
ಝಾನ್ಸಿ, ಆಗಸ್ಟ್ 22: ಕೆಲ ದಿನಗಳ ಹಿಂದೆ ಉತ್ತರ ಪ್ರದೇಶ(Uttar Pradesh)ದ ಝಾನ್ಸಿಯಲ್ಲಿ ಮಹಿಳೆಯೊಬ್ಬರ ರುಂಡವಿಲ್ಲದ ಶವ ಪತ್ತೆಯಾಗಿತ್ತು. 35 ವರ್ಷದ ರಚನಾ ಯಾದವ್ ಅವರನ್ನು ಆಕೆಯ ಪ್ರಿಯಕರ, ಗ್ರಾಮದ ಮಾಜಿ ಮುಖ್ಯಸ್ಥ ಸಂಜಯ್ ಪಟೇಲ್ ತನ್ನ ಸಂಬಂಧಿ ಸಹಾಯದಿಂದ ಕೊಲೆ(Murder) ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ರಚನಾ ತನ್ನನ್ನು ಮದುವೆಯಾಗುವಂತೆ ಸಂಜಯ್ ಮೇಲೆ ಒತ್ತಡ ಹೇರುತ್ತಿದ್ದಳು, ಆದರೆ ಈಗಾಗಲೇ ವಿವಾಹಿತನಾಗಿದ್ದ ಸಂಜಯ್ ಇಬ್ಬರು ಮಕ್ಕಳಿದ್ದರು, ಹಾಗಾಗಿ ಆತ ಮದುವೆಯಾಗಲು ನಿರಾಕರಿಸಿದ್ದ.
ಆಗಸ್ಟ್ 9 ರಂದು, ಸಂಜಯ್ ತನ್ನ ಸಂಬಂಧಿ ಸಂದೀಪ್ ಪಟೇಲ್ ಮತ್ತು ಸ್ನೇಹಿತ ಪ್ರದೀಪ್ ಅಲಿಯಾಸ್ ದೀಪಕ್ ಅಹಿರ್ವಾರ್ ರಚನಾಳ ಕತ್ತು ಹಿಸುಕಿ, ಆಕೆಯ ದೇಹವನ್ನು ಏಳು ತುಂಡುಗಳಾಗಿ ಕತ್ತರಿಸಿ, ಚೀಲಗಳಲ್ಲಿ ಹಾಕಿ ಬಾವಿಗೆ ಎಸೆದರು. ಗುರುತು ಸಿಗದಂತೆ ತಲೆ ಮತ್ತು ಕಾಲುಗಳನ್ನು ಲಖೇರಿ ನದಿಗೆ ಎಸೆಯಲಾಗಿತ್ತು.
ಆಗಸ್ಟ್ 13 ರಂದು ಕೊಳೆತ ಶವ ಪತ್ತೆಯಾಗಿತ್ತು. ಪೊಲೀಸರು ಬಾವಿಯಿಂದ ಸಂಪೂರ್ಣ ಖಾಲಿ ಮಾಡಿಸಿದರೂ ರುಂಡ ಎಲ್ಲಿಯೂ ಸಿಗಲಿಲ್ಲ. ನಾವು ದೇಹದ ಎಲ್ಲಾ ಭಾಗಗಳನ್ನು ವಶಪಡಿಸಿಕೊಂಡಿದ್ದೇವೆ ಮತ್ತು ಮೂರನೇ ಆರೋಪಿಗಾಗಿ ಹುಡುಕಾಟ ನಡೆಸುತ್ತಿರುವಾಗ ಇಬ್ಬರನ್ನು ಬಂಧಿಸಿದ್ದೇವೆ. ಪೊಲೀಸ್ ತಂಡಕ್ಕೆ ಝಾನ್ಸಿ ವಲಯದ ಡಿಐಜಿ ಕೇಶವ್ ಚೌಧರಿ ಅವರು 50,000 ರೂ. ನಗದು ಬಹುಮಾನ ನೀಡಿದ್ದಾರೆ ಎಂದು ಎಸ್‌ಎಸ್‌ಪಿ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಗ್ರಾಮಸ್ಥರು ಅದು ರಚನಾ ಎಂದು ಶಂಕಿಸಿ ಮಧ್ಯಪ್ರದೇಶದ ಟಿಕಮ್‌ಗಢದ ಆಕೆಯ ಸಹೋದರ ದೀಪಕ್ ಯಾದವ್‌ಗೆ ಮಾಹಿತಿ ನೀಡಿದರು. ಫೋನ್ ದಾಖಲೆಗಳಲ್ಲಿ ಸಂಜಯ್ ಜೊತೆ ಪದೇ ಪದೇ ಮಾತನಾಡಿರುವುದು ಕಂಡುಬಂದಿದೆ. ತಡರಾತ್ರಿ ಆತನ ಮನೆಯ ಮೇಲೆ ದಾಳಿ ನಡೆಸಿದ ನಂತರ ಆತ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಮತ್ತಷ್ಟು ಓದಿ: ದೆಹಲಿಯಲ್ಲಿ ತ್ರಿವಳಿ ಕೊಲೆ; ಅಪ್ಪ, ಅಮ್ಮ, ತಮ್ಮನನ್ನು ಕೊಂದು ಯುವಕ ಪರಾರಿ
ಮಾಲ್ವಾರ ಗ್ರಾಮದ ನಿವಾಸಿಯಾದ ರಚನಾ, ಈ ಹಿಂದೆ ಎರಡು ಬಾರಿ ವಿವಾಹವಾಗಿದ್ದಳು ಮತ್ತು ಮೊದಲ ಮದುವೆಯಿಂದ ಇಬ್ಬರು ಮಕ್ಕಳನ್ನು ಹೊಂದಿದ್ದಳು. ಎರಡನೇ ಗಂಡನನ್ನು ತೊರೆದ ನಂತರ, ಅವರು ಮಹೇಬಾದ ಶಿವರಾಜ್ ಯಾದವ್ ಅವರೊಂದಿಗೆ ವಾಸವಿದ್ದಳು ಪೊಲೀಸರು ಸಂಜಯ್ ಮತ್ತು ಸಂದೀಪ್ ಅವರನ್ನು ಬಂಧಿಸಿದ್ದಾರೆ, ಆದರೆ ಪ್ರದೀಪ್ ಇನ್ನೂ ತಲೆಮರೆಸಿಕೊಂಡಿದ್ದಾನೆ. ಪ್ರದೀಪ್ ನನ್ನು ಹಿಡಿದುಕೊಟ್ಟವರಿಗೆ ಎಸ್ಎಸ್ಪಿ ಮೂರ್ತಿ 25,000 ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಏಳು ದಿನಗಳಲ್ಲಿ ಪ್ರಕರಣವನ್ನು ಭೇದಿಸಿದ್ದಕ್ಕಾಗಿ ಡಿಐಜಿ ಕೇಶವ್ ಚೌಧರಿ 50,000 ರೂ., ಎಸ್ಪಿ ಆರ್ಎ ಡಾ. ಅರವಿಂದ್ ಕುಮಾರ್ 20,000 ರೂ. ಮತ್ತು ಎಸ್ಎಸ್ಪಿ ಮೂರ್ತಿ 20,000 ರೂ.ಗಳನ್ನು ಪೊಲೀಸ್ ತಂಡಕ್ಕೆ ನೀಡಿದರು. ತಂಡದಲ್ಲಿ ತೋಡಿ ಫತೇಪುರ್ ಪೊಲೀಸ್ ಠಾಣೆಯ ಸ್ವಾಟ್ ಉಸ್ತುವಾರಿ ಜಿತೇಂದ್ರ ಟಕ್ಕರ್, ರಜತ್ ಸಿಂಗ್, ಶೈಲೇಂದ್ರ, ಹರ್ಷಿತ್, ದುರ್ಗೇಶ್ ಕುಮಾರ್, ರಜನೀಶ್ ಮತ್ತು ಅತುಲ್ ರಜಪೂತ್ ಇದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ