ಯುಮುನಾ ನದಿ ನೀರಿನಮಟ್ಟ ಏರಿಕೆ; ದೆಹಲಿಯಲ್ಲಿ ರಸ್ತೆಗಳು ಜಲಾವೃತ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

|

Updated on: Jul 13, 2023 | 6:21 PM

ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ನಂತರ, ಮುಖ್ಯಮಂತ್ರಿಗಳು ಭಾನುವಾರದವರೆಗೆ ಎಲ್ಲಾ ಶಾಲಾ-ಕಾಲೇಜುಗಳನ್ನು ಮುಚ್ಚುವಂತೆ ಆದೇಶಿಸಿದ್ದಾರೆ. ತುರ್ತು ಸೇವೆಯಲ್ಲಿರುವವರನ್ನು ಹೊರತುಪಡಿಸಿ ಸರ್ಕಾರಿ ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ತಿಳಿಸಲಾಗಿದೆ. ಖಾಸಗಿ ಕಚೇರಿಗಳಿಗೂ WFH ಆಯ್ಕೆಗೆ ತೆರಳುವಂತೆ ಸೂಚಿಸಲಾಗಿದೆ.

ಯುಮುನಾ ನದಿ ನೀರಿನಮಟ್ಟ ಏರಿಕೆ; ದೆಹಲಿಯಲ್ಲಿ ರಸ್ತೆಗಳು ಜಲಾವೃತ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ದೆಹಲಿ ಮಳೆಗೆ ಮುಳುಗಿದ ಬಸ್ಸು
Follow us on

ದೆಹಲಿ: ಯಮುನಾ ನದಿಯ (Yamuna River) ನೀರಿನ ಮಟ್ಟ ಏರಿಕೆಯಿಂದಾಗಿ ಯಮುನಾ ಬ್ಯಾಂಕ್ ಮೆಟ್ರೋ ನಿಲ್ದಾಣದ ರಸ್ತೆಯನ್ನು ಮುಚ್ಚಿದ ನಂತರ ದೆಹಲಿಯಲ್ಲಿ ಪ್ರವಾಹದಂತಹ (Delhi Rains) ಪರಿಸ್ಥಿತಿ ದೆಹಲಿ ಮೆಟ್ರೋ ಸೇವೆಗಳ ಮೇಲೆ ಪರಿಣಾಮ ಬೀರಿದೆ. ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (DMRC) ಯಮುನಾ ಬ್ಯಾಂಕ್ ನಿಲ್ದಾಣಕ್ಕೆ ಪ್ರವೇಶವಿಲ್ಲ ಎಂದು ಟ್ವಿಟರ್‌ನಲ್ಲಿ ತಿಳಿಸಿದೆ. ಇದು ನೋಯ್ಡಾ ಮತ್ತು ಗಾಜಿಯಾಬಾದ್ ನಡುವೆ ಇಂಟರ್ ಚೇಂಜ್ ಸೆಂಟರ್ ಆಗಿ ಕಾರ್ಯನಿರ್ವಹಿಸುವ ಬ್ಲೂ ಲೈನ್‌ನ ನಿಲ್ದಾಣವಾಗಿದೆ. ಅದಂಹಾಗೆ ಇಂಟರ್ ಚೇಂಜ್ ಸೌಲಭ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮೆಟ್ರೋ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಯಮುನಾ ನದಿಯ ನೀರಿನ ಮಟ್ಟ ಹೆಚ್ಚುತ್ತಿರುವ ಕಾರಣ, ಯಮುನಾ ಬ್ಯಾಂಕ್ ಮೆಟ್ರೋ ನಿಲ್ದಾಣಕ್ಕೆ ಹೋಗುವ ಮಾರ್ಗವು ಪ್ರಸ್ತುತ ಬಂದ್ ಮಾಡಲಾಗಿದೆ. ದಯವಿಟ್ಟು ಅದಕ್ಕೆ ಅನುಗುಣವಾಗಿ ನಿಮ್ಮ ಪ್ರಯಾಣವನ್ನು ಯೋಜಿಸಿ ಮತ್ತು ಪರ್ಯಾಯ ಮಾರ್ಗಗಳನ್ನು ಪರಿಗಣಿಸಿ. ಆದಾಗ್ಯೂ, ಇಂಟರ್ಚೇಂಜ್ ಸೌಲಭ್ಯ ಲಭ್ಯವಿದೆ ಎಂದು DMRC ಟ್ವೀಟ್ ಮಾಡಿದೆ.


ಸೇವೆಗಳು ಸಾಮಾನ್ಯವಾಗಿದ್ದರೂ ರೈಲುಗಳು ಎಲ್ಲಾ ಮೆಟ್ರೋ ಸೇತುವೆಗಳನ್ನು ನಿರ್ಬಂಧಿತ ವೇಗದಲ್ಲಿ ಹಾದುಹೋಗುತ್ತಿವೆ ಎಂದು DMRC ಹೇಳಿದೆ.

ಮುಖ್ಯಾಂಶಗಳು

  1. ದೆಹಲಿಯಲ್ಲಿ ಯಮುನಾ ನದಿಯಲ್ಲಿ ರಾತ್ರಿಯ ವೇಳೆ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿದ್ದು, ಮನೆಗಳಿಗೆ ನೀರು ನುಗ್ಗಿದೆ. ಮಳೆ ಸಾರ್ವಜನಿಕ ಸಾರಿಗೆಯ ಮೇಲೆ ಪರಿಣಾಮ ಬೀರಿದ್ದು, ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ.
  2. ಹರ್ಯಾಣದ ಹತ್ನಿಕುಂಡ್ ಬ್ಯಾರೇಜ್ ನದಿಗೆ ನೀರು ಬಿಡುತ್ತಿರುವುದರಿಂದ ಇಂದು ಮಧ್ಯಾಹ್ನ 1 ಗಂಟೆಗೆ ಯಮುನಾದಲ್ಲಿ ನೀರಿನ ಮಟ್ಟ 208.62 ಮೀಟರ್ ಆಗಿತ್ತು. ಪ್ರಸ್ತುತ ನೀರಿನ ಮಟ್ಟ ಅಪಾಯದ ಮಟ್ಟಕ್ಕಿಂತ ಮೂರು ಮೀಟರ್‌ಗಳಷ್ಟು ಹೆಚ್ಚಿದೆ.
  3. ಅರವಿಂದ ಕೇಜ್ರಿವಾಲ್ ಸರ್ಕಾರ ಮಧ್ಯ ಪ್ರವೇಶಿಸಿ ನೀರು ಬಿಡುವುದನ್ನು ನಿಲ್ಲಿಸುವಂತೆ ಕೇಂದ್ರವನ್ನು ಒತ್ತಾಯಿಸಿದೆ. ಆದರೆ ಕೇಂದ್ರವು ಬ್ಯಾರೇಜ್‌ನಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲೇಬೇಕಿದೆ ಎಂದು ಉತ್ತರಿಸಿದೆ. ನಂತರ ದಿನದಲ್ಲಿ ನೀರು ಬಿಡುವ ಪ್ರಮಾಣ ಕಡಿಮೆಯಾಗುವ ನಿರೀಕ್ಷೆ ಇದೆ.
  4. ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಹರ್ಯಾಣ ಬ್ಯಾರೇಜ್ ತುಂಬಿದೆ.ಇಲ್ಲಿ ಮನೆ ಮತ್ತು ಸೇತುವೆ ನೆಲಸಮವಾಗಿದೆ.
  5. ರಾಷ್ಟ್ರ ರಾಜಧಾನಿಯಲ್ಲಿ, ನದಿ ನೀರು ಹತ್ತಿರದ ಪ್ರದೇಶಗಳಿಗೆ ಪ್ರವೇಶಿಸಿದ್ದರಿಂದ ಐಷಾರಾಮಿ ಸಿವಿಲ್ ಲೈನ್ಸ್ ಪ್ರದೇಶವು ಜಲಾವೃತವಾಗಿತ್ತು. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸ ಮತ್ತು ದೆಹಲಿ ವಿಧಾನಸಭೆಯಿಂದ ಕೇವಲ 350 ಮೀಟರ್‌ಗಳಷ್ಟು ದೂರದಲ್ಲಿ ನೀರು ತುಂಬಿದೆ.
  6. ಹೊರವರ್ತುಲ ರಸ್ತೆಯ ಭಾಗಗಳು ಸೇರಿದಂತೆ ಹಲವಾರು ರಸ್ತೆಗಳಲ್ಲಿ ಜಲಾವೃತವು ಸಂಚಾರಕ್ಕೆ ಅಡ್ಡಿಪಡಿಸಿದೆ. ಸಂಚಾರವನ್ನು ಪರ್ಯಾಯ ಮಾರ್ಗಗಳಲ್ಲಿ ಬದಲಾಯಿಸಲಾಗಿದ್ದು, ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ. ಸಾರ್ವಜನಿಕ ಸಾರಿಗೆ, ಮೆಟ್ರೋ ಸೇವೆ ಮೇಲೂ ಪರಿಣಾಮ ಬೀರಿವೆ.
  7. ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ನಂತರ, ಮುಖ್ಯಮಂತ್ರಿಗಳು ಭಾನುವಾರದವರೆಗೆ ಎಲ್ಲಾ ಶಾಲಾ-ಕಾಲೇಜುಗಳನ್ನು ಮುಚ್ಚುವಂತೆ ಆದೇಶಿಸಿದ್ದಾರೆ. ತುರ್ತು ಸೇವೆಯಲ್ಲಿರುವವರನ್ನು ಹೊರತುಪಡಿಸಿ ಸರ್ಕಾರಿ ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ತಿಳಿಸಲಾಗಿದೆ. ಖಾಸಗಿ ಕಚೇರಿಗಳಿಗೂ WFH ಆಯ್ಕೆಗೆ ತೆರಳುವಂತೆ ಸೂಚಿಸಲಾಗಿದೆ.
  8. ಮೂರು ನೀರಿನ ಸಂಸ್ಕರಣಾ ಯೋಜನೆಗಳನ್ನು ಸ್ಥಗಿತಗೊಳಿಸಿರುವುದರಿಂದ ದೆಹಲಿಯ ಕೆಲವು ಭಾಗಗಳಲ್ಲಿ ನೀರಿನ ಸೇವೆಗಳ ಮೇಲೆ ಪರಿಣಾಮ ಬೀರಲಿದೆ. ಜಲಾವೃತ ತೆರವಾದ ತಕ್ಷಣ ನೀರು ಪೂರೈಕೆಯನ್ನು ಸಾಮಾನ್ಯಗೊಳಿಸಲು ಪ್ರಯತ್ನಿಸಲಾಗುವುದು ಎಂದು ಮುಖ್ಯಮಂತ್ರಿ ಕೇಜ್ರಿವಾಲ್ ಹೇಳಿದ್ದಾರೆ.
  9. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಹಲವಾರು ತಂಡಗಳು ನೀರು ನುಗ್ಗಿರುವ ಮನೆಯ ಜನರನ್ನು ಸ್ಥಳಾಂತರಿಸುತ್ತಿದ್ದಾರೆ. ಎದೆಯ ಮಟ್ಟದಲ್ಲಿ ನೀರು ಹರಿಯುವ ಪ್ರದೇಶಗಳಿಂದ ದೋಣಿಗಳಲ್ಲಿ ಜನರನ್ನು ರಕ್ಷಿಸುವ ದೃಶ್ಯಗಳು ಕಂಡುಬಂದವು.
  10. ತೆರವಿಗೆ ನಾಗರಿಕರ ಸಹಕಾರವನ್ನು ಮುಖ್ಯಮಂತ್ರಿ ಕೋರಿದ್ದಾರೆ. “ಜೀವವನ್ನು ಉಳಿಸುವುದು ಅತ್ಯಂತ ಮುಖ್ಯ. ಈ ತುರ್ತು ಪರಿಸ್ಥಿತಿಯಲ್ಲಿ ಪರಸ್ಪರ ಸಹಾಯ ಮಾಡಲು ನಾನು ಎಲ್ಲಾ ದೆಹಲಿಯವರಿಗೆ ಮನವಿ ಮಾಡುತ್ತೇನೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ನೀರು ಸಂಸ್ಕರಣಾ ಘಟಕಗಳನ್ನು ಮುಚ್ಚಿದ್ದರಿಂದ ಕುಡಿ ನೀರಿಗೆ ಅಭಾವ

ಯಮುನಾ ನದಿಯ ಹೆಚ್ಚುತ್ತಿರುವ ಮಟ್ಟದಿಂದಾಗಿ ಮೂರು ನೀರು ಸಂಸ್ಕರಣಾ ಘಟಕಗಳನ್ನು ಮುಚ್ಚಿದ್ದರಿಂದ ದೆಹಲಿ ಸರ್ಕಾರವು 25 ಪ್ರತಿಶತದಷ್ಟು ಪೂರೈಕೆಯನ್ನು ಕಡಿತಗೊಳಿಸಲು ನಿರ್ಧರಿಸಿದೆ. ಹಾಗಾಗಿ ರಾಷ್ಟ್ರ ರಾಜಧಾನಿಯಲ್ಲಿ ಕುಡಿಯುವ ನೀರಿಗೆ ಕೊರತೆ ಕಾಣಿಸಲಿದೆ.

ಇದನ್ನೂ ಓದಿDelhi Rain: ಮಳೆ ಕಡಿಮೆ ಇದ್ದರೂ ದೆಹಲಿಯಲ್ಲಿ ಯಮುನೆ‌ ಉಕ್ಕಿ ಹರಿದಿದ್ದಾದರು ಯಾಕೆ?

ವಜೀರಾಬಾದ್ ನೀರು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, “ಯಮುನಾ ನೀರಿನ ಮಟ್ಟದಲ್ಲಿ ಹೆಚ್ಚಳದಿಂದಾಗಿ, ಅನೇಕ ನೀರು ಸಂಸ್ಕರಣಾ ಘಟಕಗಳನ್ನು ಮುಚ್ಚಬೇಕಾಯಿತು. ನಾನು ಯಮುನಾ ದಡದಲ್ಲಿರುವ ವಜೀರಾಬಾದ್ ಸ್ಥಾವರಕ್ಕೆ ಭೇಟಿ ನೀಡಿದ್ದೇನೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ತಕ್ಷಣ ನಾವು ಅದನ್ನು ಪ್ರಾರಂಭಿಸುತ್ತೇವೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಯಮುನಾ ನದಿ ಮಟ್ಟ ಹೆಚ್ಚುತ್ತಿರುವ ಕಾರಣ ವಜೀರಾಬಾದ್, ಚಂದ್ರವಾಲ್ ಮತ್ತು ಓಖ್ಲಾ ನೀರಿನ ಸಂಸ್ಕರಣಾ ಘಟಕಗಳನ್ನು ಮುಚ್ಚಲಾಗಿದೆ. “ಇದರಿಂದಾಗಿ, ಕೆಲವು ಪ್ರದೇಶಗಳಲ್ಲಿ ನೀರಿನ ಪೂರೈಕೆಯ ಸಮಸ್ಯೆ ಉಂಟಾಗುತ್ತದೆ. ಯಮುನಾ ನೀರು ಕಡಿಮೆಯಾದ ತಕ್ಷಣ ಈ ಘಟಕಗಳು ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ” ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ