ತೆಲಂಗಾಣ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: “ಮಹಾಲಕ್ಷ್ಮಿ” ಯೋಜನೆಗೆ ಅಧಿಕೃತ ಚಾಲನೆ
ಸೆಪ್ಟೆಂಬರ್ 18 ರಂದು ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಮಹಾಲಕ್ಷ್ಮಿ ಯೋಜನೆಯನ್ನು ಘೋಷಿಸಿತು. ಯೋಜನೆಯ ಪ್ರಕಾರ, ಕಾಂಗ್ರೆಸ್ ಪಕ್ಷವು ತೆಲಂಗಾಣದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಒದಗಿಸುತ್ತದೆ ಮತ್ತು ಮಹಾಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು ₹ 2500 ನೀಡುತ್ತದೆ ಎಂದು ಹೇಳಿತ್ತು. ಇದೀಗ ಈ ಯೋಜನೆಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅಧಿಕೃತ ಚಾಲನೆ ನೀಡಿದ್ದಾರೆ.
ಹೈದರಾಬಾದ್, ಡಿ.9; ತೆಲಂಗಾಣದಲ್ಲಿ (Telangana) ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು, ಈಗಾಗಲೇ ಸರ್ಕಾರ ರಚನೆಯಾಗಿದೆ. ಇದೀಗ ತೆಲಂಗಾಣದ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ(Revanth Reddy) ಅಧಿಕಾರ ಸ್ವೀಕರಿಸಿದ್ದಾರೆ. ಅಧಿಕಾರ ಸ್ವೀಕರದ ವೇಳೆ ಆರು ಗ್ಯಾರಂಟಿಗಳಿಗೆ ಸಹಿ ಹಾಕುವ ಮೂಲಕ ಚಾಲನೆ ನೀಡಿದ್ದಾರೆ. ಇದೀಗ ಈ ಆರು ಗ್ಯಾರಂಟಿಗಳಲ್ಲಿ ಒಂದಾದ ಮಹಾಲಕ್ಷ್ಮಿ ಯೋಜನೆಗೆ ಸಿಎಂ ರೇವಂತ್ ರೆಡ್ಡಿ ಚಾಲನೆ ನೀಡಿದ್ದಾರೆ. ತೆಲಂಗಾಣ ಸಾರಿಗೆ ಇಲಾಖೆಯು ಈಗಾಗಲೇ ಮಹಾ ಲಕ್ಷ್ಮಿ’ ಯೋಜನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿಕೊಂಡಿದೆ.
ಸೆಪ್ಟೆಂಬರ್ 18 ರಂದು ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಮಹಾಲಕ್ಷ್ಮಿ ಯೋಜನೆಯನ್ನು ಘೋಷಿಸಿತು. ಯೋಜನೆಯ ಪ್ರಕಾರ, ಕಾಂಗ್ರೆಸ್ ಪಕ್ಷವು ತೆಲಂಗಾಣದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಒದಗಿಸುತ್ತದೆ ಮತ್ತು ಮಹಾಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು ₹ 2500 ನೀಡುತ್ತದೆ ಎಂದು ಹೇಳಿತ್ತು.
ಮಹಿಳೆಯರು, ಹುಡುಗಿಯರು ಮತ್ತು ತೃತೀಯಲಿಂಗಿಗಳಿಗೆ ಉಚಿತ ಪ್ರಯಾಣವನ್ನು ಒದಗಿಸುವ ಮಹಾಲಕ್ಷ್ಮಿ ಯೋಜನೆಗೆ ಇಂದು ಅಧಿಕೃತ ಚಾಲನೆ ಸಿಕ್ಕಿದೆ. ತೆಲಂಗಾಣ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಆರು ಭರವಸೆಗಳನ್ನು ರೇವಂತ್ ರೆಡ್ಡಿ ಗುರುವಾರ ಅಂಗೀಕರಿಸಿದ್ದಾರೆ.
ఆడబిడ్డలకు… అమ్మ ఇచ్చిన మాట… అన్న నెరవేర్చుకుంటున్న మాట.. నేటి నుండి ఆర్టీసీ బస్సుల్లో ఉచిత ప్రయాణం. #TelanganaPrajaPrabhutwam pic.twitter.com/9eNTO4WYPk
— Revanth Reddy (@revanth_anumula) December 9, 2023
ಈ ಯೋಜನೆಯ ಮೂಲಕ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಟಿಎಸ್‌ಆರ್‌ಟಿಸಿ) ತೆಲಂಗಾಣ ರಾಜ್ಯದ ಗಡಿಯೊಳಗೆ ಸರ್ಕಾರಿ ಪಲ್ಲೆ ವೆಲುಗು ಮತ್ತು ಎಕ್ಸ್‌ಪ್ರೆಸ್ ಬಸ್‌ಗಳಲ್ಲಿ ಯುವತಿಯರು, ಎಲ್ಲಾ ವಯೋಮಾನದ ಮಹಿಳೆಯರು ಮತ್ತು ಟ್ರಾನ್ಸ್ಜೆಂಡರ್ಗಳಿಗೆ ಉಚಿತ ಪ್ರಯಾಣವನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ: ಕೇಂದ್ರ ಸಚಿವರ ಮಗಳನ್ನೇ ಪ್ರೀತಿಸಿ ಮದುವೆಯಾದ ರೇವಂತ್ ರೆಡ್ಡಿಯ ಪ್ರೇಮ ಕಥೆ ಇಲ್ಲಿದೆ
ಮಹಾಲಕ್ಷ್ಮಿ ಯೋಜನೆ ಇಂದಿನಿಂದ ಜಾರಿಗೆ ಬರಲಿದೆ. ತೆಲಂಗಾಲದ ಮಹಿಳೆಯರಿಗೆ ಈ ಯೋಜನೆ ಹೆಚ್ಚು ಉಪಯೋಗವನ್ನು ನೀಡಲಿದೆ ಎಂದು ಹೇಳಿದ್ದಾರೆ. ತೆಲಂಗಾಣ ರಾಜ್ಯದ ಗಡಿಯವರೆಗೆ ಫಲಾನುಭವಿಗಳಿಗೆ ಅಂತರ-ರಾಜ್ಯ ಎಕ್ಸ್‌ಪ್ರೆಸ್ ಮತ್ತು ಪಲ್ಲೆ ವೆಲುಗು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.
ಇದರ ಜತೆಗೆ ಮಹಿಳಾ ಪ್ರಯಾಣಿಕರು ಪ್ರಯಾಣಿಸುವ ದೂರದ ಆಧಾರದ ಮೇಲೆ ತೆಲಂಗಾಣ ಸರ್ಕಾರವು TSRTC ಶುಲ್ಕವನ್ನು ಮರುಪಾವತಿ ಮಾಡುತ್ತದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ, ಸಾಫ್ಟ್‌ವೇರ್ ಆಧಾರಿತ “ಮಹಾ ಲಕ್ಷ್ಮಿ” ಸ್ಮಾರ್ಟ್ ಕಾರ್ಡ್ ನೀಡುವ ಕೆಲಸವನ್ನು ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ