ಕೊಲ್ಕತ್ತಾ: ಶಾಲಾ ಶಿಕ್ಷಕರ ನೇಮಕಾತಿ ಹಗರಣದ ಆರೋಪಿ ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ (Partha Chatterjee) ಅವರ ಆಪ್ತೆ ಅರ್ಪಿತಾ ಮುಖರ್ಜಿ (Arpita Mukherjee) ಅವರ ಹೆಸರಲ್ಲಿ 31 ಎಲ್ಐಸಿ (LIC) ಪಾಲಿಸಿ ಇದೆ. ಈ ಪಾಲಿಸಿಗಳ ನಾಮಿನಿ ಪಾರ್ಥ ಚಟರ್ಜಿ ಆಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಅರ್ಪಿತಾ ಮತ್ತು ಪಾರ್ಥ ಚಟರ್ಜಿ 2012 ಜನವರಿ 1ರಂದು ಎಪಿಎ ಯುಟಿಲಿಟಿ ಸರ್ವೀಸಸ್ನಲ್ಲಿ ಪಾಲುದಾರಿಕೆ ಹೊಂದಿದ್ದಾರೆ. ಆರೋಪಿಗಳ ಈ ಪಾಲುದಾರಿಕೆಯ ಸಂಸ್ಥೆಯ ಹೆಸರಿಗೆ ಆಸ್ತಿಯನ್ನು ತರಲಾಗಿತ್ತು ಎಂಬುದು ಇಡಿ ತನಿಖೆಯಿಂದ ತಿಳಿದುಬಂದಿದೆ. ಕೆಲವು ಆಸ್ತಿಗಳನ್ನು ಆರೋಪಿಗಳು ನಗದು ಕೊಟ್ಟು ಖರೀದಿಸಿದ್ದಾರೆ. ಇದಕ್ಕಾಗಿ ಬಳಸಿದ ಹಣದ ಮೂಲ ಯಾವುದು ಎಂಬುದನ್ನು ಪತ್ತೆ ಹಚ್ಚಲಾಗುವುದು ಎಂದು ತನಿಖಾ ಸಂಸ್ಥೆ ಹೇಳಿದೆ.
ಆರೋಪಿಗಳ ಈ ಪಾಲುದಾರಿಕೆಯ ಸಂಸ್ಥೆಯ ಹೆಸರಿಗೆ ಆಸ್ತಿಯನ್ನು ತರಲಾಗಿತ್ತು ಎಂಬುದು ಇಡಿ ತನಿಖೆಯಿಂದ ತಿಳಿದುಬಂದಿದೆ. ಕೆಲವು ಆಸ್ತಿಗಳನ್ನು ಆರೋಪಿಗಳು ನಗದು ಕೊಟ್ಟು ಖರೀದಿಸಿದ್ದಾರೆ. ಇದಕ್ಕಾಗಿ ಬಳಸಿದ ಹಣದ ಮೂವ ಯಾವುದು ಎಂಬುದನ್ನು ಪತ್ತೆ ಹಚ್ಚಲಾಗುವುದು ಎಂದು ತನಿಖಾ ಸಂಸ್ಥೆ ಹೇಳಿದೆ.
ಅರ್ಪಿತಾ ಮುಖರ್ಜಿ ಅವರ ಮನೆಯಲ್ಲಿ ಇಡಿ ಶೋಧ ನಡೆಸಿದಾಗ ಎಡಿಎಸ್ಆರ್ ಬೋಲಾಪುರ್ ಕಚೇರಿಯಲ್ಲಿ ನೋಂದಣಿ ಮಾಡಿದ ಒಪ್ಪಂದ ಪತ್ರ ಸಿಕ್ಕಿದೆ. ಈ ದಾಖಲೆಗಳನ್ನು ಇಡಿ ವಶಪಡಿಸಿಕೊಂಡಿದೆ. ಈ ದಾಖಲೆಗಳ ಪ್ರಕಾರ ಇವರಿಬ್ಬರೂ 2012ರಿಂದ ಪಾಲುದಾರರಾಗಿದ್ದಾರೆ. ಕೊಲ್ಕತ್ತಾದ ವಿಶೇಷ ನ್ಯಾಯಾಲಯ ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಅವರನ್ನು ಆಗಸ್ಟ್ 5ರ ವರೆಗೆ ಇಡಿ ವಶಕ್ಕೆ ನೀಡಿದೆ. ಜುಲೈ 22ರಂದು ಇಡಿ ಅರ್ಪಿತಾ ಮುಖರ್ಜಿ ಮನೆ ಮೇಲೆ ದಾಳಿ ನಡೆಸಿ 21.90 ಕೋಟಿ ನಗದು ವಶಪಡಿಸಿತ್ತು. ತನಿಖಾ ಸಂಸ್ಥೆ 56 ಲಕ್ಷ ಮೌಲ್ಯದ ವಿದೇಶಿ ಹಣ ಮತ್ತು 76ಲಕ್ಷ ಮೌಲ್ಯದ ಚಿನ್ನ ವಶಪಡಿಸಿದೆ.
Published On - 6:12 pm, Thu, 4 August 22