ತೆಲಂಗಾಣದ ಬಹುತೇಕ ಶಾಸಕರು ಕೋಟ್ಯಾಧೀಶ್ವರರು, ಕ್ರಿಮಿನಲ್ ಪ್ರಕರಣಗಳೂ ಧಾರಾಳ, 40 ಶಾಸಕರು ಪಿಯುಸಿ ವರೆಗೂ ಓದಿದ್ದಾರೆ!

ಚೆನ್ನೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕ ಗಡ್ಡಂ ವಿವೇಕಾನಂದ ಅವರು ಅತಿ ಹೆಚ್ಚು ಆಸ್ತಿ ಹೊಂದಿದ್ದು ಅದರ ಮೌಲ್ಯ 606 ಕೋಟಿ ರೂ ಇದೆಯಂತೆ. ಇನ್ನು, ಗೆದ್ದವರ ಶೈಕ್ಷಣಿಕ ಮಟ್ಟಕ್ಕೆ ಸಂಬಂಧಿಸಿದಂತೆ 40 ಶಾಸಕರು 5 ರಿಂದ 12 ನೇ ತರಗತಿವರೆಗೆ ಓದಿದ್ದಾರೆ, 72 ಶಾಸಕರು ಪದವಿ ಪೂರ್ಣಗೊಳಿಸಿದ್ದಾರೆ ಎಂದು ವರದಿಯಾಗಿದೆ.

ತೆಲಂಗಾಣದ ಬಹುತೇಕ ಶಾಸಕರು ಕೋಟ್ಯಾಧೀಶ್ವರರು, ಕ್ರಿಮಿನಲ್ ಪ್ರಕರಣಗಳೂ ಧಾರಾಳ, 40 ಶಾಸಕರು ಪಿಯುಸಿ ವರೆಗೂ ಓದಿದ್ದಾರೆ!
ತೆಲಂಗಾಣದ ಬಹುತೇಕ ಶಾಸಕರು ಕೋಟ್ಯಾಧೀಶ್ವರರು, ಕ್ರಿಮಿನಲ್ ಪ್ರಕರಣಗಳೂ ಧಾರಾಳ
Follow us
ಸಾಧು ಶ್ರೀನಾಥ್​
|

Updated on: Dec 08, 2023 | 9:49 AM

ತೆಲಂಗಾಣದಲ್ಲಿ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ 119 ಶಾಸಕರ (119 Telangana MLAs) ಪೈಕಿ 82 ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು (Criminal Cases) ಹೊಂದಿದ್ದಾರೆ ಎಂದು ಸ್ವಯಂ ಘೋಷಣೆ ಮಾಡಿಕೊಂಡಿರುವುದಾಗಿ ತೆಲಂಗಾಣ ವಾಚ್ ವರದಿ ಬಿಡುಗಡೆ ಮಾಡಿದೆ. ಈ ಲೆಕ್ಕಾಚಾರದ ಪ್ರಕಾರ ಶೇಕಡಾ 69 ರಷ್ಟು ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. 2018ರಲ್ಲಿ 119 ಶಾಸಕರ ಪೈಕಿ 73 ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿದ್ದರೆ, ಈ ಬಾರಿ 82ಕ್ಕೆ ಏರಿಕೆಯಾಗಿದೆ.

ಒಬ್ಬ ಶಾಸಕ ಅಂತೂ ತನ್ನ ವಿರುದ್ಧ ಕೊಲೆ ಪ್ರಕರಣ (ಐಪಿಸಿ ಸೆಕ್ಷನ್ 302) ಇದೆ ಎಂದು ತಿಳಿಸಿದ್ದಾರೆ. ಇನ್ನು 7 ಶಾಸಕರ ವಿರುದ್ಧ ಕೊಲೆ ಯತ್ನ (ಐಪಿಸಿ ಸೆಕ್ಷನ್ 307) ಪ್ರಕರಣಗಳು ಇರುವುದೂ ಬಹಿರಂಗವಾಗಿದೆ. ಇನ್ನು ಇಬ್ಬರು ಶಾಸಕರು ತಮ್ಮ ವಿರುದ್ಧ ಮಹಿಳೆಯರ ಮೇಲಿನ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಹೊಂದಿದ್ದಾರೆ ಎಂದು ವರದಿ ಹೇಳಿದೆ. ಈ ವರದಿಯ ಪ್ರಕಾರ ಕಾಂಗ್ರೆಸ್ ಪಕ್ಷದಲ್ಲಿ ಗೆದ್ದಿರುವ 64 ಶಾಸಕರ ಪೈಕಿ 51 ಮಂದಿ ವಿರುದ್ಧ ಕ್ರಿಮಿನಲ್ ಕೇಸ್ ಇರುವುದು ಬಹಿರಂಗವಾಗಿದೆ. ಅಂದರೆ ಶೇಕಡ 80ರಷ್ಟು ಜನರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ.

ಏತನ್ಮಧ್ಯೆ, ಪ್ರಮುಖ ವಿರೋಧ ಪಕ್ಷವಾದ ಬಿಆರ್‌ಎಸ್‌ನ 39 ಶಾಸಕರು, ಬಿಜೆಪಿಯ ಏಳು ಶಾಸಕರು, ಸಿಪಿಐ ಪಕ್ಷದ ಒಬ್ಬರು ಮತ್ತು ಎಂಐಎಂ ಪಕ್ಷದ ನಾಲ್ವರು ಶಾಸಕರು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಚುನಾವಣಾ ಅಫಿಡವಿಟ್‌ನಲ್ಲಿ ಸ್ವತಃ ಘೋಷಿಸಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಪಕ್ಷದ 31 ಮಂದಿ, ಬಿಆರ್‌ಎಸ್‌ನ 17 ಮಂದಿ, ಬಿಜೆಪಿಯ 7 ಮಂದಿ, ಸಿಪಿಐನ ಒಬ್ಬರು ಶಾಸಕ, ಎಂಐಎಂ ಪಕ್ಷದ ಮೂವರು ಶಾಸಕರು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ ಎಂದು ಅಫಿಡವಿಟ್ ಸಲ್ಲಿಸಿದ್ದಾರೆ. ಏತನ್ಮಧ್ಯೆ, ಒಟ್ಟು 119 ಶಾಸಕರ ಪೈಕಿ 114 ಜನರು ಅಂದರೆ ಶೇಕಡಾ 96 ರಷ್ಟು ತಮ್ಮ ಬಳಿ ಕೋಟ್ಯಂತರ ರೂಪಾಯಿ ಇದೆ ಎಂದು ತಿಳಿಸಿರುವುದಾಗಿ ವರದಿಯಲ್ಲಿ ಉಲ್ಲೆಖವಾಗಿದೆ.

ಇದನ್ನೂ ಓದಿ: LIVE | Revanth Reddy Swearing-In: ತೆಲಂಗಾಣ 2ನೆ ಮುಖ್ಯಮಂತ್ರಿಯಾಗಿ ರೇವಂತ್​ ರೆಡ್ಡಿ ಪ್ರಮಾಣ ವಚನ 

ಕಾಂಗ್ರೆಸ್ ಪಕ್ಷದ 60 ಶಾಸಕರು, ಬಿಆರ್‌ಎಸ್‌ನ 38 ಶಾಸಕರು, ಬಿಜೆಪಿಯ 8 ಶಾಸಕರು, ಸಿಪಿಐನ 1 ಶಾಸಕ, ಎಂಐಎಂ ಪಕ್ಷದ 7 ಶಾಸಕರು ತಮ್ಮ ಆಸ್ತಿ ಮೌಲ್ಯ ಶತಕೋಟಿಗಿಂತಲೂ ಹೆಚ್ಚಿನದ್ದಾಗಿದೆ ಎಂಬುದು ಬಹಿರಂಗವಾಗಿದೆ. ಕಾಂಗ್ರೆಸ್ ಪಕ್ಷದಿಂದ ಗೆದ್ದ ಶಾಸಕರ ಆಸ್ತಿ ಮೌಲ್ಯ ಕೇವಲ ರೂ. 48.20 ಕೋಟಿ, ಬಿಆರ್‌ಎಸ್ ಪಕ್ಷದ ಮುಖಂಡರು ರೂ. 32.62 ಕೋಟಿ, ಬಿಜೆಪಿ ನಾಯಕರ ಆಸ್ತಿ ರೂ. 21,83 ಕೋಟಿ, ಸಿಪಿಐ ನಾಯಕನ ಆಸ್ತಿ ರೂ. 2.33 ಕೋಟಿ, ಎಂಐಎಂ ನಾಯಕರ ಆಸ್ತಿ ರೂ. 13.19 ಕೋಟಿ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಚೆನ್ನೂರು ವಿಧಾನಸಭಾ ಕ್ಷೇತ್ರದಿಂದ ಗೆದ್ದಿರುವ ಕಾಂಗ್ರೆಸ್ ನಾಯಕ ಗಡ್ಡಂ ವಿವೇಕಾನಂದ ಅವರು ಅತಿ ಹೆಚ್ಚು ಆಸ್ತಿ ಹೊಂದಿದ್ದು ಅದರ ಮೌಲ್ಯ 606 ಕೋಟಿ ರೂ ಇದೆಯಂತೆ. ನಂತರದ ಸ್ಥಾನದಲ್ಲಿ ಪೊಂಗುಲೇಟಿ ಶ್ರೀನಿವಾಸ್ 433 ಕೋಟಿ ರೂ ಇದೆ. ಇನ್ನು ಖೈರತಾಬಾದ್​ ಶಾಸಕ ದಾನಂ ನಾಗೇಂದ್ರ ರೂ. 68 ಕೋಟಿ ಆಸ್ತಿಯಿದೆಯೆಂದು ಎಂದು ಘೋಷಿಸಲಾಗಿದೆ. ಗೆದ್ದವರ ಶೈಕ್ಷಣಿಕ ಮಟ್ಟಕ್ಕೆ ಸಂಬಂಧಿಸಿದಂತೆ 40 ಶಾಸಕರು 5 ರಿಂದ 12 ನೇ ತರಗತಿವರೆಗೆ ಓದಿದ್ದಾರೆ, 72 ಶಾಸಕರು ಪದವಿ ಪೂರ್ಣಗೊಳಿಸಿದ್ದಾರೆ ಎಂದು ವರದಿಯಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ