ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಸುಗ್ರೀವಾಜ್ಞೆಗೆ ರಾಷ್ಟ್ರಪತಿ, ರಾಜ್ಯಪಾಲ ಅಂಕಿತ
ನವದೆಹಲಿ: ಕೊರೊನಾ ಹೋರಾಟದ ಸಮಯದಲ್ಲಿ ಕೊವಿಡ್ ವಾರಿಯರ್ಸ್ ಮೇಲಿನ ಹಲ್ಲೆ ಹೆಚ್ಚಾಗುತ್ತಿರುವ ಹಿನ್ನೆಲೆ ಇದರ ತಡೆಗೆ ಕೇಂದ್ರ ಸರಕಾರದಿಂದಲೂ ಸುಗ್ರೀವಾಜ್ಞೆ ಜಾರಿಗೊಳಿಸುವ ಪ್ರಯತ್ನ ನಡೆದಿತ್ತು. ಸುಗ್ರೀವಾಜ್ಞೆಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿ, ರಾಷ್ಟ್ರಪತಿಗಳಿಗೆ ರವಾನೆ ಮಾಡಿತ್ತು. ಸದ್ಯ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಂಕಿತ ಹಾಕಿದ್ದಾರೆ. ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದೇ ವೇಳೆ, ರಾಜ್ಯ ಸರ್ಕಾರವೂ ಸಹ ಕರ್ನಾಟಕ ರಾಜ್ಯ ಎಪಿಡಮಿಕ್ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದೆ. […]
ನವದೆಹಲಿ: ಕೊರೊನಾ ಹೋರಾಟದ ಸಮಯದಲ್ಲಿ ಕೊವಿಡ್ ವಾರಿಯರ್ಸ್ ಮೇಲಿನ ಹಲ್ಲೆ ಹೆಚ್ಚಾಗುತ್ತಿರುವ ಹಿನ್ನೆಲೆ ಇದರ ತಡೆಗೆ ಕೇಂದ್ರ ಸರಕಾರದಿಂದಲೂ ಸುಗ್ರೀವಾಜ್ಞೆ ಜಾರಿಗೊಳಿಸುವ ಪ್ರಯತ್ನ ನಡೆದಿತ್ತು. ಸುಗ್ರೀವಾಜ್ಞೆಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿ, ರಾಷ್ಟ್ರಪತಿಗಳಿಗೆ ರವಾನೆ ಮಾಡಿತ್ತು. ಸದ್ಯ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಂಕಿತ ಹಾಕಿದ್ದಾರೆ. ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಇದೇ ವೇಳೆ, ರಾಜ್ಯ ಸರ್ಕಾರವೂ ಸಹ ಕರ್ನಾಟಕ ರಾಜ್ಯ ಎಪಿಡಮಿಕ್ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದೆ. ರಾಜ್ಯಪಾಲರು ಬುಧವಾರ ರಾತ್ರಿ ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದಾರೆ.
ಸುಗ್ರೀವಾಜ್ಞೆಯ ಮುಖ್ಯ ಅಂಶಗಳು: ಹಲ್ಲೆ ಮಾಡುವವರ ವಿರುದ್ಧ ಕಠಿಣ ಕ್ರಮದ ಸುಗ್ರೀವಾಜ್ಞೆಯಲ್ಲಿ 6 ತಿಂಗಳಿಂದ 7 ವರ್ಷದ ವರೆಗೆ ಶಿಕ್ಷೆ ವಿಧಿಸುವ ಪ್ರಸ್ತಾವನೆಯಿದೆ. 1 ಲಕ್ಷದಿಂದ 8 ಲಕ್ಷದವರಗೆಗೂ ದಂಡ ವಿಧಿಸುವ ಅಂಶವೂ ಇದೆ. ಕೊರನಾ ವಾರಿಯರ್ಸ್ ರಕ್ಷಣೆಗೆ ಈ ಕಠಿಣ ಕಾನೂನು ಕ್ರಮ ನೆರವಾಗಲಿದೆ.
Published On - 7:06 am, Thu, 23 April 20