AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol, Diesel price: ವಿಧಾನಸಭೆ ಚುನಾವಣೆಗಳು ಮುಗಿದ ತಕ್ಷಣವೇ ಏರಲಿದೆಯಾ ತೈಲ ಬೆಲೆಗಳು?

ಪಶ್ಚಿಮ ಬಂಗಾಲದಲ್ಲಿ ಅಂತಿಮ ಹಂತದ ಮತದಾನ ಏಪ್ರಿಲ್ 29ರಂದು ಮುಗಿದ ತಕ್ಷಣ ಪೆಟ್ರೋಲ್- ಡೀಸೆಲ್ ಬೆಲೆಯಲ್ಲಿ 2ರಿಂದ 3 ರೂಪಾಯಿ ಏರಿಕೆ ಆಗುತ್ತದೆಯೇ ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ.

Petrol, Diesel price: ವಿಧಾನಸಭೆ ಚುನಾವಣೆಗಳು ಮುಗಿದ ತಕ್ಷಣವೇ ಏರಲಿದೆಯಾ ತೈಲ ಬೆಲೆಗಳು?
ಪೆಟ್ರೋಲ್​, ಡೀಸೆಲ್​ (ಸಾಂದರ್ಭಿಕ ಚಿತ್ರ)
Follow us
Srinivas Mata
|

Updated on: Apr 21, 2021 | 10:56 PM

ಈಗ ನಡೆಯುತ್ತಿರುವ ವಿಧಾನಸಭೆ ಚುನಾವಣೆಗಳು ಮುಗಿದ ಮೇಲೆ ಪೆಟ್ರೋಲ್ ಮತ್ತು ಡೀಸೆಲ್ ರೀಟೇಲ್ ದರಗಳನ್ನು ತೈ ಕಂಪೆನಿಗಳು ಹಂತಹಂತವಾಗಿ ಲೀಟರ್​ಗೆ 2ರಿಂದ 3 ರೂಪಾಯಿವರೆಗೂ ಜಾಸ್ತಿ ಮಾಡಬಹುದು. ಚುನಾವಣೆಗಳು ನಡೆಯುತ್ತಿವೆ ಎಂಬ ಕಾರಣಕ್ಕೆ ಕೃತಕವಾಗಿ ಕಡಿಮೆ ಮಟ್ಟದಲ್ಲೇ ಇರಿಸಲಾಗಿತ್ತು. ಆ ನಷ್ಟವನ್ನು ಈಗ ಭರಿಸಲಾಗುತ್ತದೆ. ಸರ್ಕಾರಿ ಮೂಲಗಳ ಪ್ರಕಾರ, ತೈಲ ಕಂಪೆನಿಗಳು ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಲ್ಲಿ ಲೀಟರ್​ಗೆ ಕ್ರಮವಾಗಿ 3 ಮತ್ತು 2 ರೂಪಾಯಿ ನಷ್ಟವನ್ನು ಅನುಭವಿಸುತ್ತಿವೆ. ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರಿಕೆ ಆಗಿರುವುದರಿಂದ ಅದು ಕೂಡ ಬೆಲೆಯ ಮೇಲೆ ಪರಿಣಾಮ ಬೀರಿದೆ.

ಕೆಲ ದಿನಗಳ ಕಾಲ ಬೆಲೆಯನ್ನು ಏರಿಕೆ ಮಾಡುತ್ತಾ ಜಾಗತಿಕ ಮಾರುಕಟ್ಟೆ ದರದ ತನಕ ತರಲಾಗುತ್ತದೆ. ಅಂದಹಾಗೆ ಫೆಬ್ರವರಿ 27, 2021ರಿಂದ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ ಆಗಿಲ್ಲ. ಹಾಗೆ ನೋಡಿದರೆ ಮಾರ್ಚ್ ಮತ್ತು ಏಪ್ರಿಲ್​ನಲ್ಲಿ ನಾಲ್ಕು ಸಲ ವಾಹನ ತೈಲ ದರ ಇಳಿಕೆ ಆಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ 77 ಪೈಸೆ ಹಾಗೂ ಡೀಸೆಲ್ ದರ 74 ಪೈಸೆ ಇಳಿದಿದೆ.

ಭಾರತದ ಬ್ಯಾಸ್ಕೆಟ್​ನ ಕಚ್ಚಾ ತೈಲ ದರವು ಬ್ಯಾರೆಲ್​ಗೆ 61.22 ಅಮೆರಿಕನ್ ಡಾಲರ್ ಮುಟ್ಟಿತ್ತು ಫೆಬ್ರವರಿ ತಿಂಗಳಲ್ಲಿ. ಮಾರ್ಚ್ ತಿಂಗಳ ಸರಾಸರಿಯಾದ 64.73 ಯುಎಸ್​ಡಿ ಹಾಗೂ ಏಪ್ರಿಲ್​ನ 66 ಯುಎಸ್​ಡಿಗಿಂತ ಆಗ ಕಡಿಮೆ ಇತ್ತು. ಪೆಟ್ರೋಲ್ ಮತ್ತು ಡೀಸೆಲ್​ನ ರೀಟೇಲ್ ದರವನ್ನು 15 ದಿನಗಳ ಜಾಗತಿಕ ಸರಾಸರಿ ಬೆಲೆ ಮೇಲೆ ನಿರ್ಧರಿಸಲಾಗುತ್ತದೆ. ರೀಟೇಲ್ ದರವನ್ನು ಇಳಿಕೆ ಮಾಡಿದರೆ ತೈಲ ಮಾರ್ಕೆಟಿಂಗ್ ಕಂಪೆನಿಗಳಿಗೆ ನಷ್ಟವಾಗುತ್ತದೆ. ಚುನಾವಣೆ ಮುಗಿಯುವ ತನಕ ಕಾಯಬಹುದಾದ ತೈಲ ಕಂಪೆನಿಗಳು ಬೆಲೆ ಏರಿಕೆ ಮಾಡುವುದಕ್ಕೆ ಇನ್ನು ಹೆಚ್ಚು ಸಮಯ ಕಾಯುವುದಿಲ್ಲ. ಆದರೆ ಸರ್ಕಾರದಿಂದ ಬರುವ ಸೂಚನೆ ಮೇಲೆ ತೈಲ ಬೆಲೆಯ ಪರಿಷ್ಕರಣೆ ಆಗುತ್ತದೆ.

ಅಮೆರಿಕ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಸಾರ್ವಜನಿಕ ವಲಯ ತೈಲ ಕಂಪೆನಿ ಮೂಲಗಳ ಪ್ರಕಾರ, ಪ್ರಬಲ ರೂಪಾಯಿ ಮೌಲ್ಯವು ಕಡಿಮೆ ಬೆಲೆಗೆ ತೈಲ ದೊರೆಯುವಂತೆ ಮಾಡುತ್ತದೆ. ಆದ್ದರಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವಾಸ್ತವ ಹೊಂದಾಣಿಕೆ ಹೆಚ್ಚು ಭಾರವಾಗುವುದಿಲ್ಲ. ಆದರೆ ಇವೆಲ್ಲವೂ ಏಪ್ರಿಲ್​ನಲ್ಲಿ ಅಮೆರಿಕ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಎಲ್ಲಿಗೆ ತಲುಪುತ್ತದೆ ಎಂಬುದರ ಮೇಲೆ ನಿಶ್ಚಯ ಆಗುತ್ತದೆ.

”ಜಾಗತಿಕ ತೈಲ ಮಾರುಕಟ್ಟೆ ದರವನ್ನು ಅನುಸರಿಸಿ ತೈಲ ಬೆಲೆ ಏರಿಕೆ ಮಾಡುವುದನ್ನು ಕಳೆದ ಒಂದು ತಿಂಗಳಿಂದ ತೈಲ ಪಿಎಸ್​ಯುಗಳು ತಡೆದಿವೆ. ರಾಜ್ಯಗಳ ಚುನಾವಣೆ ಮುಗಿಯುವ ತನಕ, ಅಂದರೆ ಈ ತಿಂಗಳ ಕೊನೆ ತನಕ ಇದು ಮುಂದುವರಿಯಬಹುದು. ಕೊರೊನಾ ಪ್ರಕರಣ ಹೆಚ್ಚುತ್ತಿರುವುದರಿಂದ ಜನರು ಮತ್ತೂ ಸಿಟ್ಟಾಗಬಾರದು ಅಂತ ತೈಲ ಬೆಲೆ ಹೆಚ್ಚು ಮಾಡದಂತೆ ಹೊಸದಾಗಿ ಸರ್ಕಾರದಿಂದ ಸೂಚನೆ ಬಾರದ ಹೊರತು ಚುನಾವಣೆಗಳು ಮುಗಿದ ತಕ್ಷಣ ಬೆಲೆಯಲ್ಲಿ ಭಾರೀ ಏರಿಕೆ ಆಗಬಹುದು,” ವಿಶ್ಲೇಷಣಾ ಸಂಸ್ಥೆಯೊಂದು ಅಭಿಪ್ರಾಯ ಪಟ್ಟಿದೆ.

2021ರ ಮಾರ್ಚ್​ನಿಂದ ಈಚೆಗೆ ರಾಜ್ಯಗಳ ಚುನಾವಣೆ ಘೋಷಣೆ ಮಾಡಿದ ಮೇಲೆ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ ಮಾಡುವುದರಲ್ಲಿ ತೈಲ ಮಾರ್ಕೆಟಿಂಗ್ ಕಂಪೆನಿಗಳು ಮೃದುವಾಗಿವೆ. ಈ ವರ್ಷದಲ್ಲಿ ಸತತ ಎರಡು ದಿನ, ಮಾರ್ಚ್ 24- 25ರಂದು ಬೆಲೆ ಇಳಿಕೆ ಮಾಡಿವೆ. ಅದೂ 24 ದಿನಗಳ ಕಾಲ ಸತತವಾಗಿ ಬೆಲೆಗಳು ಸ್ಥಿರವಾಗಿ ಉಳಿದ ನಂತರ. ಮತ್ತೆ ಮಾರ್ಚ್ 30ಕ್ಕೆ ಬೆಲೆ ಇಳಿಸಿದವು. ಅದಾದ ಮೇಲೆ ಏಪ್ರಿಲ್ 15ರಂದು ಬೆಲೆ ಇಳಿಕೆ ಮಾಡುವ ಮುನ್ನ ಹದಿನೈದು ದಿನಗಳ ಕಾಲ ಸ್ಥಿರವಾಗಿದ್ದವು. ಅದಕ್ಕೂ ಮುನ್ನ 2021ರಲ್ಲಿ 26 ಸಲ ಪೆಟ್ರೋಲ್- ಡೀಸೆಲ್ ದರ ಏರಿಕೆ ಆಗಿದೆ. ಈ ವರ್ಷದಲ್ಲಿ ಇಲ್ಲಿಯ ತನಕ ಪೆಟ್ರೋಲ್- ಡೀಸೆಲ್ ದರದಲ್ಲಿ ಕ್ರಮವಾಗಿ ಲೀಟರ್​ಗೆ ರೂ. 7.46 ಹಾಗೂ ರೂ. 7.60 ಹೆಚ್ಚಳವಾಗಿದೆ.

ಏಪ್ರಿಲ್ 29ಕ್ಕೆ ಪ.ಬಂಗಾಲದಲ್ಲಿ ಅಂತಿಮ ಹಂತದ ಮತದಾನ ಮುಂಬೈ ಸೇರಿ ದೇಶದ ಹಲವೆಡೆ ಫೆಬ್ರವರಿ ತಿಂಗಳಲ್ಲಿ ಪ್ರೀಮಿಯಂ ಪೆಟ್ರೋಲ್ ದರ 100 ರೂಪಾಯಿ ದಾಟುತ್ತು. ಸಾಮಾನ್ಯ ಪೆಟ್ರೋಲ್ ದರವೇ 100 ರೂಪಾಯಿ ಸಮೀಪಕ್ಕೆ ಅಥವಾ ಕೆಲವೆಡೆ ಆ ದರವನ್ನು ದಾಟಿತ್ತು. ಅಂದಹಾಗೆ ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೆರಿಯಲ್ಲಿ ಚುನಾವಣೆ ಮುಗಿದಿದೆ. ಇನ್ನು ಪಶ್ಚಿಮ ಬಂಗಾಲದಲ್ಲಿ ಏಪ್ರಿಲ್ 29ಕ್ಕೆ ಅಂತಿಮ ಹಂತದ ಮತದಾನ ಇದ್ದು, ಮೇ 2ನೇ ತಾರೀಕಿನಂದು ಫಲಿತಾಂಶ ಪ್ರಕಟ ಆಗಲಿದೆ.

ಇದನ್ನೂ ಓದಿ: Petrol rate: ಪೆಟ್ರೋಲ್ ಮೇಲೆ ಕೇಂದ್ರ, ರಾಜ್ಯಗಳಿಗೆ ಕಟ್ಟುವ ತೆರಿಗೆ ಲೆಕ್ಕ ಇಲ್ಲಿದೆ

(Oil PSUs likely to hike petrol and diesel price after completion of state assembly elections)

Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ