ಲಕ್ನೋದ ಹೋಟೆಲ್​​ನಲ್ಲಿ ಅಗ್ನಿ ಅವಘಡ: ಇಬ್ಬರು ಸಾವು, 15 ಮಂದಿ ಸಿಲುಕಿರುವ ಶಂಕೆ

ಸ್ಥಳೀಯ ಮೂಲಗಳ ಪ್ರಕಾರ, ಸೋಮವಾರ ಬೆಳಗ್ಗೆ ಗೋಮತಿ ನದಿಯ ಬಳಿಯ ಐಷಾರಾಮಿ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಲಕ್ನೋದ ಹೋಟೆಲ್​​ನಲ್ಲಿ ಅಗ್ನಿ ಅವಘಡ: ಇಬ್ಬರು ಸಾವು, 15 ಮಂದಿ ಸಿಲುಕಿರುವ ಶಂಕೆ
ಲಕ್ನೋ ಅಗ್ನಿ ಅವಘಡ
Edited By:

Updated on: Sep 05, 2022 | 12:50 PM

ಲಕ್ನೋದ (Lucknow) ಹಜರತ್‌ಗಂಜ್ ಪ್ರದೇಶದಲ್ಲಿರುವ ಹೋಟೆಲ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಇಬ್ಬರು ಸಾವಿಗೀಡಾಗಿದ್ದರೆ. ಸ್ಥಳೀಯ ಮೂಲಗಳ ಪ್ರಕಾರ, ಸೋಮವಾರ ಬೆಳಗ್ಗೆ ಗೋಮತಿ ನದಿಯ ಬಳಿಯ ಐಷಾರಾಮಿ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು ಬೆಂಕಿಯನ್ನು ನಂದಿಸಲು ಪ್ರಯತ್ನಿಸಲು ಪ್ರಾರಂಭಿಸಿದರು. ಹೋಟೆಲ್ ಒಳಗೆ ಮತ್ತಷ್ಟು ಜನರು ಸಿಲುಕಿರುವ ಶಂಕೆ ಇದೆ. ಸುದ್ದಿ ಸಂಸ್ಥೆ ಎಎನ್‌ಐ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ದೃಶ್ಯ ಸೆರೆಯಾಗಿದೆ. ಹೋಟೆಲ್‌ನ ಎಲ್ಲಾ ಕಡೆಯಿಂದ ಕಪ್ಪು ಹೊಗೆ ಹೊರಬರುವುದನ್ನು ಇದು ತೋರಿಸುತ್ತದೆ. ಹಲವಾರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿದೆ. ಸುಸಜ್ಜಿತ ಐದು ಅಂತಸ್ತಿನ ಹೋಟೆಲ್‌ನ ನಾಲ್ಕು ಮಹಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಜನರನ್ನು ಹೋಟೆಲ್ ಕಿಟಕಿಗಳ ಮೂಲಕ ಹೊರ ತೆಗೆದಿದ್ದಾರೆ

ಡಾ.ಶ್ಯಾಮ ಪ್ರಸಾದ್ ಮುಖರ್ಜಿ (ಸಿವಿಲ್) ಆಸ್ಪತ್ರೆಗೆ ಇಲ್ಲಿಯವರೆಗೆ 9 ಜನರನ್ನು ದಾಖಲಿಸಲಾಗಿದೆ; 2 ಸತ್ತ. ಸಿವಿಲ್ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಆರ್.ಪಿ.ಸಿಂಗ್ ಮಾತನಾಡಿ,  ಇಲ್ಲಿಯವರೆಗೆ 7 ಜನರನ್ನು ದಾಖಲಿಸಲಾಗಿದೆ. ಇಬ್ಬರು ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಸ್ಪತ್ರೆಗೆ ತಲುಪಿದ್ದಾರೆ. ಲಕ್ನೋದ ಲೆವಾನಾ ಹೋಟೆಲ್‌ನಲ್ಲಿ ಸಂಭವಿಸಿದ ಬೆಂಕಿಯ ಬಗ್ಗೆ ಮಾತನಾಡಿದ ಅವರು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಇದರೊಂದಿಗೆ ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯವನ್ನು ಚುರುಕುಗೊಳಿಸುವಂತೆ ಸೂಚನೆ ನೀಡಿದರು. ಮೂರು ಅಂತಸ್ತಿನ ಕಟ್ಟಡದಲ್ಲಿ ಇನ್ನೂ ಐದಾರು ಮಂದಿ ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಲಕ್ನೋ ಹೋಟೆಲ್ ನಗರದ ಹೃದಯಭಾಗದಲ್ಲಿದೆ. ಸಿಕಂದರ್ ಬಾಗ್, ಚತ್ತರ್ ಮಂಜಿಲ್ ಅರಮನೆ ಮತ್ತು ನವಾಬ್ ವಾಜಿದ್ ಅಲಿ ಶಾ ಝೂಲಾಜಿಕಲ್ ಗಾರ್ಡನ್ ಇಲ್ಲಿಂದ ಬಹಳ ಹತ್ತಿರದಲ್ಲಿದೆ.

Published On - 12:33 pm, Mon, 5 September 22