Jammu And Kashmir: ಜಮ್ಮುವಿನಲ್ಲಿ ಬೈಸಾಖಿ ಸಂಭ್ರಮಾಚರಣೆ ವೇಳೆ ಕಾಲು ಸೇತುವೆ ಕುಸಿದು 40 ಮಂದಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ಬೈಸಾಖಿ ಸಂಭ್ರಮಾಚರಣೆ ವೇಳೆ ಕಾಲು ಸೇತುವೆ ಕುಸಿದು 40 ಮಂದಿಗೆ ಗಾಯಗೊಂಡಿದ್ದಾರೆ.

Jammu And Kashmir: ಜಮ್ಮುವಿನಲ್ಲಿ ಬೈಸಾಖಿ ಸಂಭ್ರಮಾಚರಣೆ ವೇಳೆ ಕಾಲು ಸೇತುವೆ ಕುಸಿದು 40 ಮಂದಿಗೆ ಗಾಯ
ಬೈಸಾಖಿ ಸಂಭ್ರಮಾಚರಣೆ ವೇಳೆ ಕಾಲು ಸೇತುವೆ ಕುಸಿದು 20 ಮಂದಿಗೆ ಗಾಯ

Updated on: Apr 14, 2023 | 5:27 PM

ಉಧಂಪುರ: ಜಮ್ಮು ಮತ್ತು ಕಾಶ್ಮೀರ(Jammu And Kashmir) ಉಧಂಪುರದಲ್ಲಿ ಬೈಸಾಖಿ ಸಂಭ್ರಮಾಚರಣೆ ವೇಳೆ ಕಾಲು ಸೇತುವೆ ಕುಸಿದು 40 ಜನರು ಗಾಯಗೊಂಡಿದ್ದಾರೆ. ಬೈಸಾಖಿ ಆಚರಣೆಯ ಸಂದರ್ಭದಲ್ಲಿ ಚೆನಾನಿ ಬ್ಲಾಕ್‌ನ ಬೈನ್ ಗ್ರಾಮದ ಬೇಣಿ ಸಂಗಮದಲ್ಲಿ ಈ ಘಟನೆ ವರದಿಯಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ವಿಭಾಗೀಯ ಆಯುಕ್ತ (ಜಮ್ಮು) ರಮೇಶ್ ಕುಮಾರ್, ಸೇತುವೆಯ ಮೇಲೆ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ್ದರಿಂದ ಓವರ್‌ಲೋಡ್‌ನಿಂದ ಸೇತುವೆ ಕುಸಿದಿದೆ. ಪೊಲೀಸರು ಮತ್ತು ಪರಿಹಾರ ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ.

ಜಿಲ್ಲೆಯ ಬೈನ್ ಗ್ರಾಮದ ಬೇಣಿ ಸಂಗಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ 40 ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಪೊಲೀಸರು ಮತ್ತು ಇತರ ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿದೆ ಎಂದು ಎಸ್‌ಎಸ್‌ಪಿ ಉಧಂಪುರ ಡಾ.ವಿನೋದ್ ತಿಳಿಸಿದ್ದಾರೆ.

 

Published On - 3:45 pm, Fri, 14 April 23