ಕೊರೊನಾಗೆ ಬಹುಮುಖ ಪ್ರತಿಭೆಯ ಮಾಜಿ IAS ಅಧಿಕಾರಿ ಬಲಿ

|

Updated on: Jul 16, 2020 | 12:46 PM

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ರುದ್ರತಾಂಡವ ತಾರಕಕ್ಕೆ ಏರಿದೆ. ಬಡವ ಬಲ್ಲಿದ ಎನ್ನದೆ ಎಲ್ಲರ ಬಲಿಪಡೆಯುತ್ತಿರುವ ಮಹಾಮಾರಿ ಇದೀಗ ರಾಜ್ಯದಲ್ಲಿ ಸೇವೆ ಸಲ್ಲಿಸಿದ್ದ IAS ಅಧಿಕಾರಿಯ ಜೀವ ಸಹ ಬಲಿ ಪಡೆದಿದೆ. ರಾಜ್ಯದ ಪ್ರಪ್ರಥಮ ಮಹಿಳಾ ಮುಖ್ಯ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸಿದ್ದ ನೀಲಾ ಸತ್ಯನಾರಾಯಣ್ ಇಂದು ಸೋಂಕಿಗೆ ಬಲಿಯಾಗಿದ್ದಾರೆ. IAS ಅಧಿಕಾರಿಯಾಗಿರುವ ಜೊತೆಗೆ ಖ್ಯಾತ ಕವಯಿತ್ರಿಯೂ ಆಗಿದ್ದ 72 ವರ್ಷದ ನೀಲಾ ಸತ್ಯನಾರಾಯಣ್ ಮುಂಬೈನ ಸೆವೆನ್​ ಹಿಲ್ಸ್​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ:ಕೊರೊನಾ ಮಹಾಮಾರಿಗೆ ಜಿಲ್ಲಾಧಿಕಾರಿ ಬಲಿ.. […]

ಕೊರೊನಾಗೆ ಬಹುಮುಖ ಪ್ರತಿಭೆಯ ಮಾಜಿ IAS ಅಧಿಕಾರಿ ಬಲಿ
Follow us on

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ರುದ್ರತಾಂಡವ ತಾರಕಕ್ಕೆ ಏರಿದೆ. ಬಡವ ಬಲ್ಲಿದ ಎನ್ನದೆ ಎಲ್ಲರ ಬಲಿಪಡೆಯುತ್ತಿರುವ ಮಹಾಮಾರಿ ಇದೀಗ ರಾಜ್ಯದಲ್ಲಿ ಸೇವೆ ಸಲ್ಲಿಸಿದ್ದ IAS ಅಧಿಕಾರಿಯ ಜೀವ ಸಹ ಬಲಿ ಪಡೆದಿದೆ.

ರಾಜ್ಯದ ಪ್ರಪ್ರಥಮ ಮಹಿಳಾ ಮುಖ್ಯ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸಿದ್ದ ನೀಲಾ ಸತ್ಯನಾರಾಯಣ್ ಇಂದು ಸೋಂಕಿಗೆ ಬಲಿಯಾಗಿದ್ದಾರೆ. IAS ಅಧಿಕಾರಿಯಾಗಿರುವ ಜೊತೆಗೆ ಖ್ಯಾತ ಕವಯಿತ್ರಿಯೂ ಆಗಿದ್ದ 72 ವರ್ಷದ ನೀಲಾ ಸತ್ಯನಾರಾಯಣ್ ಮುಂಬೈನ ಸೆವೆನ್​ ಹಿಲ್ಸ್​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ:ಕೊರೊನಾ ಮಹಾಮಾರಿಗೆ ಜಿಲ್ಲಾಧಿಕಾರಿ ಬಲಿ.. ಎಲ್ಲಿ?

ಅನೇಕ ಸಿನಿಮಾಗಳಿಗೂ ರಾಗ ಸಂಯೋಜನೆ ಮಾಡಿದ್ದ ನೀಲಾ ಸತ್ಯನಾರಾಯಣ್ ಮಹಾರಾಷ್ಟ್ರದಲ್ಲಿ ಸೋಂಕಿನಿಂದ ಮೃತಪಟ್ಟಿರುವ ಮೊದಲನೇ IAS ಅಧಿಕಾರಿಯಾಗಿದ್ದಾರೆ.

Published On - 12:41 pm, Thu, 16 July 20