Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ ಮಾಧ್ಯಮಗಳಲ್ಲಿ ಒಮಿಕ್ರಾನ್ ಸುದ್ದಿ ಬರುತ್ತಿದೆ; ಆ ರೀತಿಯ ವಾತಾವರಣ ರಾಜ್ಯದಲ್ಲಿ ಇಲ್ಲ -ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಬೆಂಗಳೂರಿನಲ್ಲಿ ಐಟಿ ಸೆಕ್ಟರ್ ಇದೆ. ಹೊಟೇಲ್ ಸೇರಿದಂತೆ ಅನೇಕ ಉದ್ಯಮಗಳಿವೆ. ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಎಲ್ಲರಿಗೂ ಸರ್ಟಿಫಿಕೇಟ್ ತೊರಿಸಿ ಎಂಟ್ರಿಯಾಗಬೇಕು ಅಂದ್ರೆ ಹೇಗೆ? ಇಡೀ ದೇಶದಲ್ಲಿ ಇಲ್ಲದ ಆದೇಶ ಕರ್ನಾಟಕದಲ್ಲಿ ಮಾತ್ರ ಯಾಕೆ? ದೇಶಕ್ಕೆಲ್ಲಾ ಒಂದೇ ರೂಲ್ಸ್ ಇರಬೇಕು - ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಕೇವಲ ಮಾಧ್ಯಮಗಳಲ್ಲಿ ಒಮಿಕ್ರಾನ್ ಸುದ್ದಿ ಬರುತ್ತಿದೆ; ಆ ರೀತಿಯ ವಾತಾವರಣ  ರಾಜ್ಯದಲ್ಲಿ ಇಲ್ಲ -ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
ಡಿ.ಕೆ. ಶಿವಕುಮಾರ್
Follow us
TV9 Web
| Updated By: ಸಾಧು ಶ್ರೀನಾಥ್​

Updated on: Dec 08, 2021 | 12:47 PM

ಬೆಂಗಳೂರು: ರಾಜ್ಯ, ದೇಶ ಸೇರಿದಂತೆ ಜಗತ್ತು ಒಮಿಕ್ರಾನ್ ರೂಪದಲ್ಲಿ ಕೊರೊನಾ ಅಲೆಗೆ ಬೆಚ್ಚಿಬಿದ್ದಿರುವಾಗ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಒಮಿಕ್ರಾನ್ ಗೆ ಟಫ್ ರೂಲ್ಸ್ ಮಾಡುವ ವಿಚಾರವಾಗಿ ಮಾತನಾಡುತ್ತಾ ಕೇವಲ ಮಾಧ್ಯಮಗಳಲ್ಲಿ ಒಮಿಕ್ರಾನ್ ಸುದ್ದಿ ಬರುತ್ತಿದೆ. ಆ ರೀತಿಯ ವಾತಾವರಣ ರಾಜ್ಯದಲ್ಲಿ ಇಲ್ಲ. ಸುಮ್ನೆ ಯಾರೋ ಏರ್ಪೋರ್ಟ್ ನಿಂದ ಓಡಿಹೋದ ಅಂತಾ ಸುಮ್ನೆ ಭಯದ ವಾತಾವರಣ ಸೃಷ್ಟಿಯಾಗ್ತಾ ಇದೆ ಎಂದು ಪರಿಸ್ಥಿತಿಯನ್ನು ವ್ಯಾಖ್ಯಾನಿಸಿದ್ದಾರೆ.

ಬೆಂಗಳೂರಿನಲ್ಲಿ ಐಟಿ ಸೆಕ್ಟರ್ ಇದೆ. ಹೊಟೇಲ್ ಸೇರಿದಂತೆ ಅನೇಕ ಉದ್ಯಮಗಳಿವೆ. ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಎಲ್ಲರಿಗೂ ಸರ್ಟಿಫಿಕೇಟ್ ತೊರಿಸಿ ಎಂಟ್ರಿಯಾಗಬೇಕು ಅಂದ್ರೆ ಹೇಗೆ? ಇಡೀ ದೇಶದಲ್ಲಿ ಇಲ್ಲದ ಆದೇಶ ಕರ್ನಾಟಕದಲ್ಲಿ ಮಾತ್ರ ಯಾಕೆ? ದೇಶಕ್ಕೆಲ್ಲಾ ಒಂದೇ ರೂಲ್ಸ್ ಇರಬೇಕು; ರಾಜ್ಯಕ್ಕೆ ಸಂಬಂಧಿಸಿದ ವಿಚಾರ ‌ಮಾತ್ರವಲ್ಲ. ಮೊದಲನೆ ಮತ್ತು ಎರಡನೇ ಅಲೆ ಪರಿಹಾರ ಇನ್ನೂ ನೀಡಿಲ್ಲ. ನಾಲ್ಕು ಲಕ್ಷ ಸತ್ತ ಜನರಿಗೆ ಒಂದೇ ಒಂದು ರೂಪಾಯಿ ಪರಿಹಾರ ನೀಡಿಲ್ಲ. ರೈತರಿಗೆ ಬೆಂಬಲ ಬೆಲೆ ನೀಡಿಲ್ಲ. ಈಗ ಎಲ್ಲರೂ ಉಸಿರಾಡುತ್ತಿದ್ದಾರೆ. ಮತ್ತೆ ರೂಲ್ಸ್ ಅಂದ್ರೆ ಎಲ್ಲ ಬ್ಯುಸಿನೆಸ್ ನಿಂತು ಹೋಗುತ್ತದೆ. ಇದಕ್ಕೆಲ್ಲ ಯಾರು ಹೊಣೆ? ಕೆಲವೊಂದು ವ್ಯಾಪಾರ ಬಂದ್ ಆಗಿದ್ದಾವೆ. ಎ.ಸಿ. ಇಲ್ಲದೆ ಯಾವುದೇ ಬ್ಯುಸಿನೆಸ್ ‌ನಡೆಯುತ್ತಿಲ್ಲ. ಸುಮ್ಮನೆ ಗೊಂದಲ‌ ಮೂಡಿಸುವ ಕೆಲಸ ಆಗುತ್ತಿದೆ. ಶೇ. 20ರಷ್ಟು ಶಾಲೆಗಳು ಎ.ಸಿ.ಯಲ್ಲಿ ನಡೆಯುತ್ತಿವೆ. ಈಗ ಟಫ್ ರೂಲ್ಸ್ ಮಾಡ್ತೇವಿ ಅಂತಿದ್ದಾರೆ ಎಂದು ಡಿ ಕೆ ಶಿವಕುಮಾರ್ ಬ್ಯಾಟ್​ ಬೀಸಿದ್ದಾರೆ.

Instant Karma: ನಾಯಿಗೆ ಒದೆಯಲು ಹೋಗಿ ಹೇಗ್ ಬಿದ್ದಾ ನೋಡಿ
Instant Karma: ನಾಯಿಗೆ ಒದೆಯಲು ಹೋಗಿ ಹೇಗ್ ಬಿದ್ದಾ ನೋಡಿ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ರಾಜೇಂದ್ರ ನೀಡಿದ ದೂರನ್ನು ಗೃಹ ಸಚಿವ ನೋಡಿಕೊಳ್ಳುತ್ತಾರೆ: ಶಿವಕುಮಾರ್
ರಾಜೇಂದ್ರ ನೀಡಿದ ದೂರನ್ನು ಗೃಹ ಸಚಿವ ನೋಡಿಕೊಳ್ಳುತ್ತಾರೆ: ಶಿವಕುಮಾರ್
ತೀವ್ರ ಕುತೂಹಲ ಮೂಡಿಸಿರುವ ಬಸನಗೌಡ ಯತ್ನಾಳ್ ಮುಂದಿನ ನಡೆ
ತೀವ್ರ ಕುತೂಹಲ ಮೂಡಿಸಿರುವ ಬಸನಗೌಡ ಯತ್ನಾಳ್ ಮುಂದಿನ ನಡೆ
ಹನಿ ಟ್ರ್ಯಾಪ್ ಪ್ರಕರಣ ವೈಯಕ್ತಿಕವಾದದ್ದು, ಕಾಮೆಂಟ್ ಮಾಡಲಾರೆ: ರಾಜು ಕಾಗೆ
ಹನಿ ಟ್ರ್ಯಾಪ್ ಪ್ರಕರಣ ವೈಯಕ್ತಿಕವಾದದ್ದು, ಕಾಮೆಂಟ್ ಮಾಡಲಾರೆ: ರಾಜು ಕಾಗೆ
ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಡಿಕೆ ಶಿವಕುಮಾರ್
ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಡಿಕೆ ಶಿವಕುಮಾರ್
ಏನು ಮಾಡಿದರೂ ನಡೆಯುತ್ತೆ ಎಂಬ ದುರಹಂಕಾರ ಸರ್ಕಾರಕ್ಕೆ: ನಾಗರಿಕರು
ಏನು ಮಾಡಿದರೂ ನಡೆಯುತ್ತೆ ಎಂಬ ದುರಹಂಕಾರ ಸರ್ಕಾರಕ್ಕೆ: ನಾಗರಿಕರು
ದೈಹಿಕ ಹಲ್ಲೆ, ಮಾನಸಿಕ ಕಿರುಕುಳ ಮತ್ತು ಹಣೆಗೆ ಗನ್ ಇಟ್ಟು ಬೆದರಿಕೆ: ವರ್ಷಾ
ದೈಹಿಕ ಹಲ್ಲೆ, ಮಾನಸಿಕ ಕಿರುಕುಳ ಮತ್ತು ಹಣೆಗೆ ಗನ್ ಇಟ್ಟು ಬೆದರಿಕೆ: ವರ್ಷಾ
ಮಂಗಳೂರು: ಪಿಲಿಕುಳ ಮೃಗಾಲಯದಲ್ಲಿ ಭಾರಿ ಅವ್ಯವಹಾರ ಆರೋಪ
ಮಂಗಳೂರು: ಪಿಲಿಕುಳ ಮೃಗಾಲಯದಲ್ಲಿ ಭಾರಿ ಅವ್ಯವಹಾರ ಆರೋಪ
ಶ್ವೇತಭವನ ಆವರಣಕ್ಕೆ ನುಸುಳಿದ ಮಗು, ಭದ್ರತಾ ಸಿಬ್ಬಂದಿ ಮಾಡಿದ್ದೇನು?
ಶ್ವೇತಭವನ ಆವರಣಕ್ಕೆ ನುಸುಳಿದ ಮಗು, ಭದ್ರತಾ ಸಿಬ್ಬಂದಿ ಮಾಡಿದ್ದೇನು?