Viral: ವೇಗವಾಗಿ ತಿರುಗುತ್ತಿದ್ದ ಫ್ಯಾನನ್ನು ಬರಿಗೈಲಿ ನಿಲ್ಲಿಸಿದ ಯುವಕ; ವಿಡಿಯೋ ನೋಡಿ ಹುಬ್ಬೇರಿಸಿದ ನೆಟ್ಟಿಗರು

Viral Video: ಯುವಕನೋರ್ವ ವೇಗವಾಗಿ ತಿರುಗುತ್ತಿದ್ದ ಫ್ಯಾನ್ ಅನ್ನು ಬರಿಗೈಲಿ ಹಿಡಿದು ನಿಲ್ಲಿಸಿದ್ದಾನೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಜನರು ಅದನ್ನು ನೋಡಿ ಶಾಕ್​ ಆಗಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ.

Viral: ವೇಗವಾಗಿ ತಿರುಗುತ್ತಿದ್ದ ಫ್ಯಾನನ್ನು ಬರಿಗೈಲಿ ನಿಲ್ಲಿಸಿದ ಯುವಕ; ವಿಡಿಯೋ ನೋಡಿ ಹುಬ್ಬೇರಿಸಿದ ನೆಟ್ಟಿಗರು
ಫ್ಯಾನ್ ನಿಲ್ಲಿಸುತ್ತಿರುವ ವಿದ್ಯಾರ್ಥಿ
Follow us
TV9 Web
| Updated By: shivaprasad.hs

Updated on:Apr 10, 2022 | 10:08 AM

ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಜನರು ಹೊಸಹೊಸ ಸಾಹಸಗಳ ಮೂಲಕ ಇದ್ದಕ್ಕಿದ್ದಂತೆ ನೆಟ್ಟಿಗರ ಕಣ್ಮಣಿಯಾಗುತ್ತಾರೆ. ರಾತ್ರೋರಾತ್ರಿ ವಿಡಿಯೋಗಳು ವೈರಲ್ ಆಗುತ್ತವೆ. ಹಲವು ಬಾರಿ ಜನರು ತಮ್ಮ ವಿಶೇಷ ಪ್ರತಿಭೆಗಳಿಂದ ಗಮನ ಸೆಳೆದರೆ ಮತ್ತೆ ಹಲವರು ಸಾಹಸಗಳ ಮೂಲಕ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ. ಸದ್ಯ ಅಂತರ್ಜಾಲದಲ್ಲಿ ಇಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಯುವಕನೋರ್ವ ವೇಗವಾಗಿ ತಿರುಗುತ್ತಿದ್ದ ಫ್ಯಾನ್ ಅನ್ನು ಬರಿಗೈಲಿ ಹಿಡಿದು ನಿಲ್ಲಿಸಿದ್ದಾನೆ. ಸದ್ಯ ಈ ವಿಡಿಯೋ ವೈರಲ್ (Viral Video) ಆಗಿದ್ದು, ಜನರು ಅದನ್ನು ನೋಡಿ ಶಾಕ್​ ಆಗಿದ್ದಾರೆ. ವಿಡಿಯೋ ವೀಕ್ಷಿಸಿದವರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

ವಿಡಿಯೋದಲ್ಲಿ ಯುವಕನೋರ್ವ ಬೆಂಚಿನ ಮೇಲೆ ನಿಂತು ವೇಗವಾಗಿ ತಿರುಗುತ್ತಿರುವ ಫ್ಯಾನ್ ಅನ್ನು ನೋಡುತ್ತಿದ್ದಾನೆ. ನಂತರ ಮೇಲೆ ಹತ್ತಿ ಬರಿಗೈಯಲ್ಲಿ ಫ್ಯಾನ್ ನಿಲ್ಲಿಸಿದ್ದಾನೆ. ಈ ವೇಳೆ ಆತನಿಗೆ ಫ್ಯಾನ್​ನ ಒಂದು ರೆಕ್ಕೆ ಕೈತಪ್ಪಿದೆ. ತಕ್ಷಣ ಅದರ ಹಿಂದಿನ ಮತ್ತೊಂದು ರೆಕ್ಕೆಯನ್ನು ಹಿಡಿದು ಫ್ಯಾನ್ ನಿಲ್ಲಿಸಿದ್ದಾನೆ ಯುವಕ.

ವೈರಲ್ ಆಗಿರುವ ವಿಡಿಯೋ ಇಲ್ಲಿದೆ:

View this post on Instagram

A post shared by GiDDa CoMpAnY (@giedde)

ವಿಡಿಯೋ ವೀಕ್ಷಿಸಿದ ಜನರು ಯುವಕನ ಸಾಹಸವನ್ನು ಹುಚ್ಚುಸಾಹಸ ಎಂದು ವ್ಯಾಖ್ಯಾನಿಸಿದ್ದಾರೆ. ಮತ್ತಷ್ಟು ಜನರು ಇಂತಹ ಸಾಹಸಕ್ಕೆ ಮುನ್ನ ವಿಮಾ ಪೇಪರ್​ಗಳನ್ನು ತಯಾರಿಸಿಟ್ಟುಕೊಂಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಕೆಲವರು ಇಂತಹ ಸಾಹಸಗಳಿಂದ ಯಾರೂ ಹೀರೋ ಆಗುವುದಿಲ್ಲ, ಜಾಗೃತರಾಗಿರಿ ಎಂದು ಸಲಹೆ ನೀಡಿದ್ದಾರೆ. ಹಲವರು ವಿಡಿಯೋ ನೋಡಿ ಮನದುಂಬಿ ನಕ್ಕಿದ್ದಾರೆ. ಮತ್ತಷ್ಟು ಜನರು ತಾವೂ ಹೀಗೆ ಮಾಡಿದ್ದಾಗಿ ಬರೆದುಕೊಂಡು ಎಲ್ಲರ ಹುಬ್ಬೇರಿಸಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ giedde ಎಂಬ ಖಾತೆಯಿಂದ ವಿಡಿಯೋ ಹಂಚಿಕೊಳ್ಳಲಾಗಿದೆ. ಸದ್ಯ ಈ ವಿಡಿಯೋ ಸಹಸ್ರಾರು ವೀಕ್ಷಣೆ ಕಂಡಿದ್ದು, ವೈರಲ್ ಆಗಿದೆ.

ಇದನ್ನೂ ಓದಿ: Viral: ತಪ್ಪಾಗಿ ಬೇರೊಂದು ವಿಮಾನ ಹತ್ತಿದ ಜೋಡಿ; ಇಳಿದಿದ್ದು ಬರೋಬ್ಬರಿ 1,200 ಕಿಮೀ ದೂರದಲ್ಲಿ! ಆಮೇಲೇನಾಯ್ತು?

ಬಿಹಾರ: ಸರ್ಕಾರಿ ಅಧಿಕಾರಿಗಳಂತೆ ನಟಿಸಿ 60 ಅಡಿ ಉದ್ದದ ಸೇತುವೆಯನ್ನೇ ಕದ್ದ ಕಳ್ಳರು; ಹಾಡುಹಗಲೇ ನಡೆಯಿತು ಲೂಟಿ!

Published On - 10:03 am, Sun, 10 April 22

ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ