Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಸೋಂಕಿನಿಂದ ಮೃತಪಟ್ಟ ದೆಹಲಿ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಎ.ಕೆ.ವಾಲಿಯಾ

ಎ.ಕೆ.ವಾಲಿಯಾ ವೃತ್ತಿಯಲ್ಲಿ ವೈದ್ಯರಾಗಿದ್ದವರು. ನಂತರ ರಾಜಕೀಯ ಜೀವನಕ್ಕೆ ಕಾಲಿಟ್ಟಿದ್ದರು. ದೆಹಲಿ ವಿಧಾನಸಭೆಗೆ ನಾಲ್ಕು ಬಾರಿ ಆಯ್ಕೆ ಆಗಿದ್ದರು. ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಕೊರೊನಾ ಸೋಂಕಿನಿಂದ ಮೃತಪಟ್ಟ ದೆಹಲಿ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಎ.ಕೆ.ವಾಲಿಯಾ
ಎ.ಕೆ.ವಾಲಿಯಾ
Follow us
Lakshmi Hegde
|

Updated on:Apr 22, 2021 | 10:35 AM

ದೆಹಲಿ: ಕೊವಿಡ್​ 19 ಸೋಂಕಿಗೆ ತುತ್ತಾಗಿದ್ದ ದೆಹಲಿ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಎ.ಕೆ.ವಾಲಿಯಾ, ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟರು. ಕೊರೊನಾ ಸೋಂಕು ತಗುಲಿದ ಬಳಿಕ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ 72ವರ್ಷ ವಯಸ್ಸಾಗಿತ್ತು.

ಎ.ಕೆ.ವಾಲಿಯಾ ವೃತ್ತಿಯಲ್ಲಿ ವೈದ್ಯರಾಗಿದ್ದವರು. ನಂತರ ರಾಜಕೀಯ ಜೀವನಕ್ಕೆ ಕಾಲಿಟ್ಟಿದ್ದರು. ದೆಹಲಿ ವಿಧಾನಸಭೆಗೆ ನಾಲ್ಕು ಬಾರಿ ಆಯ್ಕೆ ಆಗಿ ಹೋಗಿದ್ದಾರೆ. ಶೀಲಾ ದೀಕ್ಷಿತ್ ಮುಖ್ಯಮಂತ್ರಿಯಾಗಿದ್ದಾಗ ಆರೋಗ್ಯ ಸಚಿವರಾಗಿ, ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

ಅದರ ಮಧ್ಯೆ ಲಕ್ಷ್ಮೀ ನಗರದಲ್ಲಿ ಕ್ಲಿನಿಕ್​ವೊಂದನ್ನೂ ಹೊಂದಿದ್ದರು. 1993ರಲ್ಲಿ ಮೊದಲ ಬಾರಿಗೆ ಪೂರ್ವ ದೆಹಲಿಯ ಗೀತಾ ಕಾಲನಿಯಿಂದ ಚುನಾವಣೆಗೆ ಸ್ಪರ್ಧಿಸಿದರು. ನಂತರ ದೆಹಲಿ ಮುನ್ಸಿಪಲ್​ ಕಾರ್ಪೋರೇಶನ್​ ಚುನಾವಣೆಯಲ್ಲಿ ಹಣಕೊಟ್ಟವರಿಗೆ ಟಿಕೆಟ್ ಕೊಡಲಾಗಿದೆ ಎಂದು ಆರೋಪಿಸಿ 2017ರಲ್ಲಿ ಒಮ್ಮೆ ಕಾಂಗ್ರೆಸ್​​ನ್ನು ತೊರೆದಿದ್ದರು. ಮತ್ತೆ ಕಾಂಗ್ರೆಸ್​ ಸೇರಿದ್ದ ಎ.ಕೆ.ವಾಲಿಯಾ, 2020ರಲ್ಲಿ ಕಾಂಗ್ರೆಸ್​ನಿಂದ ಕೃಷ್ಣಾನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆಪ್​ ವಿರುದ್ಧ ಸೋತಿದ್ದರು.

ದೇಶದಲ್ಲಿ ಕೊರೊನಾ ಅಲೆ ವಿಪರೀತ ಏರುತ್ತಿದೆ. ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ ಪುತ್ರ ಆಶೀಶ್ ಯಚೂರಿ (35) ಕೂಡ ಇಂದು ಮುಂಜಾನೆ ಕೊವಿಡ್​ನಿಂದ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ಸೊಂಕು ಹೆಚ್ಚಳ ಹಿನ್ನೆಲೆ ಕೆನರಾ ಬ್ಯಾಂಕ್‌ನಿಂದ ಸೇವಾ ಸಮಯ ಕಡಿತ, 10 ರಿಂದ ಮಧ್ಯಾಹ್ನ 2ರವರೆಗೆ ಮಾತ್ರ ಜನರಿಗೆ ಅವಕಾಶ

ಪ್ರಶಾಂತ್ ನೀಲ್ ಸಿನಿಮಾದಲ್ಲಿ ಇರಲ್ವಾ ನಾಯಕಿಗೆ ಪ್ರಾಮುಖ್ಯತೆ.. ನೋಡಿ ಈ ಸ್ಟೋರಿ

Former Delhi Health Minister AK Walia Dies due to covid 19

Published On - 10:34 am, Thu, 22 April 21

ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು
ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಹಿಂದಿನಿಂದ ಗುದ್ದಿದ ಮಿನಿಬಸ್ ಚಾಲಕ
ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಹಿಂದಿನಿಂದ ಗುದ್ದಿದ ಮಿನಿಬಸ್ ಚಾಲಕ
ಧನ್ವೀರ್ ಮದುವೆಗೆ ಯಾವ ಬಟ್ಟೆ ಧರಿಸಬೇಕು? ಪ್ಲ್ಯಾನ್ ರಿವೀಲ್ ಮಾಡಿದ ದಾಸ
ಧನ್ವೀರ್ ಮದುವೆಗೆ ಯಾವ ಬಟ್ಟೆ ಧರಿಸಬೇಕು? ಪ್ಲ್ಯಾನ್ ರಿವೀಲ್ ಮಾಡಿದ ದಾಸ