ನವದೆಹಲಿ: ಕೊರೊನಾ ವೈರೆಸ್ನ ವಿರುದ್ಧದ ಹೋರಾಟಕ್ಕೆ ಪ್ರಥಮ ಮಹಿಳೆ ಸವಿತಾ ಕೋವಿಂದ್ ಅವರು ಪ್ರೆಸಿಡೆಂಟ್ ಎಸ್ಟೇಟ್‌ನಲ್ಲಿರುವ ಶಕ್ತಿ ಹಟ್‌ನಲ್ಲಿ ಮಾಸ್ಕ್ಗಳನ್ನು ಹೊಲಿಯುವುದರ ಮೂಲಕ ಮುಂದಾಗಿದ್ದಾರೆ.
ಮಾಸ್ಕ್ ಹೊಲಿಯುವ ಮೂಲಕ, ಎಲ್ಲರೂ ಒಟ್ಟಾಗಿ ಕೊರೊನಾ ಸೋಂಕಿನ ವಿರುದ್ಧ ಹೋರಾಡಬೇಕು ಎಂಬ ಸಂದೇಶವನ್ನು ಸವಿತಾ ಕೋವಿಂದ್ ನೀಡಿದ್ದಾರೆ. ತಾವು ತಯಾರಿಸಿದ ಮಾಸ್ಕ್ಗಳನ್ನ ದೆಹಲಿಯ ಆಶ್ರಯ ಸುಧಾರಣಾ ಮಂಡಳಿಯ ವಿವಿಧ ಆಶ್ರಯ ಮನೆಗಳಿಗೆ, ವಸತಿ ಗೃಹಗಳಿಗೆ ವಿತರಿಸಲಿದ್ದಾರೆ.
ಮಾಸ್ಕ್ ಧರಿಸುವುದರ ಜೊತೆಗೆ ಜನರು ಸಾಮಾಜಿಕ ಅಂತರ ಮತ್ತು ಸೋಂಕನ್ನು ತಡೆಗಟ್ಟುವ ಕ್ರಮಗಳನ್ನು ನಿಭಾಯಿಸಬೇಕು ಎಂದು ಈಗಾಗಲೇ ಆರೋಗ್ಯ ತಜ್ಞರು ಶಿಫಾರಸು ಮಾಡಿದ್ದಾರೆ. ಹೀಗಾಗಿ ಮಾಸ್ಕ್ಗಳ ಬಳಕೆ ಹೆಚ್ಚಾಗಿದ್ದು, ಬೇಡಿಕೆ ಹೆಚ್ಚಿದೆ. ದೃಶ್ಯದಲ್ಲಿ ನೋಡಬಹುದು ರಾಷ್ಟ್ರಪತಿ ಕೋವಿಂದ್ ಪತ್ನಿ ಸವಿತಾ ಕೋವಿಂದ್ ಅವರು ಕೂಡ ಕೆಂಪು ಬಣ್ಣದ ಬಟ್ಟೆಯ ಮಾಸ್ಕ್ ಧರಿಸಿದ್ದಾರೆ.
Published On - 8:59 am, Thu, 23 April 20