AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಥಮ ಮಹಿಳೆಯಿಂದ ಶಕ್ತಿ ಹಟ್‌ನಲ್ಲಿ ಮಾಸ್ಕ್ ತಯಾರಿ

ನವದೆಹಲಿ: ಕೊರೊನಾ ವೈರೆಸ್​ನ ವಿರುದ್ಧದ ಹೋರಾಟಕ್ಕೆ ಪ್ರಥಮ ಮಹಿಳೆ ಸವಿತಾ ಕೋವಿಂದ್ ಅವರು ಪ್ರೆಸಿಡೆಂಟ್‌ ಎಸ್ಟೇಟ್‌ನಲ್ಲಿರುವ ಶಕ್ತಿ ಹಟ್​ನಲ್ಲಿ ಮಾಸ್ಕ್​ಗಳನ್ನು ಹೊಲಿಯುವುದರ ಮೂಲಕ ಮುಂದಾಗಿದ್ದಾರೆ. ಮಾಸ್ಕ್ ಹೊಲಿಯುವ ಮೂಲಕ, ಎಲ್ಲರೂ ಒಟ್ಟಾಗಿ ಕೊರೊನಾ ಸೋಂಕಿನ ವಿರುದ್ಧ ಹೋರಾಡಬೇಕು ಎಂಬ ಸಂದೇಶವನ್ನು ಸವಿತಾ ಕೋವಿಂದ್ ನೀಡಿದ್ದಾರೆ. ತಾವು ತಯಾರಿಸಿದ ಮಾಸ್ಕ್​ಗಳನ್ನ ದೆಹಲಿಯ ಆಶ್ರಯ ಸುಧಾರಣಾ ಮಂಡಳಿಯ ವಿವಿಧ ಆಶ್ರಯ ಮನೆಗಳಿಗೆ, ವಸತಿ ಗೃಹಗಳಿಗೆ ವಿತರಿಸಲಿದ್ದಾರೆ. ಮಾಸ್ಕ್ ಧರಿಸುವುದರ ಜೊತೆಗೆ ಜನರು ಸಾಮಾಜಿಕ ಅಂತರ ಮತ್ತು ಸೋಂಕನ್ನು ತಡೆಗಟ್ಟುವ ಕ್ರಮಗಳನ್ನು […]

ಪ್ರಥಮ ಮಹಿಳೆಯಿಂದ ಶಕ್ತಿ ಹಟ್‌ನಲ್ಲಿ ಮಾಸ್ಕ್ ತಯಾರಿ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Apr 23, 2020 | 9:00 AM

Share

ನವದೆಹಲಿ: ಕೊರೊನಾ ವೈರೆಸ್​ನ ವಿರುದ್ಧದ ಹೋರಾಟಕ್ಕೆ ಪ್ರಥಮ ಮಹಿಳೆ ಸವಿತಾ ಕೋವಿಂದ್ ಅವರು ಪ್ರೆಸಿಡೆಂಟ್‌ ಎಸ್ಟೇಟ್‌ನಲ್ಲಿರುವ ಶಕ್ತಿ ಹಟ್​ನಲ್ಲಿ ಮಾಸ್ಕ್​ಗಳನ್ನು ಹೊಲಿಯುವುದರ ಮೂಲಕ ಮುಂದಾಗಿದ್ದಾರೆ.

ಮಾಸ್ಕ್ ಹೊಲಿಯುವ ಮೂಲಕ, ಎಲ್ಲರೂ ಒಟ್ಟಾಗಿ ಕೊರೊನಾ ಸೋಂಕಿನ ವಿರುದ್ಧ ಹೋರಾಡಬೇಕು ಎಂಬ ಸಂದೇಶವನ್ನು ಸವಿತಾ ಕೋವಿಂದ್ ನೀಡಿದ್ದಾರೆ. ತಾವು ತಯಾರಿಸಿದ ಮಾಸ್ಕ್​ಗಳನ್ನ ದೆಹಲಿಯ ಆಶ್ರಯ ಸುಧಾರಣಾ ಮಂಡಳಿಯ ವಿವಿಧ ಆಶ್ರಯ ಮನೆಗಳಿಗೆ, ವಸತಿ ಗೃಹಗಳಿಗೆ ವಿತರಿಸಲಿದ್ದಾರೆ.

ಮಾಸ್ಕ್ ಧರಿಸುವುದರ ಜೊತೆಗೆ ಜನರು ಸಾಮಾಜಿಕ ಅಂತರ ಮತ್ತು ಸೋಂಕನ್ನು ತಡೆಗಟ್ಟುವ ಕ್ರಮಗಳನ್ನು ನಿಭಾಯಿಸಬೇಕು ಎಂದು ಈಗಾಗಲೇ ಆರೋಗ್ಯ ತಜ್ಞರು ಶಿಫಾರಸು ಮಾಡಿದ್ದಾರೆ. ಹೀಗಾಗಿ ಮಾಸ್ಕ್​ಗಳ ಬಳಕೆ ಹೆಚ್ಚಾಗಿದ್ದು, ಬೇಡಿಕೆ ಹೆಚ್ಚಿದೆ. ದೃಶ್ಯದಲ್ಲಿ ನೋಡಬಹುದು ರಾಷ್ಟ್ರಪತಿ ಕೋವಿಂದ್‌ ಪತ್ನಿ ಸವಿತಾ ಕೋವಿಂದ್ ಅವರು ಕೂಡ ಕೆಂಪು ಬಣ್ಣದ ಬಟ್ಟೆಯ ಮಾಸ್ಕ್ ಧರಿಸಿದ್ದಾರೆ. https://www.facebook.com/Tv9Kannada/videos/558606725074110/

Published On - 8:59 am, Thu, 23 April 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು