ಆಸ್ಟ್ರೇಲಿಯಾದಲ್ಲಿ ಪತ್ತೆಯಾದ ಅಪರೂಪದ ಬಿಳಿ ಕಾಂಗರೂ; ಇಲ್ಲಿದೆ ವೈರಲ್ ಫೋಟೋ
ಔಟ್‌ಬ್ಯಾಕ್ ಪಯೋನಿಯರ್ಸ್ ಎಂಬ ಫೇಸ್‌ಬುಕ್ ಪೇಜ್ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು, ನೀವು ಎಂದಾದರೂ ಪೊದೆಯಲ್ಲಿ ಅಲ್ಬಿನೋ ಕಾಂಗರೂವನ್ನು ಕಂಡಿದ್ದೀರಾ?
ವೈರಲ್ ಸುದ್ದಿ : ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಕ್ವೀನ್ಸ್‌ಲ್ಯಾಂಡ್‌ನಲ್ಲಿ ಬಿಳಿ ಕಾಂಗರೂ (White Kangaroo) ವನ್ನು ಕಂಡು ಅವರ ಅದೃಷ್ಟವನ್ನು ನಂಬಲು ಸಾಧ್ಯವಾಗಿಲ್ಲ. ನೊಗೊ ನಿಲ್ದಾಣದ ನಿವಾಸಿ ಸಾರಾ ಕಿನ್ನನ್ ಅವರು ಕಾಂಗರೂವನ್ನು ನೋಡಿದ್ದಾರೆ. ಅಪರೂಪದ ಪ್ರಾಣಿಯ ಕೆಲವು ಚಿತ್ರಗಳನ್ನು ಸಹ ಕ್ಲಿಕ್ ಮಾಡಿದ್ದಾರೆ. ಬಿಳಿ ಕಾಂಗರೂಗಳು ಅಪರೂಪವಾಗಿದ್ದು, ಪ್ರತಿ 50,000 ರಿಂದ 100,000 ಕಾಂಗರೂಗಳಲ್ಲಿ ಒಮ್ಮೆ ಮಾತ್ರ ಕಂಡುಬರುತ್ತವೆ. ನಾನು ನನ್ನ ಪತಿಯೊಂದಿಗೆ ಕೆಲವು ಟಗರುಗಳನ್ನು ಗದ್ದೆಗೆ ಬಿಡಲು ಹೋಗಿದ್ದಾಗ ಬಿಳಿ ಕಾಂಗರೂ ಕಾಣಿಸಿದೆ ಎಂದು ಅವರು ಎಬಿಸಿ ನ್ಯೂಸ್‌ಗೆ ತಿಳಿಸಿದ್ದಾರೆ. ಅದು ನೋಡಲು ಬಹಳ ಅದ್ಭುತವಾಗಿತ್ತು. ಅದು ಬಿಳಿ ಹಾಳೆಯಷ್ಟು ಬಿಳಿಯಾಗಿತ್ತು. ಇದು ನಿಜವಾಗಿಯೂ ನನ್ನನ್ನು ಬೆಚ್ಚಿಬೀಳಿಸಿದೆ. ನನ್ನ ಕ್ಯಾಮೆರಾದಲ್ಲಿ ಅದರ ಫೋಟೋ ತೆಗೆದೆ ಎಂದು ಅವರು ಹೇಳಿದರು. ಔಟ್‌ಬ್ಯಾಕ್ ಪಯೋನಿಯರ್ಸ್ ಎಂಬ ಫೇಸ್‌ಬುಕ್ ಪೇಜ್ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು, ನೀವು ಎಂದಾದರೂ ಪೊದೆಯಲ್ಲಿ ಅಲ್ಬಿನೋ ಕಾಂಗರೂವನ್ನು ಕಂಡಿದ್ದೀರಾ? ನಿನ್ನೆ, ಸಾರಾ ಕಿನ್ನನ್ ನೊಗೊ ಈ ಅಪರೂಪದ ಮತ್ತು ಸುಂದರವಾದ ಮಾರ್ಸ್ಪಿಯಲ್ನ್ನು ನೋಡಿದ್ದಾರೆ. ಮತ್ತು ಅವರು ಬಿಳಿ ಕಾಂಗರೂದ ಫೋಟೋವನ್ನು ತೆಗೆದಿದ್ದಾರೆ ಎಂದು ಬರೆಯಲಾಗಿದೆ.
ಚಿತ್ರವನ್ನು ನೋಡುವಾಗ ಅದು ಕಪ್ಪು ಕಣ್ಣುಗಳನ್ನು ಹೊಂದಿರುವಂತೆ ಕಾಣುತ್ತದೆ. ಖಚಿತವಾಗಿ ನೋಡಲು ಕಷ್ಟ ಆದರೆ ಇದು ಅಲ್ಬಿನೋ ಅಲ್ಲ ಎಂದು ಸೂಚಿಸುತ್ತದೆ. ನೀವು ನಿಜವಾದ ಅಲ್ಬಿನೋವನ್ನು ಕಾನಬಹುದು. ಅದು ಗುಲಾಬಿ ಕಣ್ಣುಗಳನ್ನು ಹೊಂದಿರುತ್ತದೆ ಅಥವಾ ಕೆಲವೊಮ್ಮೆ ಲ್ಯೂಸಿಸಮ್ ಎಂಬ ಇನ್ನೊಂದು ರೀತಿಯ ರೂಪಾಂತರವಿದೆ. ಅಲ್ಲಿ ಕೆಲವೊಮ್ಮೆ ಅವರು ಕಪ್ಪು ಕಣ್ಣುಗಳನ್ನು ಹೊಂದಿರುತ್ತದೆ ಎಂದು ಅವರು ಎಬಿಸಿಗೆ ಹೇಳಿದ್ದಾರೆ.