ರೋಗ ಲಕ್ಷಣಗಳಿಲ್ಲ, ನಾನು ಆರಾಮವಾಗಿಯೇ ಇದ್ದೇನೆ: ಪುಣೆಯಲ್ಲಿ ಮೊದಲು ಒಮಿಕ್ರಾನ್ ಸೋಂಕಿಗೊಳಗಾದ ವ್ಯಕ್ತಿಯ ಪ್ರತಿಕ್ರಿಯೆ

Omicron variant ನಾನು ರೋಗಲಕ್ಷಣಗಳನ್ನು ಹೊಂದಿಲ್ಲ ಮತ್ತು ವೈದ್ಯಕೀಯ ಆರೈಕೆಯ ಅಗತ್ಯವಿಲ್ಲದ ಕಾರಣ ಆಸ್ಪತ್ರೆಗೆ ಹೋಗಲಿಲ್ಲ. ನನ್ನ ಸಹೋದ್ಯೋಗಿಗಳು, ಕುಟುಂಬ ಸದಸ್ಯರು ಮತ್ತು ನಾನು ವಾಸಿಸುವ ಸಮಾಜದ ನಿವಾಸಿಗಳನ್ನು ಕೊವಿಡ್ ಪರೀಕ್ಷೆಗೊಳಪಡಿಸಿದ್ದು ಆ ವರದಿಗಳು ನೆಗೆಟಿವ್ ಆಗಿದೆ ಎಂದು ಅವರು ಹೇಳಿದ್ದಾರೆ.

ರೋಗ ಲಕ್ಷಣಗಳಿಲ್ಲ, ನಾನು ಆರಾಮವಾಗಿಯೇ ಇದ್ದೇನೆ: ಪುಣೆಯಲ್ಲಿ ಮೊದಲು ಒಮಿಕ್ರಾನ್ ಸೋಂಕಿಗೊಳಗಾದ ವ್ಯಕ್ತಿಯ ಪ್ರತಿಕ್ರಿಯೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 08, 2021 | 10:41 AM

ಪುಣೆ: ಪುಣೆ ನಗರದಲ್ಲಿ ಕೊವಿಡ್ -19ರ (Covid-19) ಒಮಿಕ್ರಾನ್ (Omicron) ರೂಪಾಂತರದೊಂದಿಗೆ ಪತ್ತೆಯಾದ ಮೊದಲ ವ್ಯಕ್ತಿ 47 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ “ನಾನು ಸಾಂಸ್ಥಿಕ ಕ್ವಾರಂಟೈನ್‌ನ ಭಾಗವಾಗಿ ನನ್ನ ಹೋಟೆಲ್ ಕೊಠಡಿಯಲ್ಲಿದ್ದೇನೆ, ಕಚೇರಿ ಕೆಲಸದಲ್ಲಿ (ಆನ್‌ಲೈನ್) ತೊಡಗಿಸಿಕೊಂಡಿದ್ದೇನೆ ಮತ್ತು ನನ್ನ ದೈನಂದಿನ ವ್ಯಾಯಾಮಗಳನ್ನು ಮಾಡುತ್ತಿದ್ದೇನೆ. ರೋಗ ಲಕ್ಷಣಗಳೇನೂ ಇಲ್ಲ ಆರಾಮವಾಗಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಫಿನ್‌ಲ್ಯಾಂಡ್‌ನಿಂದ ಹಿಂದಿರುಗಿದ ನಂತರ ಇವರಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿತ್ತು. ಸಾಫ್ಟ್‌ವೇರ್ ಇಂಜಿನಿಯರ್ ಅವರು ನವೆಂಬರ್ 23 ರಂದು ಫಿನ್‌ಲ್ಯಾಂಡ್‌ನಿಂದ ಹೊರಡುವ ಮೊದಲು ಅವರು ಕೊವಿಡ್ -19 ಪರೀಕ್ಷೆ ಮಾಡಿದಾಗ ನೆಗೆಟಿವ್ ಆಗಿತ್ತು. ನಾನು ನವೆಂಬರ್ 25 ರಂದು ಮುಂಬೈಗೆ ಬಂದೆ ಮತ್ತು ಅದೇ ದಿನ ಪುಣೆ ತಲುಪಿದೆ. ನವೆಂಬರ್ 26 ರಂದು, ನಾನು ಕಚೇರಿಗೆ ಹಾಜರಾಗಿದ್ದೆ. ಆದರೆ, ನವೆಂಬರ್ 28ರಂದು ನನಗೆ ಜ್ವರ ಬಂದಿತ್ತು. ನಾನು ತಕ್ಷಣ ನನ್ನ ಕೋಣೆಯಲ್ಲಿ ನನ್ನನ್ನು ಪ್ರತ್ಯೇಕಿಸಲು ನಿರ್ಧರಿಸಿದೆ. ನವೆಂಬರ್ 29 ರಂದು ಪರೀಕ್ಷಿಸಿದೆ. ಪ್ರಯೋಗಾಲಯವು ಜೀನೋಮ್ ಅನುಕ್ರಮಕ್ಕಾಗಿ ನನ್ನ ಮಾದರಿಯನ್ನು ಕಳುಹಿಸಿದೆ. ಇದು ಒಮಿಕ್ರಾನ್ ರೂಪಾಂತರದ ಉಪಸ್ಥಿತಿಯನ್ನು ದೃಢಪಡಿಸಿತು, ”ಎಂದು ಅವರು ಹೇಳುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಪುಣೆ ಮುನ್ಸಿಪಲ್ ಕಾರ್ಪೊರೇಶನ್‌ನ ಆರೋಗ್ಯ ಅಧಿಕಾರಿಗಳು ಪ್ರತಿದಿನ ಅವರೊಂದಿಗೆ ಸಂಪರ್ಕದಲ್ಲಿದ್ದರೆ, ಪ್ರೋಟೋಕಾಲ್ ಪ್ರಕಾರ, ಅವರು ರೋಗಿಗೆ ಸಾಂಸ್ಥಿಕ ಸಂಪರ್ಕತಡೆಯನ್ನು ಖಚಿತಪಡಿಸಿಕೊಳ್ಳಬೇಕಾಗಿತ್ತು. “ನಾನು ರೋಗಲಕ್ಷಣಗಳನ್ನು ಹೊಂದಿಲ್ಲ ಮತ್ತು ವೈದ್ಯಕೀಯ ಆರೈಕೆಯ ಅಗತ್ಯವಿಲ್ಲದ ಕಾರಣ ಆಸ್ಪತ್ರೆಗೆ ಹೋಗಲಿಲ್ಲ. ನನ್ನ ಸಹೋದ್ಯೋಗಿಗಳು, ಕುಟುಂಬ ಸದಸ್ಯರು ಮತ್ತು ನಾನು ವಾಸಿಸುವ ಸಮಾಜದ ನಿವಾಸಿಗಳನ್ನು ಕೊವಿಡ್ ಪರೀಕ್ಷೆಗೊಳಪಡಿಸಿದ್ದು ಆ ವರದಿಗಳು ನೆಗೆಟಿವ್ ಆಗಿದೆ ಎಂದು ಅವರು ಹೇಳಿದರು. ನಾಗರಿಕ ಆರೋಗ್ಯ ಅಧಿಕಾರಿಗಳ ಪ್ರಕಾರ ವ್ಯಕ್ತಿಯ 42 ಸಂಪರ್ಕಗಳನ್ನು ಪರೀಕ್ಷಿಸಲಾಯಿತು. ಅದರಲ್ಲಿ 15 ಮಂದಿ ಹೆಚ್ಚಿನ ಅಪಾಯದ ವರ್ಗದಲ್ಲಿದ್ದು ಅವರೆಲ್ಲರ ಪರೀಕ್ಷೆ ನೆಗೆಟಿವ್ ಬಂದಿದೆ.

ಈ ವರ್ಷದ ಜೂನ್ ವೇಳೆಗೆ ಸಂಪೂರ್ಣವಾಗಿ ಲಸಿಕೆಯನ್ನು ಪಡೆದ ವ್ಯಕ್ತಿ ಜ್ವರಕ್ಕೆ ಪ್ಯಾರಸಿಟಮಾಲ್ ಹೊರತುಪಡಿಸಿ ಬೇರೆ ಯಾವುದೇ ಔಷಧಿ ಸೇವಿಸಿಲ್ಲ. “ಪ್ರೋಟೋಕಾಲ್ ಪ್ರಕಾರ ನಾನು ನನ್ನ ರಕ್ತ ಪರೀಕ್ಷೆ ಮತ್ತು ಎದೆಯ ಸ್ಕ್ಯಾನ್ ಮಾಡಿದ್ದೇನೆ. ವರದಿಯಲ್ಲಿ ನಾರ್ಮಲ್ ಎಂದು ಹೇಳಿದೆ ಎಂದಿದ್ದಾರೆ.

ಪುಣೆ ಜಿಲ್ಲೆಯ ಇತರ ಆರು ರೋಗಿಗಳು ಒಮಿಕ್ರಾನ್ ರೂಪಾಂತರಕ್ಕೆ ಧನಾತ್ಮಕ ಪರೀಕ್ಷೆ ಮಾಡಿದ ಒಂದೇ ಕುಟುಂಬದ ಸದಸ್ಯರು. ಇವರನ್ನು ಪಿಂಪ್ರಿಯ ಜಿಜಾಮಾತಾ ಆಸ್ಪತ್ರೆಗೆ ದಾಖಲಿಸಲಾಗಿದೆ.  ಪ್ರಸ್ತುತ ಆಸ್ಪತ್ರೆಯಲ್ಲಿ ಮೂವರು ವಯಸ್ಕರು ಮತ್ತು ಮೂವರು ಮಕ್ಕಳಿದ್ದಾರೆ ಎಂದು ಕೊವಿಡ್ ಮೀಸಲಾದ ಆಸ್ಪತ್ರೆಯ ಉಸ್ತುವಾರಿ ಡಾ ಬಾಳಾಸಾಹೇಬ್ ಹೊಡ್ಗಾರ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. ಒಬ್ಬ ರೋಗಿಗೆ ಕೆಮ್ಮು ಇದ, ಇತರರು ಲಕ್ಷಣರಹಿತರಾಗಿದ್ದಾರೆ. “ಸುಮಾರು 60 ಹಾಸಿಗೆಗಳನ್ನು ಕೊವಿಡ್‌ಗಾಗಿ ಮೀಸಲಿಡಲಾಗಿದೆ ಮತ್ತು ಈ ಕುಟುಂಬವನ್ನು ಇಂಟರ್ನೆಟ್ ಸೌಲಭ್ಯದೊಂದಿಗೆ ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾಗಿದೆ. ಇಲ್ಲಿ ಊಟವನ್ನು ನಿಯಮಿತವಾಗಿ ನೀಡಲಾಗುತ್ತದೆ ಮತ್ತು ನಾವು ರಕ್ತದೊತ್ತಡವತ್ತು ಇತರ ಸಂಗತಿಗಳನ್ನುಮೇಲ್ವಿಚಾರಣೆ ಮಾಡುತ್ತಿದ್ದೇವೆ. ಕ್ವಾರಂಟೈನ್ ಅವಧಿ ಮುಗಿದ ನಂತರ, ಮತ್ತೊಂದು ಕೊವಿಡ್ ಪರೀಕ್ಷೆಯನ್ನು ನಡೆಸಲಾಗುವುದು ಮತ್ತು ಅವರು ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ, ಅವರನ್ನು ಏಳು ದಿನಗಳ ಕ್ವಾರಂಟೈನ್‌ಗಾಗಿ ಮನೆಗೆ ಕಳುಹಿಸಲಾಗುವುದು ಎಂದು ಡಾ ಹೊಡ್ಗರ್ ಹೇಳಿದರು.

ಇದನ್ನೂ ಓದಿ: ಬೆಂಗಳೂರಿಗೆ ನಿಟ್ಟುಸಿರು! ಒಮಿಕ್ರಾನ್ ಸೋಂಕಿತನ ಸಂಪರ್ಕದಲ್ಲಿದ್ದ ಐವರಿಗೂ ಒಮಿಕ್ರಾನ್ ಇಲ್ಲ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ