23 ವರ್ಷಗಳ ಬಳಿಕ ಜೈಲಿನಿಂದ ಹೊರ ಬಂದ ನಜ್ಜು, ಉತ್ತರ ಪ್ರದೇಶದ ದೇವಸ್ಥಾನಕ್ಕೆ 101ಕೆಜಿ ತೂಕದ ಘಂಟೆ ಅರ್ಪಣೆ

ಮೂವರು ಪೊಲೀಸರನ್ನು ಗುಂಡಿಕ್ಕಿ ಹತ್ಯೆ ಮಾಡಿ 23 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಗೊಂಡಿರುವ ನಜ್ಜು ಅಲಿಯಾಸ್ ರಜ್ಜು ಉತ್ತರ ಪ್ರದೇಶದ ದೇವಸ್ಥಾನಕ್ಕೆ 101 ಕೆಜಿ ತೂಕದ ಘಂಟೆಯನ್ನು ಅರ್ಪಿಸಿದ್ದಾರೆ.

23 ವರ್ಷಗಳ ಬಳಿಕ ಜೈಲಿನಿಂದ ಹೊರ ಬಂದ ನಜ್ಜು, ಉತ್ತರ ಪ್ರದೇಶದ ದೇವಸ್ಥಾನಕ್ಕೆ 101ಕೆಜಿ ತೂಕದ ಘಂಟೆ ಅರ್ಪಣೆ
ಗಂಟೆ(ಸಾಂದರ್ಭಿಕ ಚಿತ್ರ)Image Credit source: Rediff.com
Follow us
|

Updated on: Aug 02, 2023 | 11:25 AM

ಮೂವರು ಪೊಲೀಸರನ್ನು ಗುಂಡಿಕ್ಕಿ ಹತ್ಯೆ ಮಾಡಿ 23 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಗೊಂಡಿರುವ ನಜ್ಜು ಅಲಿಯಾಸ್ ರಜ್ಜು ಉತ್ತರ ಪ್ರದೇಶದ ದೇವಸ್ಥಾನಕ್ಕೆ 101 ಕೆಜಿ ತೂಕದ ಘಂಟೆಯನ್ನು ಅರ್ಪಿಸಿದ್ದಾರೆ. ನಜ್ಜು ಕತ್ರಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ವೀರ್ ವಿಕ್ರಮ್ ಸಿಂಗ್ ಅವರೊಂದಿಗೆ ವೇದಿಕೆ ಹಂಚಿಕೊಂಡರು. ಸೋಮವಾರ ನಜ್ಜು ಅಲಿಯಾಸ್ ರಜ್ಜು ಎಂಬಾತ ಜಿಲ್ಲೆಯ ಪರೌರ್ ಪ್ರದೇಶದ ದೇವಸ್ಥಾನದಲ್ಲಿ ಶಾಸಕರ ಜತೆಗೂಡಿ ಗಂಟೆ ಅರ್ಪಿಸಿದರು.

ನಜ್ಜು ತಮ್ಮ ಚಿಕ್ಕಪ್ಪ ಎಂದು ಉಲ್ಲೇಖಿಸಿದ ಶಾಸಕರು, ನಜ್ಜು ಸಾಕಷ್ಟು ಕಷ್ಟಪಟ್ಟಿದ್ದಾರೆ ಎಂದು ಹೇಳಿದರು. ಅವರು ಮಾಡಿದ ತಪ್ಪಿಗೆ ಅವರು 23 ವರ್ಷಗಳ ಕಾಲ ಶಿಕ್ಷೆ ಅನುಭವಿಸಿದ್ದಾರೆ, ಇಂದು, 23 ವರ್ಷಗಳ ನಂತರ, ಅವರು ಬಿಡುಗಡೆಯಾಗಿದ್ದಾರೆ. ನಾನು ಅವರನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ.

ಮತ್ತಷ್ಟು ಓದಿ: Bengaluru News: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ವಿರುದ್ಧ ಎಫ್​ಐಆರ್; ಕಾರಣವೇನು ಗೊತ್ತಾ?

ಘಂಟೆಯನ್ನು ಅರ್ಪಿಸಿದ ನಂತರ, ನಜ್ಜು ಅವರು ಮಾಡಿದ ಅಪರಾಧಗಳಿಗೆ ಪಶ್ಚಾತ್ತಾಪ ಪಟ್ಟರು ಮತ್ತು ಯುವ ಪೀಳಿಗೆ ಅಪರಾಧದಿಂದ ದೂರವಿದ್ದು ತಮ್ಮ ಭವಿಷ್ಯ ಮತ್ತು ಕುಟುಂಬದತ್ತ ಗಮನ ಹರಿಸುವಂತೆ ಮನವಿ ಮಾಡಿದರು. ಯಾವುದೇ ವ್ಯಕ್ತಿ ಅಪರಾಧ ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಸೇರಲು ಬಯಸಿದರೆ ನಾನು ಅವರಿಗೆ ಸಹಾಯ ಮಾಡುತ್ತೇನೆ ಎಂದು ಕತ್ರಾ ಶಾಸಕರು ಹೇಳಿದರು. ಮಾಡಿದ ಅಪರಾಧಗಳಿಗೆ ಕ್ಷಮೆಯಾಚಿಸಿದರು ಮತ್ತು ಅವರು ಸಾಮಾನ್ಯ ಮನುಷ್ಯನ ಜೀವನವನ್ನು ನಡೆಸುವೆ ಎಂದು ಪ್ರತಿಜ್ಞೆ ಮಾಡಿದರು.

ನಜ್ಜು ವಿರುದ್ಧ ಜಿಲ್ಲೆಯಲ್ಲಿ 15 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಮೀನಾ ತಿಳಿಸಿದ್ದಾರೆ. 1999 ರಲ್ಲಿ, ನಜ್ಜು ಮೂವರು ಪೊಲೀಸ್ ಅಧಿಕಾರಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ನಂತರ ಪೊಲೀಸರು ಅವರ ಮೇಲೆ ಒತ್ತಡ ಹೇರಿದ್ದರಿಂದ, ಅವರು 1999 ರಲ್ಲಿ ಶರಣಾದರು ಮತ್ತು ಅಂದಿನಿಂದ ಅವರು ಬರೇಲಿ ಸೆಂಟ್ರಲ್ ಜೈಲಿನಲ್ಲಿದ್ದರು ಎಂದು ಮೀನಾ ಹೇಳಿದರು.

ಷಹಜಹಾನ್‌ಪುರ, ಬರೇಲಿ, ಫರೂಕಾಬಾದ್, ಬುಡೌನ್, ಇಟಾಹ್ ಮತ್ತು ಹರ್ದೋಯಿ ಜಿಲ್ಲೆಗಳಲ್ಲಿ ನಜ್ಜು ಗ್ಯಾಂಗ್‌ನ ಪ್ರಭಾವವಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಹೊಸ ಜೀವನ ಸಿಕ್ಕಿದೆ’; ಅಪಘಾತದ ನಂತರ ಮುಶೀರ್ ಖಾನ್ ಮೊದಲ ಮಾತು
‘ಹೊಸ ಜೀವನ ಸಿಕ್ಕಿದೆ’; ಅಪಘಾತದ ನಂತರ ಮುಶೀರ್ ಖಾನ್ ಮೊದಲ ಮಾತು
ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?