Viral Video: ಲೋಕಲ್ ರೈಲಿನಲ್ಲಿ ಜನರೊಂದಿಗೆ ಕುದುರೆ ಪ್ರಯಾಣಿಸುತ್ತಿರುವ ವಿಡಿಯೋ ವೈರಲ್
ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿರುವ ವಿಲಕ್ಷಣ ವಿಡಿಯೋ ಒಂದರಲ್ಲಿ ಲೋಕಲ್ ರೈಲಿನಲ್ಲಿ ಕುದುರೆಯೊಂದು ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಈ ಘಟನೆಯು ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಚಂಡೀಗಢ (ಏ.9): ಸುಮ್ಮನೆ ಮೊಬೈಲ್ ಹಿಡಿದು ಕೂತರೆ ಅಚ್ಚರಿಗೊಳಿಸುವ ಸಾವಿರಾರು ವಿಡಿಯೋಗಳು ಪ್ಲೇ ಆಗುತ್ತವೆ. ಅದೇ ರೀತಿಯ ವಿಚಿತ್ರವಾದ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿದೆ. ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿರುವ ವಿಲಕ್ಷಣ ವಿಡಿಯೋ ಒಂದರಲ್ಲಿ ಲೋಕಲ್ ರೈಲಿನಲ್ಲಿ ಕುದುರೆಯೊಂದು ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಈ ಘಟನೆಯು ಪಶ್ಚಿಮ ಬಂಗಾಳದಲ್ಲಿ (West Bengal) ನಡೆದಿದೆ. ರೈಲಿನಲ್ಲಿ ಕುದುರೆ ಪ್ರಯಾಣಿಸಲು ಸಾಧ್ಯವೇ? ಎಂದು ಅಚ್ಚರಿಪಡಬೇಡಿ. ಅನುಮಾನವಿದ್ದರೆ ನೀವೇ ಒಮ್ಮೆ ವಿಡಿಯೋ ನೋಡಿ.
ಪಶ್ಚಿಮ ಬಂಗಾಳದಲ್ಲಿ ಕ್ಲಿಪ್ ಸೀಲ್ಡಾ-ಡೈಮಂಡ್ ಹಾರ್ಬರ್ ಡೌನ್ ಲೋಕಲ್ ರೈಲಿನಲ್ಲಿ ಈ ಘಟನೆ ನಡೆದಿದೆ. ಈ ವೈರಲ್ ವಿಡಿಯೋದಲ್ಲಿ ಕುದುರೆಯ ಮಾಲೀಕ ಕೂಡ ಕುದುರೆಯೊಂದಿಗೆ ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಪಶ್ಚಿಮ ಬಂಗಾಳದಲ್ಲಿ ರೈಲಿನಲ್ಲಿ ಸಣ್ಣ ಪ್ರಾಣಿಗಳು ಪ್ರಯಾಣಿಸುವುದು ಸಾಮಾನ್ಯವಾಗಿದೆ. ಕೋಳಿ, ಕುರಿ, ನಾಯಿ ಮುಂತಾದ ಪ್ರಾಣಿಗಳನ್ನು ಇಲ್ಲಿನ ರೈಲಿನಲ್ಲಿ ಕೊಂಡೊಯ್ಯುವುದು ಸಾಮಾನ್ಯ. ಆದರೆ ದೊಡ್ಡ ಪ್ರಾಣಿಗಳಿಗೆ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ನೀಡುವುದಿಲ್ಲ.
Video of horse traveling via local train in West Bengal goes viral. #Watch:
A video of a #horse traveling via a local train in West Bengal has gone viral online. The incident happened onboard the Sealdah-Diamond Harbor Down local train. pic.twitter.com/r1MjIK4PPQ
— Vijayrampatrika (@vijayrampatrika) April 8, 2022
ವೈರಲ್ ಆಗಿರುವ ವಿಡಿಯೋದಲ್ಲಿರುವ ಕುದುರೆ ಬರೂಯ್‌ಪುರದಲ್ಲಿ ರೇಸ್‌ನಿಂದ ಹಿಂತಿರುಗುತ್ತಿದೆ ಎಂದು ಹೇಳಲಾಗಿದೆ. ಈ ರೈಲಿನ ಸಹ ಪ್ರಯಾಣಿಕರು ರೈಲನ್ನು ಹತ್ತುತ್ತಿದ್ದ ಕುದುರೆ ಮಾಲೀಕರನ್ನು ತಡೆದರು. ಆದರೆ, ಆತ ಅದಕ್ಕೆ ತಲೆಕೆಡಿಸಿಕೊಳ್ಳದೆ ಕುದುರೆಯನ್ನು ರೈಲಿನೊಳಗೆ ಹತ್ತಿಸಿದ್ದಾನೆ.
ರೈಲ್ವೇ ಅಧಿಕಾರಿಗಳು ಕೂಡ ವೈರಲ್ ವಿಡಿಯೋವನ್ನು ನೋಡಿ ಅಚ್ಚರಿಯಾಗಿದ್ದಾರೆ. ಆದರೆ ಅದರ ಸತ್ಯಾಸತ್ಯತೆಯನ್ನು ಇನ್ನೂ ಖಚಿತಪಡಿಸಿಲ್ಲ. “ನಾವು ಈ ವಿಡಿಯೋ ಮತ್ತು ಫೋಟೋವನ್ನು ನೋಡಿದ್ದೇವೆ. ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ” ಎಂದು ಪೂರ್ವ ರೈಲ್ವೆಯ PRO ಏಕಲವ್ಯ ಚಕ್ರವರ್ತಿ ಹೇಳಿದ್ದಾರೆ.
ಇದನ್ನೂ ಓದಿ: Viral Video: ದೇವಸ್ಥಾನದ ಒಡವೆ ಕದಿಯಲು ತಾನೇ ಕೊರೆದ ರಂಧ್ರದಲ್ಲಿ ಸಿಕ್ಕಿಹಾಕಿಕೊಂಡ ಕಳ್ಳ; ಆಮೇಲೇನಾಯ್ತು?
Viral Video: ಬಾಯಾರಿದ ಕೋತಿಗೆ ನೀರು ಕುಡಿಸಿದ ಟ್ರಾಫಿಕ್ ಪೊಲೀಸ್; ಹೃದಯಸ್ಪರ್ಶಿ ವಿಡಿಯೋಗೆ ನೆಟ್ಟಿಗರ ಮೆಚ್ಚುಗೆ