ಆಂಧ್ರಪ್ರದೇಶದಲ್ಲಿ ಭೀಕರ ಅಗ್ನಿ ದುರಂತ; ರಸ್ತೆ ಬದಿಯಲ್ಲಿದ್ದ 30 ಗುಡಿಸಲುಗಳು ಸಂಪೂರ್ಣ ಭಸ್ಮ

| Updated By: Lakshmi Hegde

Updated on: Nov 13, 2021 | 9:09 AM

ಗ್ಯಾಸ್​ ಸಿಲಿಂಡರ್ ಸ್ಫೋಟವಾಗಿ ಹೊತ್ತಿಕೊಂಡ ಬೆಂಕಿ ವೇಗವಾಗಿ ಒಂದಾದ ಬಳಿಕ ಒಂದು ಗುಡಿಸಲುಗಳಿಗೆ ಹಬ್ಬಿದೆ. ಸದ್ಯ ಈ ದುರ್ಘಟನೆಯಲ್ಲಿ ಆದ ಜೀವ ಹಾನಿಯ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಆಂಧ್ರಪ್ರದೇಶದಲ್ಲಿ ಭೀಕರ ಅಗ್ನಿ ದುರಂತ; ರಸ್ತೆ ಬದಿಯಲ್ಲಿದ್ದ 30 ಗುಡಿಸಲುಗಳು ಸಂಪೂರ್ಣ ಭಸ್ಮ
ಅಗ್ನಿ ದುರಂತ
Follow us on

ಆಂಧ್ರಪ್ರದೇಶದಲ್ಲೊಂದು ಭೀಕರ ಅಗ್ನಿದುರಂತ (Fire Accident) ನಡೆದಿದೆ. ಇಲ್ಲಿನ ವಿಜಯನಗರ ಜಿಲ್ಲೆಯ ಮೆಂಟಡಾ ಮಂಡಲದ ಜಕ್ಕುವಾ ಎಂಬ ಹಳ್ಳಿಯಲ್ಲಿ ನಡೆದ ಬೆಂಕಿ ಅನಾಹುತದಲ್ಲಿ ಬರೋಬ್ಬರಿ 30 ಗುಡಿಸಲುಗಳು ಸುಟ್ಟು ಭಸ್ಮವಾಗಿವೆ. ಈ ಗುಡಿಸಲುಗಳು ಕುರಕುಲಾ ರಸ್ತೆಯಲ್ಲಿ ಇದ್ದವಾಗಿದ್ದವು. ಮನೆಯೊಂದರಲ್ಲಿ ನಡೆದ ಅಡುಗೆ ಅನಿಲ ಸ್ಫೋಟವೇ ಈ ದುರಂತಕ್ಕೆ ಕಾರಣ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯರೇ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ.

ಗ್ಯಾಸ್​ ಸಿಲಿಂಡರ್ ಸ್ಫೋಟವಾಗಿ ಹೊತ್ತಿಕೊಂಡ ಬೆಂಕಿ ವೇಗವಾಗಿ ಒಂದಾದ ಬಳಿಕ ಒಂದು ಗುಡಿಸಲುಗಳಿಗೆ ಹಬ್ಬಿದೆ. ಸದ್ಯ ಈ ದುರ್ಘಟನೆಯಲ್ಲಿ ಆದ ಜೀವ ಹಾನಿಯ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ ಆ 30 ಗುಡಿಸಲುಗಳಲ್ಲಿ ವಾಸವಾಗಿದ್ದ ಜನರಿಗೆ ಮನೆ ನಾಶವಾದಂತಾಗಿದೆ. ಅದರಲ್ಲಿದ್ದ ಸಾಮಗ್ರಿಗಳೆಲ್ಲ ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ. ಹೀಗೆ ಆಶ್ರಯ ಕಳೆದುಕೊಂಡವರಿಗೆ ಸಮೀಪದ ಶಾಲೆಯಲ್ಲಿ ಉಳಿದುಕೊಳ್ಳುವ, ಆಹಾರ ವ್ಯವಸ್ಥೆ ಮಾಡಲಾಗಿದೆ. ಸದ್ಯ ಸ್ಥಳದಲ್ಲಿ ಬೆಂಕಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದಾಗಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬಸ್​ ನಿಲ್ದಾಣದಲ್ಲಿ ಪುನೀತ್​ ಫೋಟೋಗೆ ಮುತ್ತಿಟ್ಟು ಕಂಬನಿ ಸುರಿಸಿದ ಅಜ್ಜಿ; ವಿಡಿಯೋ ವೈರಲ್​