ಕೊರೊನಾಗೆ ರಾಜಸ್ಥಾನ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಪಹಡಿಯಾ ನಿಧನ, ಗಣ್ಯರಿಂದ ಕಂಬನಿ

|

Updated on: May 20, 2021 | 9:39 AM

ಜಗನ್ನಾಥ ಪಹಡಿಯಾ 1980-81ರಲ್ಲಿ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೂ ಪಹಡಿಯಾ ಹರಿಯಾಣ ಮತ್ತು ಬಿಹಾರದ ಮಾಜಿ ಗವರ್ನರ್ ಸಹ ಆಗಿದ್ದರು. ಆದರೆ ಕೊರೊನಾಗೆ ತಮ್ಮ 89ನೆ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ಕೊರೊನಾಗೆ ರಾಜಸ್ಥಾನ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಪಹಡಿಯಾ ನಿಧನ, ಗಣ್ಯರಿಂದ ಕಂಬನಿ
ರಾಜಸ್ಥಾನ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಪಹಡಿಯಾ ನಿಧನ
Follow us on

ಮಹಾಮಾರಿ ಕೊರೊನಾ ಸೋಂಕಿಗೆ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಪಹಡಿಯಾ(89) ನಿಧನರಾಗಿದ್ದಾರೆ.

ಜಗನ್ನಾಥ ಪಹಡಿಯಾ 1980-81ರಲ್ಲಿ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೂ ಪಹಡಿಯಾ ಹರಿಯಾಣ ಮತ್ತು ಬಿಹಾರದ ಮಾಜಿ ಗವರ್ನರ್ ಸಹ ಆಗಿದ್ದರು. ಆದರೆ ಕೊರೊನಾಗೆ ತಮ್ಮ 89ನೆ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಜಗನ್ನಾಥ ಪಹಡಿಯಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಪಹಡಿಯಾ ನಿಧನ ತುಂಬಾ ಆಘಾತ ತಂದಿದೆ. ಕೊರೊನಾ ಕಾರಣದಿಂದಾಗಿ ಪಹಡಿಯಾ ನಮ್ಮನ್ನು ತೊರೆದಿದ್ದಾರೆ. ಅವರ ನಿಧನದಿಂದ ನಾನು ತುಂಬಾ ಆಘಾತಕ್ಕೊಳಗಾಗಿದ್ದೇನೆ. ಮೊದಲಿನಿಂದಲೂ ಅವರಿಗೆ ನನ್ನ ಬಗ್ಗೆ ತುಂಬಾ ಪ್ರೀತಿ ಇತ್ತು” ಎಂದು ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ. ಪಹಡಿಯಾ ಅವರ ಸಾವು ಅವರಿಗೆ ವೈಯಕ್ತಿಕ ನಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.

ಮೋದಿ ಸಂತಾಪ
ಜಗನ್ನಾಥ್ ಪಹಡಿಯಾ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ರಾಜಕೀಯ ಹಾಗೂ ಆಡಳಿತಕ್ಕೆ‌ ಜಗನ್ನಾಥ ಅವರ ಅಮೋಘ ಕಾಣಿಕೆಯನ್ನು ಪ್ರಧಾನಿ ನೆನಪಿಸಿಕೊಂಡಿದ್ದು ಅವರ ಆತ್ಮಕ್ಕೆ‌ ಶಾಂತಿ ಸಿಗಲಿ, ಕುಟುಂಬಸ್ಥರಿಗೆ‌ ನೋವನ್ನು ಭರಿಸೋ‌ ಶಕ್ತಿ‌ ನೀಡಲೆಂದು‌ ಕೋರಿಕೊಂಡಿದ್ದಾರೆ.

ಸರ್ಕಾರ ಗುರುವಾರ ಒಂದು ದಿನದ ಶೋಕಾಚರಣೆಯನ್ನು ಘೋಷಿಸಿದ್ದು, ಈ ಸಂದರ್ಭದಲ್ಲಿ ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗುವುದು ಮತ್ತು ರಾಷ್ಟ್ರಧ್ವಜ ಅರ್ಧದಷ್ಟು ಹಾರಾಟ ನಡೆಸಲಿದೆ.

ಇದನ್ನೂ ಓದಿ: ಬೇರೊಬ್ಬ ಆಟಗಾರನ ಸ್ಥಾನ ಕಸಿದುಕೊಳ್ಳಲು ನನಗೆ ಮನಸ್ಸಿಲ್ಲ; ತಂಡಕ್ಕೆ ಮರಳದಿರಲು ಕಾರಣ ನೀಡಿದ ಡಿವಿಲಿಯರ್ಸ್