Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲಂಗಾಣ ಸಿಎಂ ರೇವಂತ್ ರೆಡ್ಡಿಯ ‘ಬಿಹಾರ ಡಿಎನ್‌ಎ’ ಹೇಳಿಕೆ ವಿರುದ್ಧ ಬಿಜೆಪಿ ನಾಯಕರ ಕಿಡಿ

"ತೆಲಂಗಾಣ ಡಿಎನ್‌ಎ, ಬಿಹಾರ ಡಿಎನ್‌ಎ ಎಂಬುದೇ ಇಲ್ಲ. ಅದು ಹಿಂದೂಸ್ತಾನದ ಡಿಎನ್‌ಎ. ತೆಲಂಗಾಣ ನಾಯಕ ಈ ರೀತಿ ಹೇಳಿರುವುದು ದುರದೃಷ್ಟಕರ. ಇಂತಹ ಹೇಳಿಕೆಗಳಿಂದ ಇಂಡಿಯಾ ಮೈತ್ರಿ ಗಟ್ಟಿಯಾಗುತ್ತದೆ ಎಂದು ಅವರು ಏನು ಭಾವಿಸುತ್ತಾರೆಯೇ ಎಂದು ಜೆಡಿಯು ನಾಯಕ ನೀರಜ್ ಕುಮಾರ್ ಕೇಳಿದ್ದಾರೆ.

ತೆಲಂಗಾಣ ಸಿಎಂ ರೇವಂತ್ ರೆಡ್ಡಿಯ ‘ಬಿಹಾರ ಡಿಎನ್‌ಎ’ ಹೇಳಿಕೆ ವಿರುದ್ಧ ಬಿಜೆಪಿ ನಾಯಕರ ಕಿಡಿ
ರೇವಂತ್ ರೆಡ್ಡಿ
Follow us
ರಶ್ಮಿ ಕಲ್ಲಕಟ್ಟ
|

Updated on: Dec 08, 2023 | 7:35 PM

ದೆಹಲಿ ಡಿಸೆಂಬರ್ 08: ತೆಲಂಗಾಣದ(Telangana) ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ರೇವಂತ್ ರೆಡ್ಡಿ (Revanth Reddy), ಬಿಹಾರದ ಡಿಎನ್‌ಎ ಹೇಳಿಕೆ ಮೂಲಕ ದೊಡ್ಡ ಗದ್ದಲ ಎಬ್ಬಿಸಿದ್ದಾರೆ.ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರ ಜನತಾ ದಳ (ಯುನೈಟೆಡ್) ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮೈತ್ರಿ ಮಾಡಿಕೊಂಡು ಸರ್ಕಾರವನ್ನು ನಡೆಸುತ್ತಿರುವ ಬಿಹಾರದ ಹಲವು ನಾಯಕರು, ಬಿಹಾರವನ್ನು ಕಳಪೆಯಂತೆ ಬಿಂಬಿಸಿದ ರೆಡ್ಡಿ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಬಿಜೆಪಿ ಕೂಡ ರೇವಂತ್ ರೆಡ್ಡಿ ಹೇಳಿಕೆಯನ್ನು ಖಂಡಿಸಿದೆ.

ತೆಲಂಗಾಣದ ಮೊದಲ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ (ಕೆಸಿಆರ್) ಅವರು “ಬಿಹಾರದ ಡಿಎನ್‌ಎ” ಹೊಂದಿದ್ದರು. ಕೆಸಿಆರ್‌ಗಿಂತ ದಕ್ಷಿಣ ರಾಜ್ಯಕ್ಕೆ ನಾನೇ ಉತ್ತಮ ಆಯ್ಕೆ ಎಂಬುದನ್ನು ಚುನಾವಣೆ ತೋರಿಸಿದೆ ಎಂದು ಮಾಧ್ಯಮಗಳೊಂದಿಗೆ ಮಾತನಾಡಿದ ರೆಡ್ಡಿ ಹೇಳಿದ್ದರು.ನನ್ನ ಡಿಎನ್ಎ ತೆಲಂಗಾಣ. ಕೆಸಿಆರ್ ಡಿಎನ್ ಎ ಬಿಹಾರದ್ದು. ಅವರು ಬಿಹಾರದವರು. ಕೆಸಿಆರ್ ಅವರ ಜಾತಿ ಕುರ್ಮಿ. ಅವರು ಬಿಹಾರದಿಂದ ವಿಜಯನಗರಕ್ಕೆ ಮತ್ತು ಅಲ್ಲಿಂದ ತೆಲಂಗಾಣಕ್ಕೆ ವಲಸೆ ಬಂದರು. ಬಿಹಾರದ ಡಿಎನ್‌ಎಗಿಂತ ತೆಲಂಗಾಣ ಡಿಎನ್‌ಎ ಉತ್ತಮವಾಗಿದೆ ಎಂದಿದ್ದರು ರೆಡ್ಡಿ. ಕಾಂಗ್ರೆಸ್ ಮತ್ತು ಬಿಹಾರದ ಆಡಳಿತ ಪಕ್ಷಗಳು ವಿರೋಧ ಪಕ್ಷದ ಬ್ಲಾಕ್ ಇಂಡಿಯಾದ ಸದಸ್ಯರಾಗಿದ್ದಾರೆ.

ಜೆಡಿಯು ನಾಯಕ ನೀರಜ್ ಕುಮಾರ್ ಅವರು ಆಜ್ ತಕ್‌ಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರ ಡಿಎನ್‌ಎ ಬಗ್ಗೆ ಟೀಕಿಸಿದ್ದರು,ಇದರಿಂದಾಗಿ 2015 ರಲ್ಲಿ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಸೋತಿತ್ತು ಎಂದಿದ್ದಾರೆ

“ತೆಲಂಗಾಣ ಡಿಎನ್‌ಎ, ಬಿಹಾರ ಡಿಎನ್‌ಎ ಎಂಬುದೇ ಇಲ್ಲ. ಅದು ಹಿಂದೂಸ್ತಾನದ ಡಿಎನ್‌ಎ. ತೆಲಂಗಾಣ ನಾಯಕ ಈ ರೀತಿ ಹೇಳಿರುವುದು ದುರದೃಷ್ಟಕರ. ಇಂತಹ ಹೇಳಿಕೆಗಳಿಂದ ಇಂಡಿಯಾ ಮೈತ್ರಿ ಗಟ್ಟಿಯಾಗುತ್ತದೆ ಎಂದು ಅವರು ಏನು ಭಾವಿಸುತ್ತಾರೆಯೇ ಎಂದು ಕುಮಾರ್ ಕೇಳಿದ್ದಾರೆ.

ಬಿಜೆಪಿ ಕೂಡ ರೇವಂತ್ ರೆಡ್ಡಿ ಅವರ ಹೇಳಿಕೆಯನ್ನು ನ್ನು ಟೀಕಿಸಿದೆ. ಕಾಂಗ್ರೆಸ್ ಮತ್ತು ವಿರೋಧ ಪಕ್ಷದ ಇಂಡಿಯಾ ಬ್ಲಾಕ್ ನ ಇತರ ಸದಸ್ಯರು ಅವರ ಹೇಳಿಕೆಯನ್ನು ಖಂಡಿಸಬೇಕು ಮತ್ತು ಕ್ಷಮೆಯಾಚಿಸಲು ಹೇಳಬೇಕೆಂದು ಬಿಜೆಪಿ ಒತ್ತಾಯಿಸಿದೆ. ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಅವರು ರೆಡ್ಡಿ ಅವರ ಹೇಳಿಕೆಯನ್ನು “ತುಂಬಾ ನಾಚಿಕೆಗೇಡಿನ, ವಿಭಜಕ ಮತ್ತು ದುರಹಂಕಾರದಿಂದ ಕೂಡಿದ್ದು ಎಂದು ಹೇಳಿದ್ದಾರೆ. ಅವರು ದೇಶವನ್ನು ಒಡೆಯಲು ಬಯಸುತ್ತಾರೆಯೇ? ಇಲ್ಲಿಯ ದೊಡ್ಡ ಪ್ರಶ್ನೆಯೆಂದರೆ ಇಂಡಿಯಾ ಮೈತ್ರಿಕೂಟದ ಸದಸ್ಯರು ಏಕೆ ಮೌನವಾಗಿದ್ದಾರೆ. ನಿತೀಶ್ ಕುಮಾರ್ ಇಲ್ಲಿಯವರೆಗೆ ( ರೆಡ್ಡಿಯವರ ಟೀಕೆಗಳ ಬಗ್ಗೆ) ಏನನ್ನೂ ಹೇಳಿಲ್ಲವೇ? ಬಿಹಾರದ ಕಾಂಗ್ರೆಸ್ ಸದಸ್ಯರು ಏನು ಮಾಡುತ್ತಿದ್ದಾರೆ ಎಂದು ರವಿಶಂಕರ್ ಪ್ರಸಾದ್ ಕೇಳಿದ್ದಾರೆ.

ಬಿಜೆಪಿ ಸಂಸದ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಕೂಡ ರೆಡ್ಡಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಇಂಡಿಯಾ ಮೈತ್ರಿಕೂಟದ ಸದಸ್ಯರು ಹಿಂದೂ ಧರ್ಮ ಮತ್ತು ಸನಾತನ ಧರ್ಮವನ್ನು ಅವಮಾನಿಸುತ್ತಲೇ ಇದ್ದಾರೆ. ಈಗ ಅವರು ‘ಬಿಹಾರ ಡಿಎನ್‌ಎ’ಗೆ ಬಂದಿದ್ದಾರೆ. ‘ಬಿಹಾರ ಡಿಎನ್‌ಎ’ಗಿಂತ ‘ತೆಲಂಗಾಣ ಡಿಎನ್‌ಎ’ ಉತ್ತಮ ಎಂದು ಹೇಳಿ ಬೇರೆ ರಾಜ್ಯದ ಜನರ ವಿರುದ್ಧ ಇಂತಹ ಕಾಮೆಂಟ್‌ಗಳನ್ನು ಮಾಡುವುದು ಸೂಕ್ತವೇ? ಎಂದು ಕೇಳಿದ್ದಾರೆ.

ಇದನ್ನೂ ಓದಿ: ತೆಲಂಗಾಣದ ಬಹುತೇಕ ಶಾಸಕರು ಕೋಟ್ಯಾಧೀಶ್ವರರು, ಕ್ರಿಮಿನಲ್ ಪ್ರಕರಣಗಳೂ ಧಾರಾಳ, 40 ಶಾಸಕರು ಪಿಯುಸಿ ವರೆಗೂ ಓದಿದ್ದಾರೆ!

ಬೆಂಬಲಿಗರಿಂದ “ಟೈಗರ್ ರೇವಂತ್” ಎಂದು ಕರೆಯಲ್ಪಡುವ ರೆಡ್ಡಿ, ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಾಜಿ ಟಿಡಿಪಿ ನಾಯಕ, ರೆಡ್ಡಿ 2017 ರಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ್ದರು.. ಅವರನ್ನು 2021 ರಲ್ಲಿ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.

ಕಳೆದ ಎರಡು ವರ್ಷಗಳಲ್ಲಿ, ರೆಡ್ಡಿ ಕೆಸಿಆರ್ ನೇತೃತ್ವದ ಸರ್ಕಾರದ ವಿರುದ್ಧ ಉತ್ಸಾಹಭರಿತ ಅಭಿಯಾನವನ್ನು ನಡೆಸಿದ್ದು, ಸಮಸ್ಯೆಗಳ ಕುರಿತು ಬೀದಿ ಪ್ರತಿಭಟನೆಗಳು ಮತ್ತು ಸಾರ್ವಜನಿಕ ಪ್ರದರ್ಶನಗಳನ್ನು ಮುನ್ನಡೆಸಿದರು. ಕಾಂಗ್ರೆಸ್‌ನ ಪ್ರಯತ್ನಗಳು ಫಲ ನೀಡಿತು. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಿಆರ್‌ಎಸ್ ಅನ್ನು ಸೋಲಿಸಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್
ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್
ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ
ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ
ಅಧಿಕಾರದಲ್ಲಿ ಉಳಿಯಲು ಸಿದ್ದರಾಮಯ್ಯ ವ್ಯರ್ಥ ಪ್ರಯತ್ನ ನಡೆಸಿದ್ದಾರೆ: ಕೃಷ್ಣ
ಅಧಿಕಾರದಲ್ಲಿ ಉಳಿಯಲು ಸಿದ್ದರಾಮಯ್ಯ ವ್ಯರ್ಥ ಪ್ರಯತ್ನ ನಡೆಸಿದ್ದಾರೆ: ಕೃಷ್ಣ
ವೇದಿಕೆ ಮೇಲಿದ್ದ ಸಿಲಿಂಡರ್​ಗೆ ಹಣೆಹಚ್ಚಿ ನಮಸ್ಕರಿಸಿದ ಶಿವಕುಮಾರ್
ವೇದಿಕೆ ಮೇಲಿದ್ದ ಸಿಲಿಂಡರ್​ಗೆ ಹಣೆಹಚ್ಚಿ ನಮಸ್ಕರಿಸಿದ ಶಿವಕುಮಾರ್
ನಗರದಲ್ಲೆಲ್ಲ ವಿಜಯೇಂದ್ರ ಹೋರ್ಡಿಂಗ್ ಮತ್ತು ಬ್ಯಾನರ್​ಗಳು
ನಗರದಲ್ಲೆಲ್ಲ ವಿಜಯೇಂದ್ರ ಹೋರ್ಡಿಂಗ್ ಮತ್ತು ಬ್ಯಾನರ್​ಗಳು
VIDEO: ನೋಡ್ಕೊ ಗುರು... ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!
VIDEO: ನೋಡ್ಕೊ ಗುರು... ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?