Petrol rate: ಪೆಟ್ರೋಲ್ ಮೇಲೆ ಕೇಂದ್ರ, ರಾಜ್ಯಗಳಿಗೆ ಕಟ್ಟುವ ತೆರಿಗೆ ಲೆಕ್ಕ ಇಲ್ಲಿದೆ

ನಿಮ್ಮ ನಗರದಲ್ಲಿ ಪೆಟ್ರೋಲ್ ದರ ಎಷ್ಟಿದೆ? ಆ ಪೈಕಿ ಕೇಂದ್ರ ಸರ್ಕಾರಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ ಎಷ್ಟು ತೆರಿಗೆ ಹೋಗುತ್ತದೆ, ದೇಶದ ರಾಜ್ಯಗಳ ಪೈಕಿ ಅತಿ ಹೆಚ್ಚಿನ ತೆರಿಗೆ ಹಾಕುತ್ತಿರುವುದು ಯಾವುದು ಇತ್ಯಾದಿ ವಿವರ ಇಲ್ಲಿದೆ.

Petrol rate: ಪೆಟ್ರೋಲ್ ಮೇಲೆ ಕೇಂದ್ರ, ರಾಜ್ಯಗಳಿಗೆ ಕಟ್ಟುವ ತೆರಿಗೆ ಲೆಕ್ಕ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on: Feb 23, 2021 | 2:35 PM

ಪೆಟ್ರೋಲ್-ಡೀಸೆಲ್ ದರ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ದೇಶದ ನಾನಾ ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ಸೋಷಿಯಲ್ ಮೀಡಿಯಾಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಈಗಿನ ಸನ್ನಿವೇಶಕ್ಕೆ ಹೊಣೆ ಎಂಬುದು ನಿಮಗೆ ಗೊತ್ತಿದೆಯಾ? ಅದು ಹೇಗೆ ಅಂತೀರಾ? ಪೆಟ್ರೋಲ್ ಮೂಲ ಬೆಲೆ ಎಷ್ಟು, ಅದಕ್ಕೆ ಏನೆಲ್ಲಾ ತೆರಿಗೆ- ವೆಚ್ಚ ಬಿದ್ದ ಮೇಲೆ ಇಷ್ಟು ದೊಡ್ಡ ಮೊತ್ತ ಬೀಳುತ್ತದೆ ಎಂಬ ಲೆಕ್ಕಾಚಾರ ನಿಮ್ಮ ಮುಂದಿದೆ. ಓದಿ, ನೋಡಿ…

ಭಾರತದಲ್ಲಿ ತೈಲ ಮಾರ್ಕೆಟಿಂಗ್ ಕಂಪೆನಿಗಳು ನಿತ್ಯವೂ ದರ ಪರಿಷ್ಕರಣೆ ಮಾಡುತ್ತವೆ. ಬೆಲೆ ನಿರ್ಧರಿಸುವ ವೇಳೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ, ಡಾಲರ್ ವಿರುದ್ಧ ರೂಪಾಯಿ ಮೌಲ್ಯದ ಕಳೆದ ಹದಿನೈದು ದಿನಗಳ ಸರಾಸರಿಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅಂದ ಹಾಗೆ ಭಾರತವು ತನ್ನ ಅಗತ್ಯದ ಪೈಕಿ ಅತಿ ಹೆಚ್ಚಿನ ಪ್ರಮಾಣದ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಇನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವ್ಯಾಟ್ ಪ್ರಮಾಣ ಬದಲಾಗುವುದರಿಂದ ಒಂದೊಂದು ರಾಜ್ಯದಲ್ಲಿ ಒಂದೊಂದು ದರ ಇರುತ್ತದೆ.

ನವದೆಹಲಿಯಲ್ಲಿ ಫೆಬ್ರವರಿ 22ನೇ ತಾರೀಕಿನ ಬೆಲೆ ಆಧರಿಸಿ ದರದ ವಿವರ ಹೀಗಿದೆ:

ಪೆಟ್ರೋಲ್ (ಪ್ರತಿ ಲೀಟರ್)

ಮೂಲ ಬೆಲೆ- ರೂ. 29.34

ಸಾಗಣೆ- 0.37 ಪೈಸೆ

ಡೀಲರ್ ಗಳಿಗೆ ಬೀಳುವ ದರ (ಅಬಕಾರಿ ಸುಂಕ ಮತ್ತು ವ್ಯಾಟ್ ಹೊರತುಪಡಿಸಿ) ರೂ. 29.71

ವ್ಯಾಟ್ (ಡೀಲರ್ ಕಮಿಷನ್ ಮೇಲಿನ ವ್ಯಾಟ್ ಕೂಡ ಸೇರಿ) ರೂ. 19.92

ಅಬಕಾರಿ ಸುಂಕ ರೂ. 32.98

ಡೀಲರ್ ಕಮಿಷನ್ (ಸರಾಸರಿ) ರೂ. 3.69

ಪೆಟ್ರೋಲ್ ಚಿಲ್ಲರೆ ಮಾರಾಟ ದರ ರೂ. 86.30

ದೇಶದ ಟಾಪ್ 10 ರಾಜ್ಯಗಳಲ್ಲಿನ ಪೆಟ್ರೋಲ್ ದರ ಮತ್ತು ತೆರಿಗೆ ಇತರ ವಿವರ

ಮುಂಬೈ, ಥಾಣೆ ಹಾಗೂ ನವೀ ಮುಂಬೈ

ಮೂಲ ಬೆಲೆ- ರೂ. 29.7

ರಾಜ್ಯ ತೆರಿಗೆ- ರೂ. 26.9

ಕೇಂದ್ರ ತೆರಿಗೆ- ರೂ. 33

ಡೀಲರ್ ಕಮಿಷನ್- ರೂ. 3.69

ಚಿಲ್ಲರೆ ಮಾರಾಟ ದರ- ರೂ. 93.24

ಮಹಾರಾಷ್ಟ್ರ (ರಾಜ್ಯದ ಉಳಿದೆಡೆ)

ಮೂಲ ಬೆಲೆ- ರೂ. 29.7

ರಾಜ್ಯ ತೆರಿಗೆ- ರೂ. 26.2

ಕೇಂದ್ರ ತೆರಿಗೆ- ರೂ. 33

ಡೀಲರ್ ಕಮಿಷನ್- ರೂ. 3.69

ಚಿಲ್ಲರೆ ಮಾರಾಟ ದರ- ರೂ. 92.61

ಮಧ್ಯಪ್ರದೇಶ

ಮೂಲ ಬೆಲೆ- ರೂ. 29.7

ರಾಜ್ಯ ತೆರಿಗೆ- ರೂ. 26

ಕೇಂದ್ರ ತೆರಿಗೆ- ರೂ. 33

ಡೀಲರ್ ಕಮಿಷನ್- ರೂ. 3.69

ಚಿಲ್ಲರೆ ಮಾರಾಟ ದರ- ರೂ. 92.36

ಮಣಿಪುರ

ಮೂಲ ಬೆಲೆ- ರೂ. 29.7

ರಾಜ್ಯ ತೆರಿಗೆ- ರೂ. 25

ಕೇಂದ್ರ ತೆರಿಗೆ- ರೂ. 33

ಡೀಲರ್ ಕಮಿಷನ್- ರೂ. 3.69

ಚಿಲ್ಲರೆ ಮಾರಾಟ ದರ- ರೂ. 91.41

ಆಂಧ್ರಪ್ರದೇಶ

ಮೂಲ ಬೆಲೆ- ರೂ. 29.7

ರಾಜ್ಯ ತೆರಿಗೆ- ರೂ. 25

ಕೇಂದ್ರ ತೆರಿಗೆ- ರೂ. 33

ಡೀಲರ್ ಕಮಿಷನ್- ರೂ. 3.69

ಚಿಲ್ಲರೆ ಮಾರಾಟ ದರ- ರೂ. 91.38

ಒಡಿಶಾ

ಮೂಲ ಬೆಲೆ- ರೂ. 29.7

ರಾಜ್ಯ ತೆರಿಗೆ- ರೂ. 20.6

ಕೇಂದ್ರ ತೆರಿಗೆ- ರೂ. 33

ಡೀಲರ್ ಕಮಿಷನ್- ರೂ. 3.69

ಚಿಲ್ಲರೆ ಮಾರಾಟ ದರ- ರೂ. 87.03

ರಾಜಸ್ಥಾನ

ಮೂಲ ಬೆಲೆ- ರೂ. 29.7

ರಾಜ್ಯ ತೆರಿಗೆ- ರೂ. 24.7

ಕೇಂದ್ರ ತೆರಿಗೆ- ರೂ. 33

ಡೀಲರ್ ಕಮಿಷನ್- ರೂ. 3.69

ಚಿಲ್ಲರೆ ಮಾರಾಟ ದರ- ರೂ. 91.11

ತಮಿಳುನಾಡು

ಮೂಲ ಬೆಲೆ- ರೂ. 29.7

ರಾಜ್ಯ ತೆರಿಗೆ- ರೂ. 22.7

ಕೇಂದ್ರ ತೆರಿಗೆ- ರೂ. 33

ಡೀಲರ್ ಕಮಿಷನ್- ರೂ. 3.69

ಚಿಲ್ಲರೆ ಮಾರಾಟ ದರ- ರೂ. 89.11

ತೆಲಂಗಾಣ

ಮೂಲ ಬೆಲೆ- ರೂ. 29.7

ರಾಜ್ಯ ತೆರಿಗೆ- ರೂ. 22.7

ಕೇಂದ್ರ ತೆರಿಗೆ- ರೂ. 33

ಡೀಲರ್ ಕಮಿಷನ್- ರೂ. 3.69

ಚಿಲ್ಲರೆ ಮಾರಾಟ ದರ- ರೂ. 89.10

ಕರ್ನಾಟಕ

ಮೂಲ ಬೆಲೆ- ರೂ. 29.7

ರಾಜ್ಯ ತೆರಿಗೆ- ರೂ. 22.5

ಕೇಂದ್ರ ತೆರಿಗೆ- ರೂ. 33

ಡೀಲರ್ ಕಮಿಷನ್- ರೂ. 3.69

ಚಿಲ್ಲರೆ ಮಾರಾಟ ದರ- ರೂ. 88.97

ಫೆ. 1ಕ್ಕೆ ಅನ್ವಯ ಆಗುವಂತೆ ಹೆಚ್ಚಿನ ತೆರಿಗೆ ಹಾಕಿದ್ದ ಟಾಪ್ 5 ರಾಜ್ಯಗಳು

ಮುಂಬೈ, ಥಾಣೆ- ರೂ. 26.86

ಮಹಾರಾಷ್ಟ್ರದ ಉಳಿದೆಡೆ- ರೂ. 26.22

ಮಧ್ಯಪ್ರದೇಶ- ರೂ. 25.96

ಆಂಧ್ರಪ್ರದೇಶ- ರೂ. 24.96

ರಾಜಸ್ಥಾನ- ರೂ. 24.68

ಇದನ್ನೂ ಓದಿ: Petrol Price Hike: ನವ ದಂಪತಿಗೆ ಪೆಟ್ರೋಲ್ ಗಿಫ್ಟ್ ನೀಡಿದ ಮಹಾನಗರ ಪಾಲಿಕೆ ಸದಸ್ಯೆ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ