ಹೈದರಾಬಾದ್: ಮಂಗಳವಾರ ಹೈದರಾಬಾದ್‌ಗೆ (Hyderabad) ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಮಾಜಿ ಪ್ರಧಾನಿ ದಿವಂಗತ ಪಿ.ವಿ ನರಸಿಂಹರಾವ್ (PV Narasimha Rao) ಅವರ ಕುಟುಂಬಸ್ಥರು ಭೇಟಿ ಮಾಡಿದರು. ಈ ವೇಳೆ ಪಿ.ವಿ. ನರಸಿಂಹರಾವ್ ಅವರಿಗೆ ಭಾರತ ರತ್ನ ನೀಡಿ ಗೌರವಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ಅವರೆಲ್ಲರೂ ಪ್ರಧಾನಿ ಮೋದಿ ಜೊತೆ ಸಂಸ್ಕೃತಿ, ಭಾರತದ ಅಭಿವೃದ್ಧಿ ಮುಂತಾದ ವಿಚಾರಗಳ ಬಗ್ಗೆ ಕೆಲಕಾಲ ಚರ್ಚಿಸಿದ್ದಾರೆ ಎಂದು ANI ವರದಿ ಮಾಡಿದೆ.
ಮಾಜಿ ಪ್ರಧಾನಮಂತ್ರಿ ಪಿ.ವಿ ನರಸಿಂಹ ರಾವ್ ಅವರು ರಾಷ್ಟ್ರಕ್ಕೆ ನೀಡಿದ ಮಹತ್ವದ ಕೊಡುಗೆಗಳನ್ನು ಗುರುತಿಸಿ ಅವರಿಗೆ ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ಕುಟುಂಬ ಸದಸ್ಯರು ಪ್ರಧಾನಿ ಮೋದಿಯವರಿಗೆ ತಮ್ಮ ಮೆಚ್ಚುಗೆ ಮತ್ತು ಧನ್ಯವಾದಗಳನ್ನು ತಿಳಿಸಿದರು.
Upon reaching Hyderabad, had an excellent meeting with the family of our former PM, the respected scholar and statesman, Shri PV Narasimha Rao Garu. They thanked the Government of India for conferring the Bharat Ratna on Shri Narasimha Rao Garu. Our interaction was extensive and… pic.twitter.com/JOI24PLKa5
— Narendra Modi (@narendramodi) May 7, 2024
ಇದನ್ನೂ ಓದಿ: ಲಾಲು ಪ್ರಸಾದ್ ಯಾದವ್ ನೀಡಿದ ಮುಸ್ಲಿಂ ಮೀಸಲಾತಿ ಹೇಳಿಕೆಗೆ ಪ್ರಧಾನಿ ಮೋದಿ ತಿರುಗೇಟು
ಈ ಸಭೆಯಲ್ಲಿ, ನರಸಿಂಹ ರಾವ್ ಅವರ ಕುಟುಂಬ ಮತ್ತು ಪ್ರಧಾನಿ ಮೋದಿ ಅವರು ವಿವಿಧ ವಿಷಯಗಳ ಕುರಿತು ಸಮಗ್ರ ಚರ್ಚೆಯಲ್ಲಿ ತೊಡಗಿದ್ದರು. ಅವರು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಇತ್ತೀಚಿನ ವರ್ಷಗಳಲ್ಲಿ ದೇಶವು ಸಾಧಿಸಿರುವ ಗಮನಾರ್ಹ ಪ್ರಗತಿ ಮತ್ತು ಪರಸ್ಪರ ಆಸಕ್ತಿಯ ಹಲವಾರು ಇತರ ವಿಷಯಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತನಾಡಿದರು.
Telangana | The family of former PM PV Narasimha Rao met PM Modi in Hyderabad. They expressed gratitude for conferring Bharat Ratna to Narasimha Rao. They also discussed a wide range of other issues including culture, India’s development strides, and more. pic.twitter.com/IJERyRDZAD
— ANI (@ANI) May 7, 2024
“ಹೈದರಾಬಾದ್ ತಲುಪಿದ ನಂತರ, ನಮ್ಮ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರ ಕುಟುಂಬದೊಂದಿಗೆ ಅತ್ಯುತ್ತಮವಾದ ಭೇಟಿಯಾಯಿತು. ನರಸಿಂಹ ರಾವ್ ಅವರಿಗೆ ಭಾರತ ರತ್ನ ನೀಡಿದ್ದಕ್ಕಾಗಿ ಅವರು ಭಾರತ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ನಾವು ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದೇವೆ. ನಾವು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಶ್ರೀಮಂತಿಕೆಯ ಬಗ್ಗೆ ಮಾತನಾಡಿದ್ದೇವೆ ಎಂದು ಪ್ರಧಾನಿ ಮೋದಿ ಎಕ್ಸ್ (ಟ್ವಿಟ್ಟರ್)ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:59 pm, Tue, 7 May 24