ಎಐಎಂಐಎಂ ನಾಯಕ ತೆಲಂಗಾಣ ಹಂಗಾಮಿ ಸ್ಪೀಕರ್; ಪ್ರಮಾಣ ವಚನ ಬಹಿಷ್ಕಾರಕ್ಕೆ ಬಿಜೆಪಿ ಕರೆ
ಕಳೆದ ತಿಂಗಳು ನಡೆದ ತೆಲಂಗಾಣ ವಿದಾನಸಭಾ ಚುನಾವಣೆಯಲ್ಲಿ ಬಿಜೆಪಿ ಎಂಟು ಸ್ಥಾನಗಳನ್ನು ಗೆದ್ದಿತ್ತು. ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಜಿ ಕಿಶನ್ ರೆಡ್ಡಿ ಮಾತನಾಡಿ, ಹಿರಿಯ ಶಾಸಕರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸುವ ಸಂಪ್ರದಾಯಕ್ಕೆ ವಿರುದ್ಧವಾದ ಓವೈಸಿ ನೇಮಕವನ್ನು ಬಿಜೆಪಿ ವಿರೋಧಿಸುತ್ತದೆ ಎಂದು ಹೇಳಿದರು.
ಹೈದರಾಬಾದ್ ಡಿಸೆಂಬರ್ 09: ಎಐಎಂಐಎಂನ (AIMIM) ಅಕ್ಬರುದ್ದೀನ್ ಓವೈಸಿ (Akbaruddin Owaisi) ಅವರನ್ನು ರಾಜ್ಯ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ನೇಮಿಸಿರುವುದನ್ನು ವಿರೋಧಿಸಿ ತೆಲಂಗಾಣ ಬಿಜೆಪಿ(Telangana BJP) ಇಂದು ನೂತನವಾಗಿ ಆಯ್ಕೆಯಾದ ಶಾಸಕರ ಪ್ರಮಾಣ ವಚನ ಸಮಾರಂಭವನ್ನು ಬಹಿಷ್ಕರಿಸಿದೆ. ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸುವ ಜವಾಬ್ದಾರಿಯನ್ನು ಹಂಗಾಮಿ ಸ್ಪೀಕರ್‌ಗೆ ವಹಿಸಲಾಗಿದೆ.
ಕಳೆದ ತಿಂಗಳ ವಿಧಾನಸಭಾ ಚುನಾವಣೆಯಲ್ಲಿ ಗೋಶಾಮಹಲ್‌ನಿಂದ ಗೆದ್ದಿದ್ದ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಅವರು ಎಐಎಂಐಎಂ ಮುಂದೆ ಬದುಕಿರುವವರೆಗೂಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂದು ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ಪೂರ್ಣಾವಧಿ ಸ್ಪೀಕರ್ ನೇಮಕವಾದ ಬಳಿಕವಷ್ಟೇ ಪ್ರಮಾಣ ವಚನ ಸ್ವೀಕರಿಸುವುದಾಗಿ ಅವರು ಹೇಳಿದರು. ಈ ಹಿಂದೆ ಹಿಂದೂ ವಿರೋಧಿ ಹೇಳಿಕೆ ನೀಡಿದ ವ್ಯಕ್ತಿಯ (ಅಕ್ಬರುದ್ದೀನ್ ಓವೈಸಿ) ಮುಂದೆ ನಾನು ಪ್ರಮಾಣ ವಚನ ಸ್ವೀಕರಿಸಬಹುದೇ ಎಂದು ಅವರು ಕೇಳಿದ್ದಾರೆ.
Three-time Goshamahal MLA, T Raja Singh- BJP leaders will not take oath if AIMIM leader Akbaruddin Owaisi is made pro-tem speaker.
Akbaruddin Owaisi was appointed pro-tem speaker by the Telangana government in the newly formed state Assembly on Friday, December 8, for the first… pic.twitter.com/eSiJ6eFL7n
— Megh Updates 🚨™ (@MeghUpdates) December 8, 2023
ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಬಿಜೆಪಿ ಎಂಟು ಸ್ಥಾನಗಳನ್ನು ಗೆದ್ದಿತ್ತು. ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಜಿ ಕಿಶನ್ ರೆಡ್ಡಿ ಮಾತನಾಡಿ, ಹಿರಿಯ ಶಾಸಕರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸುವ ಸಂಪ್ರದಾಯಕ್ಕೆ ವಿರುದ್ಧವಾದ ಓವೈಸಿ ನೇಮಕವನ್ನು ಬಿಜೆಪಿ ವಿರೋಧಿಸುತ್ತದೆ ಎಂದು ಹೇಳಿದರು.
ಹಂಗಾಮಿ ಸ್ಪೀಕರ್ ಮೊದಲು ಪ್ರಮಾಣವಚನ ಬಹಿಷ್ಕರಿಸುತ್ತಾರೆ. ಸ್ಪೀಕರ್ ನೇಮಕವಾದ ನಂತರ ನಮ್ಮ ಶಾಸಕರು ಪ್ರಮಾಣ ವಚನ ಸ್ವೀಕರಿಸುತ್ತಾರೆ. ಅಂತಹ ಪಕ್ಷದೊಂದಿಗೆ (ಎಐಎಂಐಎಂ) ನಾವು ಎಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಈ ಬಗ್ಗೆ ನಾವು ರಾಜ್ಯಪಾಲರ ಬಳಿಗೆ ಹೋಗುತ್ತೇವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
#WATCH | AIMIM MLA Akbaruddin Owaisi takes oath as Pro-tem Speaker of Telangana Legislative Assembly, in Raj Bhawan, Hyderabad pic.twitter.com/PpMoZhOvjy
— ANI (@ANI) December 9, 2023
ರಾಜಾ ಸಿಂಗ್ ಅವರು 2018 ರಲ್ಲೂ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿದ್ದರು ಏಕೆಂದರೆ ಆಗ ನೇಮಕಗೊಂಡ ಹಂಗಾಮಿ ಸ್ಪೀಕರ್ ಕೂಡ ಎಐಎಂಐಎಂನವರೇ ಆಗಿದ್ದರು. ಓವೈಸಿ ಅವರು ಶನಿವಾರ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕರಿಸಿ ನಂತರ ಇಂದು ಚುನಾಯಿತ ಶಾಸಕರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿರುವ ಕಾಂಗ್ರೆಸ್‌ನ ರೇವಂತ್ ರೆಡ್ಡಿ ಅವರು ತಮ್ಮ ಹಿಂದಿನ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರಂತೆ ಎಐಎಂಐಎಂಗೆ ಹೆದರುತ್ತಾರೆ ಮತ್ತು ಹೀಗಾಗಿ ಓವೈಸಿ ಅವರನ್ನು ಹಂಗಾಮಿ ಸ್ಪೀಕರ್ ಆಗಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಸಿಂಗ್ ಆರೋಪಿಸಿದ್ದಾರೆ.
ಇದನ್ನೂ ಓದಿ: ತೆಲಂಗಾಣ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ:ಮಹಾಲಕ್ಷ್ಮಿ ಯೋಜನೆಗೆ ಅಧಿಕೃತ ಚಾಲನೆ
ಶಿಷ್ಟಾಚಾರದ ಪ್ರಕಾರ ವಿಧಾನಸಭೆಯಲ್ಲಿ ಹಿರಿಯ ಶಾಸಕರನ್ನು ಹಂಗಾಮಿ ಸ್ಪೀಕರ್ ಮಾಡಲಾಗಿದೆ. ಓವೈಸಿ ಅವರು ಆರನೇ ಬಾರಿಗೆ ಚಂದ್ರಾಯನಗುಟ್ಟಾ ಕ್ಷೇತ್ರದಿಂದ ವಿಧಾನಸಭೆಗೆ (ಸಂಯುಕ್ತ ಆಂಧ್ರ ವಿಧಾನಸಭೆ ಸೇರಿದಂತೆ) ಆಯ್ಕೆಯಾದರು. ಆದಾಗ್ಯೂ, ಹಂಗಾಮಿ ಸ್ಪೀಕರ್ ಸ್ಥಾನಕ್ಕೆ ಅರ್ಹ ಅನೇಕ ಹಿರಿಯ ಶಾಸಕರಿದ್ದಾರೆ, ಆದರೆ ಹೊಸ ಮುಖ್ಯಮಂತ್ರಿ ಅಲ್ಪಸಂಖ್ಯಾತರು ಮತ್ತು ಎಐಎಂಐಎಂ ನಾಯಕರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ