Mumbai Fire Attack: ನವಿ ಮುಂಬೈನ ಶೋರೂಂನಲ್ಲಿ ಭಾರಿ ಅಗ್ನಿದುರಂತ; ಸುಟ್ಟು ಕರಕಲಾದ 40 ಬಿಎಂಡಬ್ಲ್ಯೂ ಕಾರುಗಳು, ಕೋಟ್ಯಂತರ ರೂಪಾಯಿ ನಷ್ಟ

| Updated By: Digi Tech Desk

Updated on: Dec 08, 2021 | 1:29 PM

ಬೆಂಕಿಯ ತೀವ್ರತೆ ಅತಿಹೆಚ್ಚಾಗಿ ಇದ್ದುದರಿಂದ ಕೇವಲ ಎಂಐಡಿಸಿ ಪ್ರದೇಶದ ಅಗ್ನಿಶಾಮಕ ದಳದ ಸಿಬ್ಬಂದಿ, ವಾಹನ ಸಾಕಾಗಲಿಲ್ಲ. ನೆರುಲ್​, ವಶಿಯಿಂದಲೂ ಅಗ್ನಿಶಾಮಕ ದಳದ ಸಿಬ್ಬಂದಿ ಬಂದರು. ಒಟ್ಟು 10 ಫೈರ್​ ಫೈಟ್​ ಟ್ರಕ್​ಗಳನ್ನು ತರಲಾಗಿತ್ತು.

Mumbai Fire Attack: ನವಿ ಮುಂಬೈನ ಶೋರೂಂನಲ್ಲಿ ಭಾರಿ ಅಗ್ನಿದುರಂತ; ಸುಟ್ಟು ಕರಕಲಾದ 40 ಬಿಎಂಡಬ್ಲ್ಯೂ ಕಾರುಗಳು, ಕೋಟ್ಯಂತರ ರೂಪಾಯಿ ನಷ್ಟ
ಅಗ್ನಿ ಅವಘಡದ ಚಿತ್ರ
Follow us on

ನವಿ ಮುಂಬೈನ ಟುರ್ಬೆ ಎಂಐಡಿಸಿ ಏರಿಯಾದಲ್ಲಿರುವ ಶೋರೂಮ್​​ನಲ್ಲಿ ಭಾರಿ ಪ್ರಮಾಣದ ಅಗ್ನಿ ಅವಘಡ ಆಗಿದ್ದು, ಸುಮಾರು 40 ಬಿಎಂಡಬ್ಲ್ಯೂ ಕಾರುಗಳು ಸುಟ್ಟುಕರಕಲಾಗಿವೆ. ಅವಘಡದಲ್ಲಿ ಯಾರೂ ಮೃತಪಟ್ಟ ಬಗ್ಗೆ ವರದಿಯಾಗಿಲ್ಲ.  ಈ ಶೋರೂಂನಲ್ಲಿಯೇ ಕಾರುಗಳನ್ನು ಪಾರ್ಕ್​ ಮಾಡಲಾದ ಗೋಡೌನ್​ ಕೂಡ ಇತ್ತು. ಇಂದು ಮುಂಜಾನೆ 5.30ರಹೊತ್ತಿಗೆ ಬೆಂಕಿ ಬಿದ್ದಿದೆ ಎಂದು ಎಂಐಡಿಸಿ ಅಗ್ನಿಶಾಮಕ ದಳದ ಮುಖ್ಯ ಅಧಿಕಾರಿ ಆರ್​.ಬಿ.ಪಾಟೀಲ್​ ತಿಳಿಸಿದ್ದಾರೆ.  

ಬೆಂಕಿಯ ತೀವ್ರತೆ ಅತಿಹೆಚ್ಚಾಗಿ ಇದ್ದುದರಿಂದ ಕೇವಲ ಎಂಐಡಿಸಿ ಪ್ರದೇಶದ ಅಗ್ನಿಶಾಮಕ ದಳದ ಸಿಬ್ಬಂದಿ, ವಾಹನ ಸಾಕಾಗಲಿಲ್ಲ. ನೆರುಲ್​, ವಶಿಯಿಂದಲೂ ಅಗ್ನಿಶಾಮಕ ದಳದ ಸಿಬ್ಬಂದಿ ಬಂದರು. ಒಟ್ಟು 10 ಫೈರ್​ ಫೈಟ್​ ಟ್ರಕ್​ಗಳನ್ನು ತರಲಾಗಿತ್ತು. ಎಲ್ಲ ಸೇರಿ ಹೋರಾಟ ಮಾಡಿದರೂ ಬೆಂಕಿ ನಂದಿಸಲು 6ಗಂಟೆಗಳ ಕಾಲ ಬೇಕಾಯಿತು  ಎಂದು ವರದಿಯಾಗಿದೆ. ಶೋರೂಂ ಮತ್ತು ಗೋಡೌನ್​ಗೆ ಬೆಂಕಿ ಬೀಳಲು ನಿಜವಾದ ಕಾರಣ ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ತನಿಖೆ ಪ್ರಾರಂಭ ಮಾಡಿದ್ದಾರೆ. ಮೊದಲು ಬೆಂಕಿ ಹೊತ್ತಿದ್ದು ಕಾರು ಶೋರೂಂಗೆ ಸೇರಿದ ಮಳಿಗೆಯಲ್ಲಿ ಪಾರ್ಕ್​ ಮಾಡಲಾಗಿದ್ದ ಡಿ-207 ಬಿಎಂಡಬ್ಲ್ಯೂ ಕಾರಿನಲ್ಲಿ. ಅದು ಒಮ್ಮೆಲೇ ಪಸರಿಸುತ್ತ ಹೋಗಿ ಸುಮಾರು 40 ಕಾರುಗಳು ಧಗಧಗನೆ ಹೊತ್ತಿ ಉರಿದಿವೆ. ಇದರಿಂದ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.

ಇದನ್ನೂ ಓದಿ: ಒಮಿಕ್ರಾನ್ ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ತೀವ್ರವಾಗಿಲ್ಲ, ಈಗಿರುವ ಕೊವಿಡ್ ಲಸಿಕೆಗಳು ಇದಕ್ಕೆ ಸಾಕು: ವಿಶ್ವ ಆರೋಗ್ಯ ಸಂಸ್ಥೆ

Published On - 1:01 pm, Wed, 8 December 21