ಪಂಜಾಬ್ನಲ್ಲಿ ಈ ಬಾರಿ ಆಮ್ ಆದ್ಮಿ ಪಕ್ಷ ಸರ್ಕಾರ ರಚಿಸಿದ್ದು, ಮುಖ್ಯಮಂತ್ರಿ ಹುದ್ದೆಗೆ ಏರಿರುವ ಭಗವಂತ್ ಮಾನ್ ಭರ್ಜರಿ ಉತ್ಸಾಹದಲ್ಲಿ ಆಡಳಿತ ಶುರು ಮಾಡಿದ್ದಾರೆ. ಪಂಜಾಬ್ನ್ನು ಅಭಿವೃದ್ಧಿಗೊಳಿಸುವುದೇ ಪರಮ ಗುರಿ ಎಂದು ಈಗಾಗಲೇ ಹೇಳಿಕೊಂಡಿರುವ ಅವರು ಇತ್ತೀಚೆಗೆ ಮಾಡಿದ ಭಾಷಣವೊಂದರಲ್ಲಿ ಪ್ರತಿಭಾ ಪಲಾಯನ ( Brain Drain)ದ ಬಗ್ಗೆ ಮಾತನಾಡಿದ್ದರು. ‘ಪಂಜಾಬ್ನಿಂದ ಪ್ರತಿಭಾ ಪಲಾಯನ ಹೆಚ್ಚುತ್ತಿದೆ. ಈ ಪ್ರತಿಭಾ ಪಲಾಯನ ತಡೆಯಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುವುದು. ನೋಡುತ್ತಿರಿ ಮುಂದೊಂದು ದಿನ ವಿದೇಶಿಯರೂ ಕೆಲಸ ಹುಡುಕಿಕೊಂಡು ಪಂಜಾಬ್ಗೆ ಬರುವಂತೆ ಮಾಡುತ್ತೇನೆ’ ಎಂದು ಭಗವಂತ್ ಮಾನ್ ಹೇಳಿದ್ದರು. ((Brain Drain ಅಥವಾ ಪ್ರತಿಭಾ ಪಲಾಯನ ಎಂದರೆ, ಇಲ್ಲಿ ಅತ್ಯುತ್ತಮ, ಉನ್ನತ ಶಿಕ್ಷಣ ಪಡೆದು, ಅದಕ್ಕೆ ತಕ್ಕುದಾದ ಕೆಲಸ ಸಿಗದೆ, ಅಥವಾ ಕೆಲಸ ಸಿಕ್ಕರೂ ಅದಕ್ಕೆ ಸರಿಯಾದ ವೇತನ, ಸೌಕರ್ಯ ದೊರೆಯದೆ ವಿದೇಶಗಳಿಗೆ ವಲಸೆ ಹೋಗಿ ಅಲ್ಲಿ ದುಡಿಯುವುದು). ಆದರೆ ಈ ಭಾಷಣಕ್ಕೆ ಪ್ರತಿಪಕ್ಷಗಳಿಂದ ಟೀಕೆ ವ್ಯಕ್ತವಾಗಿದೆ. ಪಂಜಾಬ್ಗೆ ಕೆಲಸ ಹುಡುಕಿಕೊಂಡು ಬಿಳಿಯರು ಬರುತ್ತಾರೆ ಎಂಬ ಭ್ರಮೆಯಿಂದ ಮಾನ್ ಹೊರಬರಲಿ, ಮೊದಲು ಇಲ್ಲಿಯೇ ಇರುವ ಅನೇಕ ಸಮಸ್ಯೆಗಳನ್ನು ಪರಿಹರಿಸಲಿ ಎಂದು ವಿಪಕ್ಷಗಳ ನಾಯಕರು ಹೇಳಿದ್ದಾರೆ.
ಸಿಎಂ ಮಾನ್ ಹೇಳಿದ್ದೇನು?
ಭಗವಂತ್ ಮಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅದು ಅವರೇ ಮಾಡಿದ ಭಾಷಣದ ತುಣಿಕನ ವಿಡಿಯೋ. ‘ಪ್ರತಿಭಾ ಪಲಾಯನವೆಂಬುದು ಒಂದು ಸಮಸ್ಯೆಯಾಗುತ್ತಿದೆ. ಈ ವರ್ಷವೂ ಕೂಡ ಸುಮಾರು 3 ಲಕ್ಷ ಜನರು ವಿದೇಶಗಳಿಗೆ ಹೋಗುವ ಸಾಧ್ಯತೆ ಇದೆ. ಮೂರು ಲಕ್ಷ ಮಂದಿ ಹೋದರೂ ನಮ್ಮ ದೇಶಕ್ಕೆ ನಷ್ಟ. ಒಬ್ಬರಿಗೆ 15 ಲಕ್ಷ ರೂ.ನಂತೆ ವಿದೇಶಕ್ಕೆ ಹೋದಂತಾಗುತ್ತದೆ. ನಮಗೆ ಸ್ವಲ್ಪ ಸಮಯ ಕೊಡಿ. ನಾವಿದನ್ನು ಬದಲಿಸುತ್ತೇವೆ. ವಿದೇಶಿಗರೂ ಕೂಡ ಕೆಲಸ ಹುಡುಕಿಕೊಂಡು ಪಂಜಾಬ್ಗೆ ಬರುವಂತೆ ಮಾಡುತ್ತೇವೆ’ ಎಂದು ಮಾನ್ ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕೇಳಿಸಿಕೊಳ್ಳಬಹುದು. ಅಷ್ಟಲ್ಲದೆ, ದೇಶ ಬಿಟ್ಟು ಹೋಗಬೇಡಿ, ಇಲ್ಲಿ ಕಲಿತು, ನಮ್ಮ ದೇಶಕ್ಕೇ ನಿಮ್ಮ ಸೇವೆ ಮಾಡಿ. ಅವಕಾಶಕ್ಕಾಗಿ ಹುಡುಕಿಕೊಂಡು ಯಾರೂ ಬೇರೆ ದೇಶಗಳಿಗೆ ಹೋಗದಂತೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆಯನ್ನೂ ನೀಡಿದ್ದಾರೆ.
इस बार भी पौने 3 लाख बच्चों के विदेश जाने की संभावना है। सिर्फ बच्चा ही विदेश नहीं जाता, प्रति व्यक्ति 15 लाख रुपए भी बाहर जाते हैं।
थोड़ा समय दो, ऐसा माहौल बनायेंगे कि अंग्रेज नौकरियां मांगने पंजाब आयेंगे।
— Bhagwant Mann (@BhagwantMann) April 9, 2022
ಪಂಜಾಬ್ ಸಿಎಂ ಈ ಭರವಸೆಯನ್ನು ನೀಡುತ್ತಿದ್ದಂತೆ ಕಾಂಗ್ರೆಸ್ ಶಾಸಕ ಸುಖ್ಪಾಲ್ ಸಿಂಗ್ ಖೈರಾ ಪ್ರತಿಕ್ರಿಯೆ ನೀಡಿದ್ದಾರೆ. ಪಂಜಾಬ್ಗೆ ವಿದೇಶಿಯರೂ ಉದ್ಯೋಗ ಹುಡುಕಿಕೊಂಡು ಬರಲಿ ಎಂದು ನಾನೂ ಆಶಿಸುತ್ತೇನೆ. ಆದರೆ ಹೀಗೆ ಪರದೇಶಗಳಿಂದ ಇಲ್ಲಿಗೆ ಜನ ಬರುವುದಕ್ಕೂ ಮೊದಲು ಪಂಜಾಬ್ನಲ್ಲಿಯೇ ಇರುವ ಹಲವು ಸಮಸ್ಯೆಗಳನ್ನು ಸಿಎಂ ಬಗೆಹರಿಸಿಕೊಳ್ಳಬೇಕು. ಮೊದಲು ಇಲ್ಲಿನ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ಕಾನೂನು-ಸುವ್ಯವಸ್ಥೆಯನ್ನು ಸರಿಪಡಿಸಬೇಕು, ಭ್ರಷ್ಟಾಚಾರ ತೊಡೆದುಹಾಕಬೇಕು, ಪೊಲೀಸ್ ಮತ್ತು ನಾಗರಿಕ ಆಡಳಿತವನ್ನು ರಾಜಕೀಯಮುಕ್ತಗೊಳಿಸಬೇಕು. ಸಾಲ ಮಾಡಿಕೊಂಡ ರೈತರು, ಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.
I really hope foreigners approach PB for jobs but before that we have to set our house in order! Ensure job opportunities for youth,maintain law & order,end corruption,depoliticise police & civil machinery,stop indebted farmers & labourers from committing suicides & a just rule pic.twitter.com/AnSLSKcrLB
— Sukhpal Singh Khaira (@SukhpalKhaira) April 9, 2022
ಇದನ್ನೂ ಓದಿ: Viral: ವೇಗವಾಗಿ ತಿರುಗುತ್ತಿದ್ದ ಫ್ಯಾನನ್ನು ಬರಿಗೈಲಿ ನಿಲ್ಲಿಸಿದ ಯುವಕ; ವಿಡಿಯೋ ನೋಡಿ ಹುಬ್ಬೇರಿಸಿದ ನೆಟ್ಟಿಗರು
Published On - 9:40 am, Sun, 10 April 22