ಶಸ್ತ್ರಚಿಕಿತ್ಸೆ ಬಳಿಕ ಹೈದರಾಬಾದ್ ಆಸ್ಪತ್ರೆಯಲ್ಲಿ ಮಾಜಿ ಸಿಎಂ ಕೆ ಚಂದ್ರಶೇಖರ ರಾವ್ ಆರೋಗ್ಯ ಹೇಗಿದೆ?

|

Updated on: Dec 09, 2023 | 11:58 AM

ಮಾಜಿ ಸಿಎಂ ರಾವ್ ಅವರು "ಎಡ ಟೋಟಲ್ ಹಿಪ್ ರಿಪ್ಲೇಸ್‌ಮೆಂಟ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ" ಎಂದು ಆಸ್ಪತ್ರೆಯು ನಿನ್ನೆ ಶುಕ್ರವಾರ ರಾತ್ರಿ ಆರೋಗ್ಯ ಬುಲೆಟಿನ್‌ನಲ್ಲಿ ತಿಳಿಸಿದೆ. ಅವರು "ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಸಹಿಸಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆ ಉದ್ದಕ್ಕೂ ಹಿಮೋಡೈನಮಿಕ್ ಆಗಿ ಸ್ಥಿರರಾಗಿದ್ದರು" ಎಂದು ತಿಳಿಸಿದೆ.

ಶಸ್ತ್ರಚಿಕಿತ್ಸೆ ಬಳಿಕ ಹೈದರಾಬಾದ್ ಆಸ್ಪತ್ರೆಯಲ್ಲಿ ಮಾಜಿ ಸಿಎಂ ಕೆ ಚಂದ್ರಶೇಖರ ರಾವ್ ಆರೋಗ್ಯ ಹೇಗಿದೆ?
ಮಾಜಿ ಸಿಎಂ ಕೆ ಚಂದ್ರಶೇಖರ ರಾವ್ ಆರೋಗ್ಯ ಈಗ ಹೇಗಿದೆ?
Follow us on

ಅಧಿಕಾರ ಕಳೆದುಕೊಂಡು ತಮ್ಮ ತೋಟದ ಮನೆ ಸೇರಿದ್ದ ತೆಲಂಗಾಣ (Telangana) ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (ಕೆಸಿಆರ್ K Chandrashekar Rao -KCR) ಗುರುವಾರ ರಾತ್ರಿ ತಮ್ಮ ತೋಟದ ಮನೆಯ ಬಚ್ಚಲು ಮನೆಯಲ್ಲಿ ಬಿದ್ದು ಸೊಂಟದ ಮೂಳೆ ಮುರಿತಕ್ಕೆ ಒಳಗಾಗಿದ್ದರು. ತಕ್ಷಣವೇ ಅವರಿಗೆ ಹೈದರಾಬಾದ್‌ನ ಯಶೋದಾ ಆಸ್ಪತ್ರೆಯಲ್ಲಿ (Yashoda Hospital in Hyderabad) ಎಡ ಸೊಂಟದ ಬದಲಿ ಶಸ್ತ್ರಚಿಕಿತ್ಸೆ ( hip replacement surgery) ಮಾಡಲಾಗಿತ್ತು. ಆಸ್ಪತ್ರೆಯ ಹಿರಿಯ ಮೂಳೆ ಶಸ್ತ್ರಚಿಕಿತ್ಸಕರು ಮತ್ತು ಇತರ ವೈದ್ಯಕೀಯ ಸಿಬ್ಬಂದಿ ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದರು.

ಮಾಜಿ ಸಿಎಂ ರಾವ್ ಅವರು “ಎಡ ಟೋಟಲ್ ಹಿಪ್ ರಿಪ್ಲೇಸ್‌ಮೆಂಟ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ” ಎಂದು ಆಸ್ಪತ್ರೆಯು ನಿನ್ನೆ ಶುಕ್ರವಾರ ರಾತ್ರಿ ಆರೋಗ್ಯ ಬುಲೆಟಿನ್‌ನಲ್ಲಿ ತಿಳಿಸಿದೆ. ಅವರು “ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಸಹಿಸಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆ ಉದ್ದಕ್ಕೂ ಹಿಮೋಡೈನಮಿಕ್ ಆಗಿ ಸ್ಥಿರರಾಗಿದ್ದರು” ಎಂದು ತಿಳಿಸಿದೆ.

ಶಸ್ತ್ರಚಿಕಿತ್ಸೆಯ ನಂತರ ರಾವ್ ಅವರನ್ನು ವಿಶೇಷ ವಾರ್ಡ್​​​ಗೆ ಸ್ಥಳಾಂತರಿಸಲಾಗಿದೆ, ಅವರೀಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ. ಚೇತರಿಕೆಯ ಸಾಮಾನ್ಯ ಅವಧಿ ಆರರಿಂದ ಎಂಟು ವಾರಗಳವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಅವರು ನರ ನಾಳದ ಮೂಲಕ ದ್ರವಗಳು, ರೋಗನಿರೋಧಕ ಪ್ರತಿಜೀವಕಗಳು ಮತ್ತು ನೋವು ನಿವಾರಕ ಔಷಧಿಗಳನ್ನು ನೀಡಲಾಗುತ್ತಿದೆ. ಶಸ್ತ್ರಚಿಕಿತ್ಸೆಯ ನಂತರದ ದಿನನಿತ್ಯದ ಆರೈಕೆ ಪಡೆಯುತ್ತಿದ್ದಾರೆ. ಆಂಬ್ಯುಲೇಷನ್, ಫಿಸಿಯೋಥೆರಪಿ ಮತ್ತು ಪೌಷ್ಟಿಕಾಂಶದ ಯೋಜನೆಯನ್ನು ಶನಿವಾರ ಮತ್ತೊಮ್ಮೆ ಅವರನ್ನು ಪರೀಕ್ಷಿಸಿ, ಅದರ ಮೌಲ್ಯಮಾಪನದ ಆಧಾರದ ಮೇಲೆ ನಿಗದಿಗೊಳಿಸಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ.

ಇದನ್ನೂ ಓದಿ: ಕೆಸಿಆರ್ ಫಾರ್ಮ್ ಹೌಸ್ ನಲ್ಲಿ ಭಾರಿ ಜನಸ್ತೋಮ.. 9 ಬಸ್ ಗಳಲ್ಲಿ ದೌಡಾಯಿಸಿದ ಚಿಂತಮಡಕ ಗ್ರಾಮಸ್ಥರು

ಈ ಮಧ್ಯೆ ತಮ್ಮ ಪಕ್ಷದ ಅಧಿನಾಯಕ ಕೆಸಿಆರ್​​ ಅವರಿಗೆ ಶಸ್ತ್ರಚಿಕಿತ್ಸೆ ಉತ್ತಮವಾಗಿ ನಡೆದಿದೆ ಎಂದು ಬಿಆರ್‌ಎಸ್ ಮುಖಂಡ ದಾಸೋಜು ಶ್ರಾವಣ್ ಹೇಳಿದ್ದಾರೆ. “ಅವರು ಸಂಪೂರ್ಣವಾಗಿ ಕ್ಷೇಮವಾಗಿದ್ದಾರೆ ಮತ್ತು ಅವರು ಮೂರು ದಿನಗಳಲ್ಲಿ ಡಿಸ್ಚಾರ್ಜ್ ಆಗುತ್ತಾರೆ ಎಂದು ಆಶಿಸುತ್ತೇವೆ ಎಂದು ಅವರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ