AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರ: ಸರ್ಕಾರಿ ಅಧಿಕಾರಿಗಳಂತೆ ನಟಿಸಿ 60 ಅಡಿ ಉದ್ದದ ಸೇತುವೆಯನ್ನೇ ಕದ್ದ ಕಳ್ಳರು; ಹಾಡುಹಗಲೇ ನಡೆಯಿತು ಲೂಟಿ!

Iron Bridge stolen in Bihar: ಬಿಹಾರದ ರೊಹ್ತಾಸ್ ಜಿಲ್ಲೆಯಲ್ಲಿ ಪ್ರಸ್ತುತ ಸಾರ್ವಜನಿಕ ಸೇವೆಯಲ್ಲಿ ಇಲ್ಲದೇ, ನಿಷ್ಕ್ರಿಯವಾಗಿದ್ದ ಉಕ್ಕಿನ ಸೇತುವೆಯೊಂದನ್ನು ಹಾಡುಹಗಲೇ ಕಳ್ಳರ ತಂಡ ಕದ್ದಿದೆ. ಈ ಬಗ್ಗೆ ಸುದ್ದಿ ಸಂಸ್ಥೆ ಐಎಎನ್ಎಸ್ ವರದಿ ಮಾಡಿದೆ.

ಬಿಹಾರ: ಸರ್ಕಾರಿ ಅಧಿಕಾರಿಗಳಂತೆ ನಟಿಸಿ 60 ಅಡಿ ಉದ್ದದ ಸೇತುವೆಯನ್ನೇ ಕದ್ದ ಕಳ್ಳರು; ಹಾಡುಹಗಲೇ ನಡೆಯಿತು ಲೂಟಿ!
ಕಳುವಾಗಿರುವ ಸೇತುವೆ
TV9 Web
| Updated By: shivaprasad.hs|

Updated on:Apr 09, 2022 | 10:12 AM

Share

ಸರ್ಕಾರಿ ಅಧಿಕಾರಿಗಳಂತೆ ನಟಿಸಿ 60 ಅಡಿ ಉದ್ದದ ಸೇತುವೆಯನ್ನೇ ಹೊತ್ತೊಯ್ದಿದ್ದಾರೆ ಕಳ್ಳರು! ಹೌದು, ಇದು ನಂಬಲು ಅಸಾಧ್ಯವಾದರೂ ನಡೆದಿರುವ ವಾಸ್ತವ ಘಟನೆ. ಬಿಹಾರದ (Bihar) ರೊಹ್ತಾಸ್ ಜಿಲ್ಲೆಯಲ್ಲಿ ಪ್ರಸ್ತುತ ಸಾರ್ವಜನಿಕ ಸೇವೆಯಲ್ಲಿ ಇಲ್ಲದೇ, ನಿಷ್ಕ್ರಿಯವಾಗಿದ್ದ ಉಕ್ಕಿನ ಸೇತುವೆಯೊಂದನ್ನು ಹಾಡುಹಗಲೇ ಕಳ್ಳರ ತಂಡ ಕದ್ದಿದೆ. ಈ ಬಗ್ಗೆ ಸುದ್ದಿ ಸಂಸ್ಥೆ ಐಎಎನ್ಎಸ್ ವರದಿ ಮಾಡಿದೆ. ಸರ್ಕಾರಿ ಅಧಿಕಾರಿಗಳೆಂದು ಹೇಳಿಕೊಂಡವರು ಈ ಕೃತ್ಯಕ್ಕೆ ಸ್ಥಳೀಯ ಅಧಿಕಾರಿಗಳು ಹಾಗೂ ಸ್ಥಳೀಯರನ್ನೂ ಬಳಸಿಕೊಂಡಿದ್ದಾರೆ ಎಂದರೆ ನಿಮಗೆ ಅಚ್ಚರಿಯಾಗಲೇಬೇಕಿದೆ. ಅಷ್ಟು ಚಾಕಚಕ್ಯತೆಯಿಂದ ಕಳ್ಳತನ ಮಾಡಿ 500 ಟನ್ ಪರಿಕರಗಳೊಂದಿಗೆ ಕಳ್ಳರು ನಾಪತ್ತೆಯಾಗಿದ್ದಾರೆ. ಈ ಹಗಲು- ಕಳ್ಳತನ (Iron Bridge Stolen) ಮೂರು ದಿನಗಳವರೆಗೆ ನಡೆದಿದೆ ಎಂದು ಅಧಿಕಾರಿಯೊಬ್ಬರು ಐಎಎನ್‌ಎಸ್‌ಗೆ ತಿಳಿಸಿದರು. ರಾಜ್ಯ ನೀರಾವರಿ ಇಲಾಖೆಯ ಅಧಿಕಾರಿಗಳಂತೆ ನಟಿಸಿದ ಕಳ್ಳರು ಗ್ಯಾಸ್ ಕಟ್ಟರ್ ಮತ್ತು ಬುಲ್ಡೋಜರ್ ಯಂತ್ರಗಳನ್ನು ಬಳಸಿ ಸೇತುವೆಯನ್ನು ಕೆಡವಿದ್ದಾರೆ. ನಂತರ ಸ್ಕ್ರ್ಯಾಪ್ ಮೆಟಲ್ ಅನ್ನು ಹೊತ್ತೊಯ್ದಿದ್ದಾರೆ.

ಕಬ್ಬಿಣದ ಸೇತುವೆ ಕದ್ದ ಈ ಪ್ರಕರಣದಲ್ಲಿ ದರೋಡೆಕೋರರು ಸ್ಥಳೀಯ ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮಸ್ಥರ ಸಹಾಯವನ್ನು ಪಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಕಳ್ಳತನದ ಬಗ್ಗೆ ಅಧಿಕಾರಿಗಳಿಗೆ ಅರಿವಾಗುವ ವೇಳೆಗೆ, ದರೋಡೆಕೋರರು ಅದಾಗಲೇ ಲೂಟಿಯೊಂದಿಗೆ ನಾಪತ್ತೆಯಾಗಿದ್ದಾರೆ.

ಐಎಎನ್‌ಎಸ್ ವರದಿಯ ಪ್ರಕಾರ, ನಸ್ರಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಅಮಿಯಾವರ್ ಗ್ರಾಮದಲ್ಲಿ 1972 ರಲ್ಲಿ ಅರ್ರಾ ಕಾಲುವೆಯ ಮೇಲೆ ಸೇತುವೆಯನ್ನು ನಿರ್ಮಿಸಲಾಗಿತ್ತು. ಈಗ ತುಂಬಾ ಹಳೆಯದಾಗಿದ್ದು, ಬಳಸಲು ಯೋಗ್ಯವಲ್ಲದ್ದರಿಂದ ಅಪಾಯಕಾರಿ ಎಂದು ಘೋಷಿಸಲಾಗಿತ್ತು. ಆದ್ದರಿಂದ ಸ್ಥಳೀಯ ಗ್ರಾಮಸ್ಥರು ಇದನ್ನು ಬಳಸದೆ ಪಕ್ಕದ ಕಾಂಕ್ರೀಟ್ ಸೇತುವೆಯನ್ನು ಬಳಸುತ್ತಿದ್ದರು.

ಕಳ್ಳತನದ ಬಗ್ಗೆ ದೂರು ದಾಖಲಾಗಿದೆ. ಸ್ಥಳೀಯ ಸ್ಕ್ರ್ಯಾಪ್ ಡೀಲರ್‌ಗಳನ್ನು ಎಚ್ಚರಿಸಿದ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ನೀರಾವರಿ ಇಲಾಖೆ ಅಧಿಕಾರಿಗಳಿಂದ ದೂರು ಬಂದಿದ್ದು, ಅದರಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ. ಆರೋಪಿಗಳ ಗುರುತು ಪತ್ತೆಗೆ ಸ್ಕೆಚ್‌ ಹಾಕುವ ಪ್ರಕ್ರಿಯೆ ನಡೆಯುತ್ತಿದೆ. ಈ ಬಗ್ಗೆ ಮಾಹಿತಿ ನೀಡುವಂತೆ ಸ್ಕ್ರ್ಯಾಪ್‌ ಡೀಲರ್‌ಗಳಿಗೂ ಸೂಚನೆ ನೀಡಿದ್ದೇವೆ. ಈ ಸೇತುವೆ 60 ಅಡಿ ಉದ್ದ ಮತ್ತು 12 ಅಡಿ ಎತ್ತರವಿತ್ತು ಎಂದು ನಸ್ರಿಗಂಜ್ ಎಸ್‌ಎಚ್‌ಒ ಸುಭಾಷ್ ಕುಮಾರ್ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

ಬಿಹಾರದ ರಾಜಧಾನಿ ಪಾಟ್ನಾದಿಂದ ಸುಮಾರು 120 ಕಿ.ಮೀ ದೂರದಲ್ಲಿರುವ ಅಮಿಯವಾರ್ ಗ್ರಾಮ ಇಂಥದ್ದಕ್ಕೆ ಸುದ್ದಿಯಾಗಿದ್ದು ಮೊದಲೇನಲ್ಲ. ಕಳ್ಳತನ ನಡೆದಿರುವ ಬಗ್ಗೆ ಸ್ಥಳೀಯರಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಕಳೆದ ವರ್ಷ ಸುಮಾರು 200 ಕೋಟಿ ರೂ.ಗಳಷ್ಟು ಮರಳು ಕಳ್ಳತನವಾಗಿತ್ತು.

ಅಂದಹಾಗೆ ಸೇತುವೆ ಕಳ್ಳತನ ಈ ಹಿಂದೆಯೂ ವರದಿಯಾಗಿತ್ತು. ಆದರೆ ಭಾರತದಲ್ಲಲ್ಲ! ಅಮೇರಿಕಾ, ಉಕ್ರೇನ್ ಮತ್ತು ಜೆಕ್ ರಿಪಬ್ಲಿಕ್ನಲ್ಲಿ ಸೇತುವೆಗಳನ್ನು ಕಳವು ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು.

ಇದನ್ನೂ ಓದಿ: ಜಗತ್ತಿನ ಯಾವುದೇ ಮಹಾನ್​ ಶಕ್ತಿಶಾಲಿ ದೇಶಗಳೂ ಭಾರತಕ್ಕೆ ಷರತ್ತು ವಿಧಿಸಲು ಸಾಧ್ಯವಿಲ್ಲ; ಮತ್ತೆ ಹೊಗಳಿದ ಇಮ್ರಾನ್​ ಖಾನ್​

ಬಡತನವನ್ನು ಮೀರಿನಿಂತು ಗೆಲ್ಲಲು ಹೊರಟ ಛಲಗಾರ್ತಿ, ಚಿನ್ನದ ಹುಡುಗಿ ಸ್ವಪ್ನ ಪೂಜಾರಿ

Published On - 10:02 am, Sat, 9 April 22