ಅಹಮದಾಬಾದ್‌ನಲ್ಲಿ 10ನೇ ತರಗತಿ ವಿದ್ಯಾರ್ಥಿಗೆ ಇರಿದು ಕೊಲೆ; ಶಾಲೆಗೆ ನುಗ್ಗಿ ಟಿವಿಗಳನ್ನೆಲ್ಲ ಒಡೆದು ಹಾಕಿದ ಪ್ರತಿಭಟನಾಕಾರರು
ಅಹಮದಾಬಾದ್‌ನ 10ನೇ ತರಗತಿಯ ವಿದ್ಯಾರ್ಥಿಯೊಬ್ಬ ಜೂನಿಯರ್‌ನಿಂದ ಇರಿತಕ್ಕೊಳಗಾದ ಒಂದು ದಿನದ ನಂತರ ಗಾಯಗಳಿಂದಾಗಿ ಸಾವನ್ನಪ್ಪಿದ್ದಾನೆ. ಸಾವಿನ ಸುದ್ದಿ ಪೋಷಕರು ಮತ್ತು ಸ್ಥಳೀಯ ಸಮುದಾಯದಲ್ಲಿ ತೀವ್ರ ಕೋಪವನ್ನು ಹುಟ್ಟುಹಾಕಿದೆ. ಇದು ಶಾಲೆಯ ಹೊರಗೆ ಪ್ರತಿಭಟನೆಗಳಿಗೆ ಕಾರಣವಾಗಿದೆ. ಅಹಮದಾಬಾದ್‌ನ ಖೋಖ್ರಾದ ಸೆವೆಂತ್-ಡೇ ಅಡ್ವೆಂಟಿಸ್ಟ್ ಹೈಯರ್ ಸೆಕೆಂಡರಿ ಶಾಲೆಯ ಆವರಣದ ಹೊರಗೆ ಈ ಘಟನೆ ನಡೆದಿದೆ. ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದ್ದು, ಆರೋಪಿ, ಅಪ್ರಾಪ್ತ ವಯಸ್ಕನನ್ನು ಬಾಲಾಪರಾಧಿ ಕಾಯ್ದೆಯಡಿ ಬಂಧಿಸಲಾಗಿದೆ.
ಅಹಮದಾಬಾದ್, ಆಗಸ್ಟ್ 20: ಗುಜರಾತ್‌ನ ಅಹಮದಾಬಾದ್‌ನಲ್ಲಿರುವ (Ahmedabad) ಸೆವೆಂತ್-ಡೇ ಅಡ್ವೆಂಟಿಸ್ಟ್ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಕಿರಿಯ ವಿದ್ಯಾರ್ಥಿ ಮಾರಕವಾಗಿ ಇರಿದು ಕೊಲೆ (Murder) ಮಾಡಿದ್ದಾನೆ. ಅಹಮದಾಬಾದ್‌ನ ಖೋಖ್ರಾದ ಸೆವೆಂತ್-ಡೇ ಅಡ್ವೆಂಟಿಸ್ಟ್ ಹೈಯರ್ ಸೆಕೆಂಡರಿ ಶಾಲೆಯ ಆವರಣದಲ್ಲಿ ಈ ಘಟನೆ ನಡೆದಿದೆ. ಈ ಭಯಾನಕ ಘಟನೆ ಪೋಷಕರು ಮತ್ತು ಹಿಂದೂ ಸಮುದಾಯದವರ ಆಕ್ರೋಶಕ್ಕೆ ಕಾರಣವಾಗಿದೆ. ಆಗಸ್ಟ್ 19ರಂದು ಸಿಂಧಿ ಸಮುದಾಯದ ಬಾಲಕನನ್ನು ಬೇರೆ ಧರ್ಮದ ವಿದ್ಯಾರ್ಥಿ ಇರಿದು ಕೊಂದ ಬಳಿಕ ಇದು ಕೋಮುಗಲಭೆಯ ರೂಪ ಪಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ಆರೋಪಿ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಶಾಲೆಯಲ್ಲೇ ಈ ರೀತಿ ಕೊಲೆ ನಡೆದಿದ್ದರೂ ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಂಡಿಲ್ಲ, ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿಲ್ಲ ಎಂದು ಆರೋಪಿಸಿ ಪ್ರತಿಭಟನಾಕಾರರು ಶಾಲೆಗೆ ನುಗ್ಗಿ ಮೇಜು, ಟಿವಿ ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

