ದೆಹಲಿ: ಕೊವಿಡ್ 19 ಸೋಂಕಿಗೆ ತುತ್ತಾಗಿದ್ದ ದೆಹಲಿ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಎ.ಕೆ.ವಾಲಿಯಾ, ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟರು. ಕೊರೊನಾ ಸೋಂಕು ತಗುಲಿದ ಬಳಿಕ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ 72ವರ್ಷ ವಯಸ್ಸಾಗಿತ್ತು.
ಎ.ಕೆ.ವಾಲಿಯಾ ವೃತ್ತಿಯಲ್ಲಿ ವೈದ್ಯರಾಗಿದ್ದವರು. ನಂತರ ರಾಜಕೀಯ ಜೀವನಕ್ಕೆ ಕಾಲಿಟ್ಟಿದ್ದರು. ದೆಹಲಿ ವಿಧಾನಸಭೆಗೆ ನಾಲ್ಕು ಬಾರಿ ಆಯ್ಕೆ ಆಗಿ ಹೋಗಿದ್ದಾರೆ. ಶೀಲಾ ದೀಕ್ಷಿತ್ ಮುಖ್ಯಮಂತ್ರಿಯಾಗಿದ್ದಾಗ ಆರೋಗ್ಯ ಸಚಿವರಾಗಿ, ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
ಅದರ ಮಧ್ಯೆ ಲಕ್ಷ್ಮೀ ನಗರದಲ್ಲಿ ಕ್ಲಿನಿಕ್ವೊಂದನ್ನೂ ಹೊಂದಿದ್ದರು. 1993ರಲ್ಲಿ ಮೊದಲ ಬಾರಿಗೆ ಪೂರ್ವ ದೆಹಲಿಯ ಗೀತಾ ಕಾಲನಿಯಿಂದ ಚುನಾವಣೆಗೆ ಸ್ಪರ್ಧಿಸಿದರು. ನಂತರ ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯಲ್ಲಿ ಹಣಕೊಟ್ಟವರಿಗೆ ಟಿಕೆಟ್ ಕೊಡಲಾಗಿದೆ ಎಂದು ಆರೋಪಿಸಿ 2017ರಲ್ಲಿ ಒಮ್ಮೆ ಕಾಂಗ್ರೆಸ್ನ್ನು ತೊರೆದಿದ್ದರು. ಮತ್ತೆ ಕಾಂಗ್ರೆಸ್ ಸೇರಿದ್ದ ಎ.ಕೆ.ವಾಲಿಯಾ, 2020ರಲ್ಲಿ ಕಾಂಗ್ರೆಸ್ನಿಂದ ಕೃಷ್ಣಾನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆಪ್ ವಿರುದ್ಧ ಸೋತಿದ್ದರು.
ದೇಶದಲ್ಲಿ ಕೊರೊನಾ ಅಲೆ ವಿಪರೀತ ಏರುತ್ತಿದೆ. ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ ಪುತ್ರ ಆಶೀಶ್ ಯಚೂರಿ (35) ಕೂಡ ಇಂದು ಮುಂಜಾನೆ ಕೊವಿಡ್ನಿಂದ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ಸೊಂಕು ಹೆಚ್ಚಳ ಹಿನ್ನೆಲೆ ಕೆನರಾ ಬ್ಯಾಂಕ್‌ನಿಂದ ಸೇವಾ ಸಮಯ ಕಡಿತ, 10 ರಿಂದ ಮಧ್ಯಾಹ್ನ 2ರವರೆಗೆ ಮಾತ್ರ ಜನರಿಗೆ ಅವಕಾಶ
ಪ್ರಶಾಂತ್ ನೀಲ್ ಸಿನಿಮಾದಲ್ಲಿ ಇರಲ್ವಾ ನಾಯಕಿಗೆ ಪ್ರಾಮುಖ್ಯತೆ.. ನೋಡಿ ಈ ಸ್ಟೋರಿ
Former Delhi Health Minister AK Walia Dies due to covid 19
Published On - 10:34 am, Thu, 22 April 21