. ಬೆಂಕಿ ಅವಘಡಕ್ಕೆ ಕಾರಣಗಳೇನು ಎಂದು ಪತ್ತೆಯಾಗಿಲ್ಲ.
ಭಾಂಡುಪ್ನಲ್ಲಿರುವ ಡ್ರೀಮ್ಸ್ ಮಾಲ್ ನ ಮೊದಲನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೇಲಿನ ಮಹಡಿಯಲ್ಲಿರುವ ಸನ್ ರೈಸ್ ಆಸ್ಪತ್ರೆಯ ಒಳಗೆ ಹೊಗೆ ಆವರಿಸಿಕೊಂಡಿದೆ. ಬೆಂಕಿ ಅವಘಡ ಬಗ್ಗೆ ಎಚ್ಚರಿಕೆ ಗಂಟೆ ಬಾರಿಸಿದಾಗ ಆಸ್ಪತ್ರೆಯಲ್ಲಿರುವ ರೋಗಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದೇವೆ. ಇಬ್ಬರು ಕೊವಿಡ್ ರೋಗಿಗಳ ಮೃತದೇಹವನ್ನೂ ಸ್ಥಳಾಂತರಿಸಲಾಗಿದೆ. ಇಲ್ಲಿಯವರೆಗೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಸನ್ ರೈಸ್ ಆಸ್ಪತ್ರೆಯ ಆಡಳಿತ ವರ್ಗ ಮಧ್ಯರಾತ್ರಿ ತಮ್ಮ ಪ್ರಕಟಣೆಯಲ್ಲಿ ಹೇಳಿತ್ತು.
The first is still raging att Sunrise Hospital, Bhandup. We hear the hospital permissions were all haphazard, they don’t even have Fire NOC! Heads must roll for such criminal negligence. pic.twitter.com/i0Jz7TF9UB
— Preeti Sharma Menon (@PreetiSMenon) March 26, 2021
ಆದಾಗ್ಯೂ, ಮುಂಬೈಯಲ್ಲಿ 5,504 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಕಳೆದ ಎರಡು ದಿನಗಳಿಂದ ಸತತವಾಗಿ ಅತೀ ಹೆಚ್ಚು ಪ್ರಕರಣಗಳು ಇಲ್ಲಿ ದಾಖಲಾಗಿವೆ. ಗುರುವಾರ 14 ಕೊವಿಡ್ ರೋಗಿಗಳು ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ 11,620ಕ್ಕೆ ತಲುಪಿದೆ. 2,281 ಮಂದಿ ಚೇತರಿಸಿಕೊಂಡಿದ್ದು ಚೇತರಿಸಿಕೊಂಡವರ ಸಂಖ್ಯೆ 3,33,603 ಆಗಿದೆ.
A few more precious lives lost in the Bhandup West Fire at Dreams Mall taking the death toll up to six. Our deepest condolences to the families of deceased #MyBMCUpdates https://t.co/N0CGRSwdk8
— माझी Mumbai, आपली BMC (@mybmc) March 26, 2021
Maharashtra: Fire breaks out at a hospital in Mumbai’s Bhandup; rescue operation on
“Cause of fire is yet to be ascertained. I’ve seen a hospital at mall for the first time. Action to be taken. 70 patients including COVID infected shifted to another hospital,” says Mumbai Mayor pic.twitter.com/sq1K29PVhe
— ANI (@ANI) March 25, 2021
ಇದನ್ನೂ ಓದಿ: ಅಗ್ನಿ ಅವಘಡ; ಬಳ್ಳಾರಿಯಲ್ಲಿ ಕೋಟಿ ಕೋಟಿ ಮೌಲ್ಯದ ಕಾಟನ್ ಸುಟ್ಟು ಕರಕಲು
Published On - 10:24 am, Fri, 26 March 21