ದೆಹಲಿ: 26/11 ರ ಮುಂಬೈ ಉಗ್ರದಾಳಿ ಸಂದರ್ಭದಲ್ಲಿ ಧೈರ್ಯದಿಂದ ಹೋರಾಡಿದ್ದ, ಆ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತಾ ದಳ (ಎನ್ಎಸ್ಜಿ)ದ ಮುಖ್ಯಸ್ಥರಾಗಿದ್ದ ಜೆಕೆ ದತ್ತ ಅವರು ಇಂದು ಕೊವಿಡ್ 19ನಿಂದ ಮೃತರಾಗಿದ್ದಾರೆ. ದತ್ತ ಅವರಿಗೆ 72 ವರ್ಷವಾಗಿತ್ತು.
ಕೊವಿಡ್ 19 ಸೋಂಕಿತರಾಗಿದ್ದ ಜೆಕೆ ದತ್ತ ಅವರನ್ನು ಗುರ್ಗಾಂವ್ನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. 2008ರಲ್ಲಿ ಮುಂಬೈನ ಹೋಟೆಲ್ಗಳ ಮೇಲೆ ಉಗ್ರರು ದಾಳಿ ನಡೆಸಿದ್ದಾಗ, ಭಯೋತ್ಪಾದಕರನ್ನು ಹಿಮ್ಮೆಟ್ಟಿಸಲು ನಡೆಸಲಾಗಿದ್ದ ಆಪರೇಶನ್ ಬ್ಲ್ಯಾಕ್ ಕಮಾಂಡೋ ಆ್ಯಂಟಿ-ಟೆರರ್ ಕಾರ್ಯಾಚರಣೆಯನ್ನು ಮುನ್ನಡೆಸಿದ್ದರು.
ಇಂದು ಮಧ್ಯಾಹ್ನ 3.30ರ ಹೊತ್ತಿಗೆ ಹೃದಯ ಸ್ತಂಭನದಿಂದ ಮೃಪಟ್ಟಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ಪಿಟಿಐಗೆ ತಿಳಿಸಿದ್ದಾರೆ. ಜೆಕೆ ದತ್ತ ಅವರು 1971ರ ಬ್ಯಾಚ್ನ, ಬೆಂಗಾಲ್ ಕೆಡರ್ನ ಐಪಿಎಸ್ ಅಧಿಕಾರಿಯಾಗಿದ್ದರು. 2006ರಿಂದ 2009ರವರೆಗೆ ಎನ್ಎಸ್ಜಿಯ ಮುಖ್ಯಸ್ಥರಾಗಿದ್ದರು. ಅಲ್ಲದೆ, ಸಿಬಿಐನ ಜಂಟಿ ನಿರ್ದೇಶಕನಾಗಿಯೂ ಕಾರ್ಯನಿರ್ವಹಿಸಿದ್ದಾರೆ.
2008ರ ನವೆಂಬರ್ 26ರಂದು ಲಷ್ಕರ್ ಎ ತೊಯ್ಬಾದ ಉಗ್ರರು ಮುಂಬೈನಲ್ಲಿ ದಾಳಿ ನಡೆಸಿದ್ದರು. ಸಮುದ್ರ ಮಾರ್ಗದ ಮೂಲಕ ಮುಂಬೈ ಪ್ರವೇಶಿಸಿದ್ದ ಭಯೋತ್ಪಾದಕರು ಪ್ರಮುಖ ಹೋಟೆಲ್ಗಳನ್ನೇ ಟಾರ್ಗೆಟ್ ಮಾಡಿದ್ದರು. ಅವರ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದ ಎನ್ಎಸ್ಜಿ ಕಮಾಂಡೋಗಳು ದಿಟ್ಟತನದ ಹೋರಾಟ ಮಾಡಿದ್ದರು. ಅವರಲ್ಲಿ ಜೆಕೆ ದತ್ತ ಕೂಡ ಪ್ರಮುಖರು.
ಇದನ್ನೂ ಓದಿ: ಬ್ಲ್ಯಾಕ್ ಫಂಗಸ್‌ಗೆ ರಾಜ್ಯದ ಆರು ಕಡೆ ಉಚಿತ ಚಿಕಿತ್ಸೆ, ಈಗಾಗಲೇ 1000 ವೈಲ್ಸ್ ಔಷಧಿ ಬಂದಿದೆ: ಅಶ್ವತ್ಥ ನಾರಾಯಣ
Fact Check: ಕಾಂಗ್ರೆಸ್ ಟೂಲ್ಕಿಟ್ ಎಂದು ವೈರಲ್ ಆದ ದಾಖಲೆ ಕಾಂಗ್ರೆಸ್ ಪಕ್ಷದ ನಕಲಿ ಲೆಟರ್ಹೆಡ್ ಬಳಸಿ ಮಾಡಿದ್ದು
Former NSG Cheif JK Dutt who lead commondos during 2008 Mumbai Attack Died by Covid 19
Published On - 10:14 pm, Wed, 19 May 21