ತೆಲಂಗಾಣದಲ್ಲಿ ಬುರ್ಖಾ ವಿವಾದ; ಮಹಿಳೆಯರು ಕಡಿಮೆ ಬಟ್ಟೆ ತೊಟ್ಟರೆ ಸಮಸ್ಯೆಯಾಗುತ್ತೆ ಎಂದ ಗೃಹ ಸಚಿವ ಮಹಮೂದ್ ಅಲಿ
ಕೆಲವು ಮುಖ್ಯೋಪಾಧ್ಯಾಯರು ಅಥವಾ ಪ್ರಾಂಶುಪಾಲರು ಇದನ್ನು ಮಾಡುತ್ತಿರಬಹುದು. ಆದರೆ ನಮ್ಮ ನೀತಿ ಸಂಪೂರ್ಣವಾಗಿ ಜಾತ್ಯತೀತವಾಗಿದೆ. ಜನರು ತಮಗೆ ಬೇಕಾದುದನ್ನು ಧರಿಸಬಹುದು. ಬುರ್ಖಾ ಧರಿಸುವಂತಿಲ್ಲ ಎಂದು ಎಲ್ಲಿಯೂ ಬರೆಯಲಾಗಿಲ್ಲ, ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಮಹಮೂದ್ ಅಲಿ ಹೇಳಿದ್ದಾರೆ.
ಹೈದರಾಬಾದ್ (ತೆಲಂಗಾಣ): ಹೈದರಾಬಾದ್‌ನ ಸಂತೋಷ್ ನಗರದ ಕೆವಿ ರಂಗಾ ರೆಡ್ಡಿ ಕಾಲೇಜಿನಲ್ಲಿ ಶನಿವಾರ ಉರ್ದು ಮಾಧ್ಯಮ ಪದವಿ ಪರೀಕ್ಷೆಗೆ ಹಾಜರಾಗಿದ್ದ ಕೆಲವು ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯುವ ಮುನ್ನ ಬುರ್ಖಾ (Burqa Row)ತೆಗೆಯುವಂತೆ ಹೇಳಲಾಗಿದೆ. ಈ ಘಟನೆಯನ್ನು ತೆಲಂಗಾಣ(Telangana )ಗೃಹ ಸಚಿವ ಮಹಮೂದ್ ಅಲಿ (Mahmood Ali) ಘಟನೆಯನ್ನು ಖಂಡಿಸಿದ್ದು, ದುಷ್ಕರ್ಮಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅದೇ ವೇಳೆ ಮಹಿಳೆಯರು ಚಿಕ್ಕ ಉಡುಪುಗಳನ್ನು ಧರಿಸದಂತೆ ಎಚ್ಚರಿಕೆ ನೀಡಿದರು.
ಕೆಲವು ಮುಖ್ಯೋಪಾಧ್ಯಾಯರು ಅಥವಾ ಪ್ರಾಂಶುಪಾಲರು ಇದನ್ನು ಮಾಡುತ್ತಿರಬಹುದು. ಆದರೆ ನಮ್ಮ ನೀತಿ ಸಂಪೂರ್ಣವಾಗಿ ಜಾತ್ಯತೀತವಾಗಿದೆ. ಜನರು ತಮಗೆ ಬೇಕಾದುದನ್ನು ಧರಿಸಬಹುದು. ಬುರ್ಖಾ ಧರಿಸುವಂತಿಲ್ಲ ಎಂದು ಎಲ್ಲಿಯೂ ಬರೆಯಲಾಗಿಲ್ಲ, ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಮಹಮೂದ್ ಅಲಿ ಹೇಳಿದ್ದಾರೆ.
ಪಾಶ್ಚಾತ್ಯ ಡ್ರೆಸ್ ಹಾಕಿಕೊಂಡರೆ ಸರಿಯಾಗುವುದಿಲ್ಲ. ನಾವು ಉತ್ತಮ ಬಟ್ಟೆಗಳನ್ನು ಧರಿಸಬೇಕು, ವಿಶೇಷವಾಗಿ ಮಹಿಳೆಯರು. ಮಹಿಳೆಯರು ಕಡಿಮೆ ಬಟ್ಟೆ ಧರಿಸಿದರೆ ಅದು ಸಮಸ್ಯೆಯಾಗಬಹುದು. ಹೆಚ್ಚು ಬಟ್ಟೆ ತೊಟ್ಟರೆ ಜನ ನೆಮ್ಮದಿಯಿಂದ ಇರುತ್ತಾರೆ ಎಂದು ಸಚಿವರು ಹೇಳಿದ್ದಾರೆ. ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮೊದಲು ನಮ್ಮ ಬುರ್ಖಾವನ್ನು ತೆಗೆಯುವಂತೆ ಕಾಲೇಜು ಅಧಿಕಾರಿಗಳು ಒತ್ತಾಯಿಸಿದರು. ಹೊರರೆ ಮಾತ್ರ ಬುರ್ಖಾ ಧರಿಸಿ ಎಂದು ಅವರು ಹೇಳಿರುವುದಾಗಿ ಪರೀಕ್ಷೆಗೆ ಬಂದ ಮಹಿಳಾ ವಿದ್ಯಾರ್ಥಿನಿಯೊಬ್ಬರು ಹೇಳಿದರು.
ಕೆವಿ ರಂಗಾ ರೆಡ್ಡಿ ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾದ ಕೆಲವು ವಿದ್ಯಾರ್ಥಿನಿಯರು ಕಾಲೇಜು ಆಡಳಿತ ಮಂಡಳಿಯು ಬುರ್ಖಾ ಧರಿಸಿ ಬರದಂತೆ ತಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿದ್ದ ಕಾಲೇಜು ಸಿಬ್ಬಂದಿ ಬುರ್ಖಾ ತೆಗೆಯುವಂತೆ ಹೇಳಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ:Adah Sharma: ‘ಬುರ್ಖಾ ಧರಿಸಿದ ಬಳಿಕ ಯಶಸ್ಸು ಸಿಕ್ತು’; ಗ್ಲಾಮರಸ್ ಅದಾ ಶರ್ಮಾ ಬಗ್ಗೆ ಟೀಕೆ
ಈ ಗೊಂದಲದಲ್ಲಿ ಸುಮಾರು ಅರ್ಧ ಗಂಟೆ ಕಾಲ ಪರೀಕ್ಷೆಗೆ ಹಾಜರಾಗದಂತೆ ತಡೆದಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಕೆಲವು ವಿದ್ಯಾರ್ಥಿನಿಯರು ಬುರ್ಖಾ ತೆಗೆದು ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದರು. ಈ ಘಟನೆಯ ನಂತರ ವಿದ್ಯಾರ್ಥಿನಿಯರ ಪೋಷಕರು ಈ ವಿಷಯದ ಬಗ್ಗೆ ಗೃಹ ಸಚಿವ ಮಹಮೂದ್ ಅಲಿ ಅವರಿಗೆ ದೂರು ನೀಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ