ಕೊರೋನಾ ಮೇಲೆ ಅಶ್ವಗಂಧದ ಪ್ರಯೋಗ ನಡೆಸಲಾಗುತ್ತಿಲ್ಲ- ಸ್ಪಷ್ಟನೆ ನೀಡಿದ ಆಯುಷ್ ಇಲಾಖೆ
ಜಗತ್ತಿನ ಹಲವು ತಜ್ಞರು ನೂರಾರು ರೋಗಗಳಿಗೆ ಔಷಧವಾಗಿರುವ ಅಶ್ವಗಂಧವನ್ನು ಮಾಸ್ಟರ್ ಲಸಿಕೆ ಎಂದೇ ಕರೆದಿದ್ದಾರೆ. ಯಾವುದೇ ಕಲ್ಪನೆ ಅಥವಾ ಊಹೆಗಳನ್ನು ಇಟ್ಟುಕೊಂಡು ಪ್ರಯೋಗವನ್ನು ಮಾಡಲಾಗುತ್ತಿಲ್ಲ. ಹೀಗಾಗಿ ಪ್ರಯೋಗವನ್ನು ಮುಂದುವರೆಸಲಾಗುತ್ತಿದೆ.ಅಶ್ವಗಂಧ ಕೊರೋನಾ ವಿರುದ್ಧ ಹೋರಾಡಲು ಅಲ್ಪಪ್ರಮಾಣದಲ್ಲಿ ಉಪಯೋಗವಾದರೂ ಅದು ಉತ್ತಮ ಸಾಧನೆಯೆ ಆಗಿದೆ ಎಂದು ಹೇಳಿದೆ.
ನವದೆಹಲಿ: ಈಗಾಗಲೇ ಜಾಗತಿಕವಾಗಿ ಕೊರೋನಾದ ಹಲವು ರೂಪಾಂತರಿಗಳು ಹುಟ್ಟಿಕೊಂಡಿವೆ. ಹೀಗಾಗಿ ಲಸಿಕೆಯ ದಕ್ಷತೆಯೂ ಕುಸಿಯುತ್ತಿದೆ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ಆಯುಷ್ ಇಲಾಖೆ ಕೊರೋನಾ ವಿರುದ್ಧದ ಲಸಿಕೆಯಲ್ಲಿ ಅಶ್ವಗಂಧದ ಸೂತ್ರ ಅಳವಡಿಸಿಕೊಳ್ಳುವ ಮೂಲಕ ಲಸಿಕೆಯನ್ನು ಇನ್ನಷ್ಟು ಶಕ್ತಿಯುತವಾಗಿಸಿ ಕೊರೋನಾ ರೂಪಾಂತರಿ ವಿರುದ್ಧವೂ ಹೋರಾಡಲು ಸಾಧ್ಯವಾಗಬಲ್ಲದೆ ಎಂದು ತಿಳಿಯಲು ಪ್ರಯೊಗವನ್ನು ಆರಂಭಿಸಿತ್ತು. ಆದರೆ ಅಶ್ವಗಂಧದಿಂದ ಪ್ರಯೋಗದಿಂದ ಯಾವುದೇ ಪ್ರಯೋಜನವಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
ಈ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿದ ಆಯುಷ್ ಇಲಾಖೆಯು ಜಗತ್ತಿನ ಹಲವು ತಜ್ಞರು ನೂರಾರು ರೋಗಗಳಿಗೆ ಔಷಧವಾಗಿರುವ ಅಶ್ವಗಂಧವನ್ನು ಮಾಸ್ಟರ್ ಲಸಿಕೆ ಎಂದೇ ಕರೆದಿದ್ದಾರೆ. ಯಾವುದೇ ಕಲ್ಪನೆ ಅಥವಾ ಊಹೆಗಳನ್ನು ಇಟ್ಟುಕೊಂಡು ಪ್ರಯೋಗವನ್ನು ಮಾಡಲಾಗುತ್ತಿಲ್ಲ. ಹೀಗಾಗಿ ಪ್ರಯೋಗವನ್ನು ಮುಂದುವರೆಸಲಾಗುತ್ತಿದೆ. ಅಶ್ವಗಂಧ ಕೊರೋನಾ ವಿರುದ್ಧ ಹೋರಾಡಲು ಅಲ್ಪಪ್ರಮಾಣದಲ್ಲಿ ಉಪಯೋಗವಾದರೂ ಅದು ಉತ್ತಮ ಸಾಧನೆಯೆ ಆಗಿದೆ. ಏಕೆಂದರೆ ಹೊಸ ಹೊಸವೈರಸ್ಗಳು ಆಕ್ರಮಿಸುತ್ತಿದ್ದು, ಮತ್ತೆ ಹೊಸ ಲಸಿಕೆಯನ್ನು ಕಂಡುಹಿಡಿಯುವಷ್ಟು ಕಾಲಾವಕಾಶವಿಲ್ಲ. ಹೀಗಾಗಿ ಈಗಾಗಲೇ ಆರಂಭವಾದ ಅಶ್ವಗಂಧದ ಮೇಲಿನ ಪ್ರಯೋಗವು ಮುಂದುವರೆಯಲಿದೆ ಎಂದು ಹೇಳಿದೆ.
ಕೋವಿಡ್ಲಸಿಕೆಯ ಅಶ್ವಗಂಧದ ಪರಿಣಾಮವನ್ನು ಗುರುತಿಸುವ ನಿಟ್ಟಿನಲ್ಲಿ ಅಧ್ಯಯನ ನಡೆಸಲು ಭಾರತದಾದ್ಯಂತ ಆಯುಷ್ಇಲಾಖೆ ಏಳು ಕೇಂದ್ರಗಳನ್ನು ಸ್ಥಾಪಿಸಿದ್ದು, ಈ ಪ್ರಯೋಗದಲ್ಲಿ ಈಗಾಗಲೇ ಕೋವಿಡ್-19 ಲಸಿಕೆಯನ್ನು ಪಡೆದವರನ್ನು ಬಳಸಿಕೊಳ್ಳಲಾಗುತ್ತಿದೆ.
ಆಯುರ್ವೇದ, ಯೋಗ, ನ್ಯಾಚುರೋಪತಿ, ಯುನಾನಿ, ಸಿದ್ಧ, ಹೋಮಿಯೋಪತಿ ಹಾಗೂ ಆಯುರ್ವೇದ ಕೇಂದ್ರದ ಸಹಯೋಗದಲ್ಲಿ ಅಶ್ವಗಂಧದ ಪರಿಣಾಮವನ್ನು ತಿಳಿಯುವ ಪ್ರಯೋಗ ನಡೆಸಲಾಗುತ್ತಿದೆ. ಲಸಿಕೆ ನೀಡುವ ರಕ್ಷಣೆಯ ಮೇಲೆ ಗಿಡಮೂಲಿಕೆಗಳ ಪರಿಣಾಮವನ್ನು ತಿಳಿಯುವುದು ಈ ಪ್ರಯೋಗದ ಪ್ರಮುಖ ಉದ್ದೇಶವಾಗಿದೆ. ಆಯುಷ್ ಇಲಾಖೆ ಭಾರತದಲ್ಲಿ ಪುಣೆ, ಮುಂಬೈ, ಹಾಸನ, ಬೆಳಗಾವಿ, ಜೈಪುರ, ನಾಗ್ಪುರ, ಮತ್ತು ದೆಹಲಿಯಲ್ಲಿ ಪ್ರಯೋಗವನ್ನು ಆರಂಭಿಸಿದೆ.
ಇದನ್ನೂ ಓದಿ:
ಹೊಸ ಸೋಫಾದ ಒಳಗೆ ಹೆಬ್ಬಾವು ಪ್ರತ್ಯಕ್ಷ; ಹಾವನ್ನು ರಕ್ಷಿಸಿದ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು
Published On - 5:45 pm, Wed, 8 December 21