ರಷ್ಯಾದಲ್ಲಿ ಐಷಾರಾಮಿ ಬ್ರ್ಯಾಂಡ್ ವಸ್ತುಗಳ ಮಾರಾಟಕ್ಕೆ ನಿಷೇಧ; ಬ್ಯಾಗ್ ಕತ್ತರಿಸಿ ಪ್ರತಿಭಟಿಸಿದ ರಷ್ಯನ್ ಮಹಿಳೆಯರು
ರಷ್ಯಾದ ಕೆಲವು ಶ್ರೀಮಂತ ಮಹಿಳೆಯರು ತಮ್ಮ ದುಬಾರಿ ಶನೆಲ್ ಬ್ಯಾಗ್‌ಗಳನ್ನು ಕತ್ತರಿಸಿ, ಆ ಬ್ರ್ಯಾಂಡ್‌ನ ಹೊಸ ವಸ್ತುಗಳನ್ನು ಖರೀದಿಗಳನ್ನು ಮಾಡುವುದನ್ನು ನಿರ್ಬಂಧಿಸುವ ಕಂಪನಿಯ ಕ್ರಮದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ.
ನವದೆಹಲಿ: ಉಕ್ರೇನ್‌ನ ಮೇಲೆ ನಡೆಯುತ್ತಿರುವ ರಷ್ಯಾದ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ಐಷಾರಾಮಿ ಫ್ಯಾಷನ್ ಬ್ರ್ಯಾಂಡ್ ಶನೆಲ್ ತನ್ನ ಉತ್ಪನ್ನಗಳನ್ನು ರಷ್ಯಾಕ್ಕೆ ಹಿಂತಿರುಗಿಸಲು ಯೋಜಿಸಿದರೆ ವಿದೇಶದಲ್ಲಿರುವ ರಷ್ಯಾದ ಗ್ರಾಹಕರಿಗೆ ಬಟ್ಟೆ, ಸುಗಂಧ ದ್ರವ್ಯಗಳು ಮತ್ತು ಇತರ ಐಷಾರಾಮಿ ವಸ್ತುಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲು ನಿರ್ಧರಿಸಿದೆ. ಈ ಹಿಂದೆ, ಶನೆಲ್ ರಷ್ಯಾದಲ್ಲಿ ತನ್ನ ವ್ಯಾಪಾರವನ್ನು ಸ್ಥಗಿತಗೊಳಿಸಿ, ಇತರೆ ಕಂಪನಿಗಳೊಂದಿಗೆ ತನ್ನ ಅಂಗಡಿಗಳನ್ನು ಕೂಡ ಮುಚ್ಚಿತ್ತು. “ಇತ್ತೀಚೆಗೆ ರಷ್ಯಾದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಐಷಾರಾಮಿ ಸರಕುಗಳ ಮಾರಾಟ, ಪೂರೈಕೆ, ವರ್ಗಾವಣೆ ಅಥವಾ ರಫ್ತು ಮೇಲಿನ ನಿಷೇಧವನ್ನು ಹೇರಲಾಗಿದೆ ಎಂದು ಶನೆಲ್ ಹೇಳಿತ್ತು. ಶನೆಲ್ ಬ್ರ್ಯಾಂಡ್‌ನ ಈ ಕ್ರಮವು ರಷ್ಯನ್ನರಿಗೆ ಇಷ್ಟವಾಗಲಿಲ್ಲ. ಪ್ರತಿಭಟನೆಯ ಭಾಗವಾಗಿ ರಷ್ಯನ್ ಮಹಿಳೆಯರು ತಮ್ಮ ಶನೆಲ್ ಬ್ಯಾಗ್‌ಗಳನ್ನು ಕತ್ತರಿಸಿ ಪ್ರತಿಭಟನೆ ಮಾಡಿದ್ದಾರೆ.
“ಯಾವುದೇ ಬ್ರ್ಯಾಂಡ್ ತಮ್ಮ ಗ್ರಾಹಕರೊಂದಿಗೆ ಶನೆಲ್ ಬ್ರ್ಯಾಂಡ್ನಂತೆ ಅಗೌರವದಿಂದ ವರ್ತಿಸುವುದನ್ನು ನೋಡಿಲ್ಲ” ಎಂದು ರಷ್ಯಾದ ಮಾಡೆಲ್ ಮತ್ತು ನಟ ವಿಕ್ಟೋರಿಯಾ ಬೋನ್ಯಾ ಬರೆದಿದ್ದಾರೆ. ಅಲ್ಲದೆ, ಶನೆಲ್ ಬ್ರ್ಯಾಂಡ್‌ನ ಕಪ್ಪು ಸ್ಲಿಂಗ್ ಬ್ಯಾಗ್ ಅನ್ನು ಕತ್ತರಿಸುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
View this post on Instagram
ಇನ್ನೊಬ್ಬ ರಷ್ಯಾದ ಪ್ರಸಿದ್ಧ ಮರೀನ್ ಎರ್ಮೋಶ್ಕಿನಾ “ನಾನು ರುಸ್ಸೋಫೋಬಿಯಾವನ್ನು ಬೆಂಬಲಿಸುವ ಬ್ರ್ಯಾಂಡ್‌ಗೆ ವಿರುದ್ಧವಾಗಿದ್ದೇನೆ” ಎಂದು ಬರೆದಿದ್ದಾರೆ. “ನೀವು ಶನೆಲ್‌ಗಾಗಿ ಮಾತೃಭೂಮಿಯನ್ನು ಮಾರಾಟ ಮಾಡುವುದಾದರೆ ನನಗೆ ಅಂತಹ ಶನೆಲ್ ಅಗತ್ಯವಿಲ್ಲ.” ಎಂದಿದ್ದಾರೆ.
View this post on Instagram
ರಷ್ಯಾದ ಕೆಲವು ಶ್ರೀಮಂತ ಮಹಿಳೆಯರು ತಮ್ಮ ದುಬಾರಿ ಶನೆಲ್ ಬ್ಯಾಗ್‌ಗಳನ್ನು ಕತ್ತರಿಸಿ, ಆ ಬ್ರ್ಯಾಂಡ್‌ನ ಹೊಸ ವಸ್ತುಗಳನ್ನು ಖರೀದಿಗಳನ್ನು ಮಾಡುವುದನ್ನು ನಿರ್ಬಂಧಿಸುವ ಕಂಪನಿಯ ಕ್ರಮದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಮಹಿಳೆಯರು, ಮಾಡೆಲ್‌ಗಳು, ಟೆಲಿವಿಷನ್ ನಿರೂಪಕರು ಮತ್ತು ಡಿಸ್ಕೋ ಜಾಕಿಗಳು ತಮ್ಮ ಶನೆಲ್ ಬ್ಯಾಗ್‌ಗಳಿಗೆ ಕತ್ತರಿ ಹಾಕುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
View this post on Instagram
ಈ ವಿಡಿಯೋಗಳನ್ನು ಪೋಸ್ಟ್ ಮಾಡಿದ ಮಹಿಳೆಯರಲ್ಲಿ ಮಾಡೆಲ್ ವಿಕ್ಟೋರಿಯಾ ಬೋನ್ಯಾ ಕೂಡ ತಮ್ಮ 9.3 ಮಿಲಿಯನ್ ಅನುಯಾಯಿಗಳಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಷ್ಯಾದ ದೂರದರ್ಶನ ನಿರೂಪಕಿ ಮತ್ತು ನಟಿ ಮರೀನಾ ಎರ್ಮೋಶ್ಕಿನಾ ಕೂಡ ಶನೆಲ್ ಬ್ಯಾಗ್ ಕತ್ತರಿಸಿದ್ದಾರೆ. ಅಲ್ಲದೆ, ನಾನು “ರುಸ್ಸೋಫೋಬಿಯಾ-ಪೋಷಕ ಬ್ರ್ಯಾಂಡ್‌ಗಳ” ವಿರುದ್ಧವಾಗಿದ್ದೇನೆ ಎಂದು ಹೇಳಿದ್ದಾರೆ.
ಈ ಸೆಲೆಬ್ರಿಟಿಗಳಲ್ಲಿ ಯಾರೂ ರಷ್ಯಾದ ಆಕ್ರಮಣದಿಂದ ನಿರಾಶ್ರಿತರಾಗಿರುವ ಲಕ್ಷಾಂತರ ಜನರು ತಮ್ಮ ಪ್ರಾಣ ಕಳೆದುಕೊಂಡವರ ಬಗ್ಗೆ ಯಾವುದೇ ಕಾಳಜಿಯನ್ನು ತೋರಿಸಲಿಲ್ಲ ಎಂದು ಈ ಮಹಿಳೆಯರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಲ್ಲಿ ಕಾಮೆಂಟ್ ಮಾಡಿದ ಕೆಲವು ಬಳಕೆದಾರರು ಈ ಭಾವನೆಯನ್ನು ಪ್ರತಿಧ್ವನಿಸಿದ್ದಾರೆ.
ಇದನ್ನೂ ಓದಿ: Russia-Ukraine War: ಉಕ್ರೇನ್ ರೈಲ್ವೆ ನಿಲ್ದಾಣದ ಮೇಲೆ ರಷ್ಯಾದ ರಾಕೆಟ್ ದಾಳಿ; 39 ಜನ ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ
Russia-Ukraine Crisis ಬುಕಾ ಹತ್ಯೆ: ಯುದ್ಧ ಅಪರಾಧಗಳ ವಿಚಾರಣೆ ಮಾಡಬೇಕೆಂದು ಕರೆ ನೀಡಿದ ಅಮೆರಿಕ ಅಧ್ಯಕ್ಷ ಬೈಡನ್